Thursday, May 1, 2025

Latest Posts

ದಕ್ಷಿಣ ಕನ್ನಡ ಜಿಲ್ಲೆಯ ಕಡಲ ಕೊರೆತ ಸಭೆ – ಅಧಿಕಾರಿಗಳಿಗೆ ಸ್ವೀಕರ್‌ ಯು.ಟಿ ಖಾದರ್‌ ಅವರಿಂದ ಸಲಹೆ

- Advertisement -

Bengaluru News: ಬೆಂಗಳೂರು: ಮುಂಬರುವ ದಿನ ಮಳೆಗಾಲದಲ್ಲಿ ಕಡಲ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸ್ವೀಕರ್‌ ಯು.ಟಿ ಖಾದರ್‌ ಅವರು ಸಲಹೆ ನೀಡಿದ್ದಾರೆ.

ನಗರದ ವಿಧಾನ ಸೌಧದ ಮೊದಲನೇ ಮಹಡಿಯಲ್ಲಿರುವ ಸಭಾಧ್ಯಕ್ಷರ ಚಹಾ ಕೊಠಡಿಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಕಡಲ ಕೊರೆತಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸ್ವೀಕರ್‌ ಅವರು ಚರ್ಚೆ ನಡೆಸಿದರು.
ಪ್ರತಿ ವರ್ಷ ಜೂನ್‌ – ಜುಲೈ ತಿಂಗಳಲ್ಲಿ ಮಳೆಗಾಲ ಜಾಸ್ತಿಯಾಗುತ್ತಿದ್ದು, ಕಡಲ ತೀರದ ಜನರಿಗೆ ಸಮಸ್ಯೆ ಉಂಟಾಗುತ್ತದೆ. ಈ ಭಾರಿ ಮಳೆಗಾಲ ಬರುವುದಕ್ಕೆ ಮುನ್ನ ಕಡಲ ಕೊರೆತ ಆಗದಂತೆ ಎಚ್ಚರವಹಿಸಬೇಕು. ಜೊತೆಗೆ ಸ್ಥಳೀಯ ಜನರಿಗೆ ಅಧಿಕಾರಿಗಳಿಂದ ಜಾಗೃತಿ ಹಾಗೂ ಧೈರ್ಯ ತುಂಬವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸ್ವೀಕರ್‌ ಅವರು ತಿಳಿಸಿದ್ದಾರೆ.

ಕಡಲ ಕೊರತೆಗೆ ಸಂಬಂಧಿಸಿದಂತೆ ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಅದಷ್ಟು ಬೇಗ ಟೆಂಡರ್‌ ಕರೆದು ಕಡಲ ಕೊರೆತ ಸಮಸ್ಯೆಗೆ ಬಗೆಹರಿಸಬೇಕು ಎಂದರು. ಮಳೆಗಾಲದಲ್ಲಿ ಕಡಲ ಕೊರೆತ ಕ್ರಮತೆಗೆದುಕೊಂಡರೆ ಅದು ಯಶಸ್ವಿಯಾಗುವುದಿಲ್ಲ. ಮಳೆಗಾಲ ಬರುವುದಕ್ಕೂ ಮುನ್ನ ಈ ಬಗ್ಗೆ ಕ್ರಮ ತೆಗೆದುಕೊಂಡು ಮುನ್ನಚ್ಚರಿಕೆ ವಹಿಸಿದರೆ, ಕಡಲ ಕೊರೆತ ಆಗದಂತೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಧಿಕಾರಿಗಳಿಗೆ ಕಿವಿ ಮಾತು ತಿಳಿಸಿದರು.

ಪ್ರತಿ ವರ್ಷ ಮಂಗಳೂರು, ಉಳ್ಳಾಲ, ಮರವಂತಿಕೆ ಬೀಚ್‌ ಗಳಲ್ಲಿ ಕಡಲ ಕೊರೆತ ಜಾಸ್ತಿಯಾಗುತ್ತಿದ್ದು, ಇದಕ್ಕೆ ಅಧಿಕಾರಿಗಳು ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಶಾಶ್ವತ ಕಡಲ ಕೊರೆತ ಆಗದಂತೆ ನೋಡಿಕೊಂಡರೆ ಅದಕ್ಕೆ ಸರ್ಕಾರ ವತಿಯಿಂದ ಏನೇಲ್ಲ ಸಹಾಯ ಬೇಕು ಅದೇಲ್ಲ ಸಹಕಾರ ನೀಡುತ್ತೇನೆ. ಜೊತೆಗೆ ಈ ಬಗ್ಗೆ ಮಂಗಳೂರು, ಉಡುಪಿ, ಕಾರವಾರ ಸೇರಿದಂತೆ ಇನ್ನಿತರ ಬಂದರು ಪ್ರದೇಶಗಳಲ್ಲಿ ಸಭೆ ನಡೆಸಿ, ಅಧಿಕಾರಿಗಳಿಗೆ ಈ ಬಗ್ಗೆ ಎಚ್ಚರವಹಿಸುವಂತೆ ತಿಳಿಸುತ್ತೇನೆ ಎಂದರು.

ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ.ಎನ್. ಮಂಜುಳಾ, ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಚಂದ್ರ ಹೆಚ್.ಸಿ, ಮುಖ್ಯ ಇಂಜಿನಿಯರ್‌ ದಿವಕಾರ್‌, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಅನೇಕ ಅಧಿಕಾರಿಗಳು ಭಾಗವಹಿಸಿದರು.

3 ಜಿಲ್ಲೆಗೆ 200 ಕೋಟಿ
ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಮುದ್ರ ಕಡಲ ಕೊರೆತ ತಡೆಗಟ್ಟುವ ಸಂಬಂಧ ಉಡುಪಿ ಜಿಲ್ಲೆಯಿಂದ 115 ಕೋಟಿ ರೂ. ಉತ್ತರ ಕನ್ನಡ ಜಿಲ್ಲೆಗೆ 150 ಕೋಟಿ ರೂ. ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ 125 ಕೋಟಿ ಒಟ್ಟು 390 ಕೋಟಿ ರೂ. ಕ್ರಿಯಾ ಯೋಜನೆ ಸಿದ್ದಪಡಿಸಿ, ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ರಾಜ್ಯ ಸರ್ಕಾರದ 2025-26 ನೇ ಸಾಲಿನ ಅಯವ್ಯಯದಂತೆ 3 ಜಿಲ್ಲೆಗಳಲ್ಲಿ ಒಟ್ಟಾರೆ 200 ಕೋಟಿ ರೂ. ಮಿತಿಗೊಳಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿರುತ್ತದೆ.

- Advertisement -

Latest Posts

Don't Miss