ನಾವಿವತ್ತು ಪ್ರಖ್ಯಾತ ಗಾಯಕ ಸೋನು ನಿಗಮ್ ಅವರ ಸಿನಿ ಜರ್ನಿ, ಲೈಫ್ ಸ್ಟೋರಿಯನ್ನ ಹೇಳಲಿದ್ದೇವೆ.
ಸೋನು ನಿಗಮ್, ಮೊದ ಮೊದಲು ಬಾಲಿವುಡ್‌ನಲ್ಲಿ ತನ್ನದೇ ಛಾಪು ಮೂಡಿಸಿದ ಈ ಗಾಯಕ, ನಂತರ ಎಲ್ಲ ಭಾಷೆಗಳಲ್ಲೂ ಹಾಡು ಹೇಳಿ ಸೈ ಎನ್ನಿಸಿಕೊಂಡರು. ಹಿಂದಿ, ತೆಲಗು, ತಮಿಳು, ಮಲಯಾಳಂ, ಕನ್ನಡ, ಹರಿಯಾಣ್ವಿ, ಮರಾಠಿ, ಬೆಂಗಾಲಿ ಹೀಗೆ ಸುಮಾರು ಭಾಷೆಯ ಹಾಡುಗಳಿಗೆ ಸೋನು ನಿಗಮ್ ಕಂಠದಾನ ಮಾಡಿದ್ದಾರೆ.
ಹರಿಯಾಣಾದ ಫರೀದಾಬಾದ್‌ನಲ್ಲಿ ಜನಿಸಿದ ಸೋನುನಿಗಮ್‌ಗೆ ಚಿಕ್ಕಂದಿನಿಂದಲೇ ಹಾಡು ಹಾಡುವ ಶಾಕ್ ಇತ್ತು. ಅಫ್ಪ ಅಮ್ಮ ಸ್ಟೇಜ್ ಪರ್ಫಾರ್ಮೆನ್ಸ್ ಕೊಡುತ್ತಿದ್ದರೆ, ನಾನೂ ಹಾಡುತ್ತೇನೆಂದು ಬಾಲಕ ಸೋನು ನಿಗಮ್ ಹಠ ಮಾಡಿದ್ದನಂತೆ. ಚಿಕ್ಕ ಮಗು ತನ್ನ ಆಸೆ ಈಡೇರಿಸಿಕೊಳ್ಳಲಿ ಎಂದು ಅವಕಾಶ ಕೊಟ್ರೆ, ಆತ ಕ್ಯಾ ಹುವಾ ತೇರಾ ವಾದಾ ಎಂಬ ಹಾಡನ್ನ ಹಾಡಿ ಎಲ್ಲರನ್ನೂ ಚಕಿತಗೊಳಿಸಿದ್ದ. ಬಾಲಕ ಸೋನು ನಿಗಮ್ ವಿದ್ಯಾಭ್ಯಾಸದಲ್ಲಿ ಮುಂದಿದ್ದರು ಕೂಡ, ಸಂಗೀತದಲ್ಲಿ ಅದಕ್ಕಿಂತ ಮುಂದಿದ್ದರು.
ಹೀಗಾಗಿ ಅವರ ತಂದೆ ತಾಯಿ ಸೋನು ನಿಗಮ್‌ರನ್ನ ಮುಂಬೈಗೆ ಕರೆದುಕೊಂಡು ಬಂದು, ಕೆಲ ಕಾರ್ಯಕ್ರಮಗಳನ್ನ ಕೊಡಿಸಿದರಲ್ಲದೇ, ಸ್ಟುಡಿಯೋಗಳಲ್ಲಿ ಹಾಡುವ ಅವಕಾಶ ಮಾಡಿಕೊಟ್ಟರು. ಆದ್ರೆ ಸೋನು ನಿಗಮ್ ಹಾಡಿದ ಹಾಡನ್ನ ಬೇರೆಯವರು ಡಬ್ ಮಾಡುವ ಕಾರಣಕ್ಕೆ ಸೋನು ಬೇಸರಿಸಿಕೊಳ್ಳುತ್ತಿದ್ದರಂತೆ.
ನಂತರ ಗುಲ್ಶನ್ ಕುಮಾರ್ ಎಂಬುವರಿಗೆ ಸೋನುನಿಗಮ್ ಹಾಡಿದ ಹಾಡು ಇಷ್ಟವಾಗಿ, ಅವರ ಕಂಪನಿಯ ಹಾಡುಗಳನ್ನ ಹಾಡಲು ಸೋನುನಿಗಮ್‌ರಿಗೆ ಅವಕಾಶ ನೀಡಿದರು. ಅಲ್ಲದೇ, ಈತನ ಕಂಠದಲ್ಲಿ ಏನೋ ಜಾದೂ ಇದೆ, ಮುಂದೆ ಈತ ಪ್ರಸಿದ್ಧ ಗಾಯಕನಾಗಿ ಹೊರಹೊಮ್ಮುತ್ತಾನೆ ಎಂಬ ಭವಿಷ್ಯ ಕೂಡಾ ನುಡಿದಿದ್ದರು.
ಅವರ ಮಾತಿನಂತೆ ಸೋನು ನಿಗಮ್ ಭಾರತದಾದ್ಯಂತ ಒಳ್ಳೆಯ ಸಂಗೀತಗಾರನಾಗಿ ಹೊರಹೊಮ್ಮಿದ್ದಾರೆ. ಎಲ್ಲ ಭಾಷೆಗಳಲ್ಲೂ ಹಾಡು ಹೇಳಿದ್ದಾರೆ. ಹಲವು ಸಂಗೀತ ಪ್ರೀಯರ ಫೇವರಿಟ್ ಸಂಗೀತಗಾರ ಕೂಡ ಆಗಿದ್ದಾರೆ.
2002ರಲ್ಲಿ ಮಧುರಿಮಾರನ್ನ ಸೋನು ನಿಗಮ್ ವರಿಸಿದರು. ನಂತರ ಇವರಿಗೆ ಒಂದು ಗಂಡುಮಗುವಾಗಿದ್ದು, ನಿವಾನ್ ನಿಗಮ್ ಎಂದು ಆತನಿಗೆ ನಾಮಕರಣ ಮಾಡಲಾಯಿತು.
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.