ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಆಪರೇಷನ್ ಸಿಂಧೂರ್ ಬಳಿಕ ಭಾರತದ ವಿರುದ್ಧ ಪಾಕಿಸ್ತಾನ ನಡೆಸಿದ ದಾಳಿಗೆ ಭಾರತೀಯ ಸೇನೆಯು ತಕ್ಕ ಪ್ರತ್ತ್ಯುತ್ತರ ನೀಡಲಾಗಿದೆ. ಅಲ್ಲದೆ ಭಾರತದ ಮೇಲೆ ತಾನು ದಾಳಿ ಮಾಡಿದಾಗ ಪಂಜಾಬ್‌ನ ಆದಂಪುರ ಏರ್‌ಬೇಸ್ ನಾಶಗೊಳಿಸಿದ್ದೇವೆ ಎಂದು ಪಾಕ್ ಸುಳ್ಳು ಹೇಳಿತ್ತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರು ಅದೇ ಆದಂಪುರಕ್ಕೆ ಭೇಟಿ ನೀಡಿ ಇಡೀ ದಿನವನ್ನು ವಾಯುಸೇನೆಯ ವೀರ ಯೋಧರೊಂದಿಗೆ ಕಳೆದಿದ್ದಾರೆ. ಈ ಮೂಲಕ ರಣಹೇಡಿ ಪಾಪಿಸ್ತಾನ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವ ಹಾಗೆ ಮಾಡಿದ್ದಾರೆ.
ಇಂದು ಬೆಳಿಗ್ಗೆ ದೆಹಲಿಯಿಂದ ಪಂಜಾಬ್‌ನ ಆದಂಪುರ ವಾಯು ನೆಲೆಗೆ ಭೇಟಿ ನೀಡಿದ್ದ ಮೋದಿ, ಯೋಧರೊಂದಿಗೆ ಆಪರೇಷನ್ ಸಿಂಧೂರ್ ಗೆಲುವಿನ ಸಂಭ್ರಮಾಚರಣೆ ನಡೆಸಿದ್ದಾರೆ. ಅಲ್ಲದೆ ಯೋಧರೊಂದಿಗೆ ಸಂವಾದ ನಡೆಸಿದ್ದಾರೆ, ಬಳಿಕ ಸೇನೆಯನ್ನುದ್ದೇಶಿಸಿ ಮಾತನಾಡಿದ ಅವರು ಪಾಕಿಸ್ತಾನದ ವಿರುದ್ದ ಗುಡುಗಿದ್ದಾರೆ. ನಿನ್ನೆಯಷ್ಟೇ ಪಾಕಿಗಳಿಗೆ ದಿಟ್ಟ ಉತ್ತರ ನೀಡಿದ್ದ ಮೋದಿ,ಇಂದೂ ಸಹ ಅದೇ ಶೈಲಿಯಲ್ಲಿ ಭಯೋತ್ಪಾದನೆಯ ವಿರುದ್ಧ ಅಬ್ಬರಿಸಿದ್ದಾರೆ.
ಇನ್ನೂ ಭಾರತ್ ಮಾತಾ ಕೀ ಜೈ ಈ ಘೋಷಣೆಯ ಶಕ್ತಿಯನ್ನು ಜಗತ್ತು ಇದೀಗಷ್ಟೇ ಕಂಡಿದೆ. “ಭಾರತ್ ಮಾತಾ ಕೀ ಜೈ” ಎಂಬುದು ಕೇವಲ ಒಂದು ಘೋಷಣೆಯಲ್ಲ, ಇದು ಭಾರತ ಮಾತೆಯ ಗೌರವ ಮತ್ತು ಘನತೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಈ ದೇಶದ ಪ್ರತಿಯೊಬ್ಬ ಸೈನಿಕರ ಪ್ರಮಾಣವಚನವಾಗಿದೆ. ಭಾರತ್ ಮಾತಾ ಕೀ ಅನ್ನೋದು ಉದ್ಘೋಷ ಅಷ್ಟೇ ಅಲ್ಲ, ಇದು ದೇಶದ ಪ್ರತಿಯೊಬ್ಬ ಸೈನಿಕರ ಶಪಥವಾಗಿದೆ. ಇಡೀ ದೇಶದ ನಾಗರೀಕರ ಧ್ವನಿಯಾಗಿದೆ. ಭಾರತ್ ಮಾತಾ ಕೀ ಜೈ ಎನ್ನುವ ಈ ತಾಕತ್ತನ್ನು ಇಡೀ ವಿಶ್ವವೇ ನೋಡಿದೆ ಎಂದು ಹೇಳಿದ್ದಾರೆ.
ಭಾರತ್ ಮಾತಾ ಕಿ ಜೈ ಎಂದರೆ ಉಗ್ರರಿಗೆ ನಡುಕ ಶುರುವಾಗಿದೆ..
ಅಣ್ವಸ್ತ್ರ ಬಳಕೆ ಬೆದರಿಕೆಗೆ ಭಾರತ ಎಂದಿಗೂ ಜಗ್ಗುವುದಿಲ್ಲ ನಿಮ್ಮ ಶಕ್ತಿಯಿಂದ ಆಪರೇಷನ್ ಸಿಂಧೂರ್ ಯಶಸ್ವಿಯಾಗಿದೆ ಮೂರು ಸೇನಾಪಡೆಗೆ ನಾನು ಸಲ್ಯೂಟ್ ಮಾಡುತ್ತೇನೆ ನಿಮ್ಮ ದರ್ಶನ ಪಡೆಯುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಆಪರೇಷನ್ ಸಿಂಧೂರ್‌ನಿಂದ ನಾವು ಹೊಸ ಇತಿಹಾಸವನ್ನು ರಚಿಸಿದ್ದೇವೆ. ಭಾರತ್ ಮಾತಾ ಕೀಜೈ ಎಂದರೆ ಉಗ್ರರಿಗೆ ನಡುಕ ಶುರುವಾಗಿದೆ ಎಂದು ತಿಳಿಸಿದ್ದಾರೆ.
ದೇಶದ ಮುಂದಿನ ಪೀಳಿಗೆಗೂ ನೀವು ಪ್ರೇರಣೆಯಾಗಿದ್ದೀರಿ. ಭಾರತ್ ಮಾತಾ ಕೀಜೈ ಎಂಬುದು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿರುವ ಪ್ರತಿಯೊಬ್ಬ ಸೈನಿಕನ ಸಂಕಲ್ಪ. ಇದು ದೇಶಕ್ಕಾಗಿ ಬದುಕಲು ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡಲು ಬಯಸುವ ಪ್ರತಿಯೊಬ್ಬ ನಾಗರಿಕನ ಧ್ವನಿಯಾಗಿದೆ. ನಮ್ಮ ಡ್ರೋನ್‌ಗಳು, ಕ್ಷಿಪಣಿಗಳು ನಮ್ಮ ಶತ್ರುಗಳನ್ನು ಹೊಡೆದಾಗ, ಅವರು ‘ಭಾರತ್ ಮಾತಾ ಕೀ ಜೈ’ ಎಂದು ಕೇಳಿಸಿಕೊಳ್ಳುತ್ತಾರೆ. ಪಾಕಿಸ್ತಾನದಲ್ಲಿ, ಭಯೋತ್ಪಾದಕ ಶಿಬಿರಗಳು ಮತ್ತು ಅವರ ವಾಯುನೆಲೆಗಳು ಮಾತ್ರ ನಾಶವಾಗಲಿಲ್ಲ, ಅವರ ದುಷ್ಟ ಶಕ್ತಿಗಳು ಮತ್ತು ಧೈರ್ಯವನ್ನೂ ಸಹ ಸೋಲಿಸಲಾಗಿದೆ ಎಂದು ಯೋಧರ ಧೈರ್ಯವನ್ನು ಶ್ಲಾಘಿಸಿದ್ದಾರೆ.
ಸಿಂಧೂರ ಅಳಿಸಿದ್ದ ಉಗ್ರರನ್ನು ಸದೆ ಬಡಿದಿದ್ದೇವೆ..
ನೀವೆಲ್ಲರೂ ನಿಮ್ಮ ಗುರಿಯನ್ನು ಪರಿಪೂರ್ಣತೆಯಿಂದ ತಲುಪಿದ್ದೀರಿ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಿಂದ ಶತ್ರುಗಳು ತೀವ್ರವಾಗಿ ನಲುಗಿ ಹೋಗಿದ್ದಾರೆ. ಈ ವಾಯುನೆಲೆ ಮತ್ತು ನಮ್ಮ ಇತರ ಹಲವಾರು ವಾಯುನೆಲೆಗಳ ಮೇಲೆ ದಾಳಿ ಮಾಡಲು ಹಲವು ಬಾರಿ ಪ್ರಯತ್ನಿಸಿದ್ದರು. ನಮ್ಮನ್ನು ಮತ್ತೆ ಮತ್ತೆ ಗುರಿಯಾಗಿಸಿಕೊಂಡರೂ ಸಹ ಪಾಕಿಸ್ತಾನದ ದುಷ್ಟ ಯೋಜನೆಗಳು ಪ್ರತಿ ಬಾರಿಯೂ ವಿಫಲವಾಗಿವೆ. ಉಗ್ರರು ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸಿದರು. ಸಿಂಧೂರ ಅಳಿಸಿದ್ದ ಉಗ್ರರನ್ನು ಸದೆ ಬಡಿದಿದ್ದೇವೆ. ಉಗ್ರರನ್ನು ಭಾರತೀಯ ಸೇನೆ ಮಣ್ಣು ಮುಕ್ಕಿಸಿದೆ. ಭಾರತೀಯ ಸೇನೆ ಉಗ್ರ ಹುಟ್ಟಡಗಿಸಿದೆ, ಉಗ್ರ ಪೋಷಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದೇವೆ. ಉಗ್ರರ ಮಹಾವಿನಾಶ ಇಲ್ಲಿಂದ ಆರಂಭವಾಗಿದೆ. ಭಾರತೀಯ ಸೇನೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ ಪಾಕಿಸ್ತಾನ ನಡುಕ ಹುಟ್ಟಿಸಿದ್ದೇವೆ ಎಂದು ಸೇನೆಯ ಪರಾಕ್ರಮ ಕೊಂಡಾಡಿದ್ದಾರೆ.
ನಮ್ಮ ವೀರ ಯೋಧರು ಎಲ್ಲಿ ಕಾಲಿಡುತ್ತಾರೋ ಅಲ್ಲಿಯ ಪರಾಕ್ರಮ..
ಪಾಕಿಸ್ತಾನಕ್ಕೆ ತಿನ್ನುವುದಕ್ಕೆ ಅನ್ನವಿಲ್ಲ ಆದರೆ ಉಗ್ರರನ್ನು ಪೋಷಿಸುತ್ತಿದೆ. 100ಕ್ಕೂ ಹೆಚ್ಚು ಉಗ್ರರನ್ನು ಸದೆ ಬಡಿದಿದ್ದೇವೆ. ಪಾಕಿಸ್ತಾನದ ಒಳಗೆ ನುಗ್ಗಿ ಭಾರತೀಯ ಸೇನಾಪಡೆ ಉಗ್ರರನ್ನು ಬಲಿ ಪಡೆದಿವೆ. ಡ್ರೋನ್ ಮತ್ತು ಜೆಟ್ ವಿಮಾನಗಳನ್ನು ಹೊಡೆದುರಿಸಿಳಿದ್ದೇವೆ. ನಮ್ಮ ವೀರ ಯೋಧರು ಎಲ್ಲಿ ಕಾಲಿಡುತ್ತಾರೋ ಅಲ್ಲಿಯ ಪರಾಕ್ರಮವನ್ನು ಇಡೀ ವಿಶ್ವವೇ ನೋಡುತ್ತಿದೆ. ವೀರ ಯೋಧರಿಗೆ ನನ್ನ ಸೆಲ್ಯೂಟ್. ಭಾರತವನ್ನು ಕೆಣಕಿದರೆ ಯಾರಿಗೂ ಉಳಿಗಾಲವಿಲ್ಲ. ಪಾಕಿಸ್ತಾನ ಉಗ್ರರನ್ನು ಪೋಷಣೆ ಮಾಡುತ್ತಿದೆ. 20 ನಿಮಿಷದಲ್ಲಿ ಪಾಕಿಸ್ತಾನ ಗಡಿದಾಟಿ ಹೊಡೆದಿದ್ದೇವೆ. ಪಾಕಿಸ್ತಾನ ಇದನ್ನು ಕೂಡ ಮಾಡಿರಲಿಲ್ಲ. ಭಾರತೀಯ ಸೈನಿಕರ ಶಕ್ತಿಗೆ ಪಾಕಿಸ್ತಾನ ತಬ್ಬಿಬ್ಬುಗೊಂಡಿದೆ. ಉಗ್ರರ ಹೆಡ್ ಕ್ವಾಟರ್ಸ ನಾಶ ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ.
ಉಗ್ರರ ಸದೆಬಡೆಯುವದಾಗಿ ಭಾರತ ಲಕ್ಷ್ಮಣ ರೇಖೆ ಎಳೆದಿದೆ..
ಆಪರೇಷನ್ ಸಿಂಧೂರ್ ಭಾರತದ ನೀತಿ, ಉದ್ದೇಶ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಸಂಗಮವಾಗಿದೆ. ಆಪರೇಷನ್ ಸಿಂಧೂರ್’ ಕೇವಲ ನಿಯಮಿತ ಸಶಸ್ತ್ರ ಪಡೆಗಳ ಅಭಿಯಾನವಲ್ಲ; ಇದು ಭಾರತದ ನೀತಿ, ಉದ್ದೇಶ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಸಂಗಮವಾಗಿದೆ. ಭಾರತದ ಹೊಸ ರೂಪ, ಅದರ ನೂತನ ವ್ಯವಸ್ಥೆಯನ್ನು ಜಗತ್ತು ಅರ್ಥಮಾಡಿಕೊಳ್ಳುತ್ತಿದೆ. ಭಯೋತ್ಪಾದನೆಯನ್ನು ಬೆಂಬಲಿಸುವ ಸರ್ಕಾರ ಮತ್ತು ಭಯೋತ್ಪಾದನೆಯ ಮಾಸ್ಟರ್‌ಮೈಂಡ್‌ಗಳನ್ನು ನಾವು ಬೇರೆ ಬೇರೆಯಾಗಿ ನೋಡುವುದಿಲ್ಲ ಎಂದು ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ.
ಆಪರೇಷನ್ ಸಿಂಧೂರ ಸಾಮಾನ್ಯ ಮಿಲಿಟರಿ ಕಾರ್ಯಾಚರಣೆ ಅಲ್ಲ. ನಿಮ್ಮ ಶೌರ್ಯ ಪ್ರತಿಧ್ವನಿ ಎಲ್ಲೆಡೆ ಕೇಳಿ ಬರುತ್ತಿದೆ. ಉಗ್ರರ ಸದೆಬಡೆಯುವದಾಗಿ ಭಾರತ ಲಕ್ಷ್ಮಣ ರೇಖೆ ಎಳೆದಿದೆ. ಭಾರತದ ಶಸ್ತ್ರಾಸ್ತ್ರಗಳಿಂದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಆಗಿದೆ. ಭಾರತೀಯ ಸೇನೆಗೆ ಆಧುನಿಕ ತಂತ್ರಜ್ಞಾನದ ಶಕ್ತಿ ಇದೆ. ಪಾಕಿಸ್ತಾನದ ಸೇನೆಯನ್ನು ನಮ್ಮ ಸೇನೆ ಧೂಳಿಪಟ ಮಾಡಿದೆ. ಆಪರೇಷನ್ ಸಿಂಧೂರ ಒಂದು ತ್ರಿವೇಣಿಯಾಗಿದೆ. ನಮ್ಮ ದಾಳಿಯಿಂದ ಪಾಕಿಸ್ತಾನದವರಿಗೆ ಇನ್ನು ಸರಿಯಾಗಿ ನಿದ್ದೆ ಬರುತ್ತಿಲ್ಲ. ಪಾಕಿಸ್ತಾನದಲ್ಲೂ ಈಗ ಉಗ್ರರಿಗೆ ಯಾವುದೇ ಸುರಕ್ಷಿತ ತಾಣವಿಲ್ಲ ಏಕೆಂದರೆ ಉಗ್ರರು ಎಲ್ಲೇ ಅಡಗಿದ್ದರು ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದು ಮೋದಿ ಅಬ್ಬರಿಸಿದ್ದಾರೆ.
ಇನ್ನೂ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದುದ್ದಕ್ಕೂ ವಾಯುಸೇನೆಯ ಯೋಧರು ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಯನ್ನು ಕೂಗಿ ಭಾಷಣಕ್ಕೆ ಇನ್ನಷ್ಟು ಹುರಿ ದುಂಬಿಸಿದ್ದರು. ಒಂದೊಂದು ವಿಚಾರ ಪ್ರಸ್ತಾಪದ ಬಳಿಕ ಯೋಧರು ಭಾರತ್ ಮಾತಾ ಕೀ ಜೈ ಎಂದು ಕೂಗುವ ಮೂಲಕ ಪಾಕಿಸ್ತಾನಕ್ಕೆ ನೇರವಾದ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.