Tuesday, July 22, 2025

Latest Posts

ಟ್ರಂಪ್‌ ಹಾಗೆ ಹೇಳಲು ನಮ್ಮ ಪರ್ಮಿಷನ್‌ ಪಡೆದಿಲ್ಲ : ಕದನ ವಿರಾಮಕ್ಕೆ ಪಾಕ್‌ ಮುಂದೆ ಬಂದಿತ್ತು ; ವಿಕ್ರಮ್‌ ಮಿಶ್ರಿ..

- Advertisement -

ಆಪರೇಷನ್ ಸಿಂಧೂರ್‌ ವಿಶೇಷ :

ನವದೆಹಲಿ : ಭಾರತ ಹಾಗೂ ಪಾಕಿಸ್ತಾನದ ಸಂಘರ್ಷವನ್ನು ನಾನೇ ನಿಲ್ಲಿಸಿದೆ. ಅಮೆರಿಕದ ಸತತ ಮಾತುಕತೆಗಳ ಬಳಿಕ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಈ ಮೂಲಕ ಜಾಗತಿಕವಾಗಿ ಪರಮಾಣು ಶಸ್ತ್ರ ಸಜ್ಜಿತ ರಾಷ್ಟ್ರಗಳ ನಡುವಿನ ಬಹುದೊಡ್ಡ ಅನಾಹುತವನ್ನು ತಪ್ಪಿಸಿರುವುದಾಗಿ ಅಂತರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಹೇಳಿಕೊಳ್ಳುವ ಮೂಲಕ ಬಿಲ್ಡಪ್‌ ಕೊಡುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಂಡವಾಳವನ್ನು ಭಾರತದ ವಿದೇಶಾಂಗ ಇಲಾಖೆ ಬಯಲು ಮಾಡಿದೆ. ಈ ಮೂಲಕ ಟ್ರಂಪ್‌ ಹೇಳಿದ್ದೆಲ್ಲ ಹಸಿ ಹಸಿ ಸುಳ್ಳು ಎನ್ನುವುದು ಜಗಜ್ಜಾಹೀರಾಗಿದೆ.

ಪಾಕಿಸ್ತಾನವೇ ಮನವಿ ಮಾಡಿತ್ತು..

ಈ ಕುರಿತು ಕೇಂದ್ರ ಸಂಸದೀಯ ಸ್ಥಾಯಿ ಸಮಿತಿಗೆ ವಿವರಣೆ ನೀಡಿರುವ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ್‌ ಮಿಶ್ರಿ, ಭಾರತ ಹಾಗೂ ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಅಮೆರಿಕ ಯಾವುದೇ ಮಧ್ಯಸ್ಥಿಕೆ ವಹಿಸಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಭಾರತಕ್ಕೆ ಪಾಕಿಸ್ತಾನದಿಂದ ಯಾವುದೇ ಪರಮಾಣು ಬೆದರಿಕೆಗಳು ಬಂದಿಲ್ಲ. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಯ ಬಳಿಕ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಮೊದಲು ಪಾಕಿಸ್ತಾನದ ಡಿಜಿಎಂಒ ಅವರಿಂದ ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕರಿಗೆ ಕರೆ ಮಾಡಿ ಕದನ ವಿರಾಮದ ಪ್ರಸ್ತಾಪ ಮಾಡಲಾಗಿತ್ತು. ಬಳಿಕ ನಡೆಸ ಸಂಧಾನದಲ್ಲಿ ಈ ನಿರ್ಧಾರಕ್ಕೆ ಬರಲಾಗಿದ ಎಂದು ಅವರು ಸಭೆಯ ಗಮನಕ್ಕೆ ತಂದಿದ್ದಾರೆ.

ಟ್ರಂಪ್‌ ನಮ್ಮ ಅನುಮತಿಯನ್ನೇ ಪಡೆದಿಲ್ಲ..!

ಅಲ್ಲದೆ ಪಾಕಿಸ್ತಾನ ಹಾಗೂ ಭಾರತದ ನಡುವಿನ ಕದನ ವಿರಾಮದ ವಿಚಾರದಲ್ಲಿ ಟ್ರಂಪ್‌ ಕ್ರೆಡಿಟ್‌ ಪಡೆಯುತ್ತಿದ್ದಾರೆ, ಸತ್ಯ ಏನಿದೆ ಎನ್ನುವುದನ್ನು ತಿಳಿಸಿ ಎಂದು ಸದಸ್ಯರು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಉತ್ತರಿಸಿದ ಮಿಶ್ರಿ, ಈ ಕದನ ವಿರಾಮದ ಒಪ್ಪಂದ ಎರಡೂ ದೇಶಗಳ ನಡುವೆ ಆಗಿದೆ. ಇದರಲ್ಲಿ ಯಾರದೇ ಹಸ್ತಕ್ಷೇಪವಿಲ್ಲ. ವಿಶ್ವಕ್ಕೆ ಹೇಳಿಕೊಂಡು ತಿರುಗಾಡುತ್ತಿರುವ ಟ್ರಂಪ್‌ ನಮ್ಮ ಅನುಮತಿಯನ್ನೇ ಪಡೆದಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇನ್ನೂ ಸತತ ಮೂರು ಗಂಟೆಗಳ ಕಾಲ ನಡೆದ ಸಭೆಯ ನಂತರ ಮಾತನಾಡಿದ ಸಮಿತಿಯ ಅಧ್ಯಕ್ಷ ಹಾಗೂ ಸಂಸದ ತರೂರ್, ಈ ಸಭೆಯಲ್ಲಿ ದಾಖಲೆಯ 24 ಸದಸ್ಯರು ಭಾಗವಹಿಸಿದ್ದರು. ಮಿಲಿಟರಿ ಕ್ರಮಗಳನ್ನು ನಿಲ್ಲಿಸಲು ಎರಡೂ ಕಡೆಯವರು ಒಪ್ಪಿಕೊಂಡ ನಂತರ ಆನ್‌ಲೈನ್‌ನಲ್ಲಿ ಅನಗತ್ಯ ದಾಳಿಗಳನ್ನು ಎದುರಿಸಲು ಮಿಶ್ರಿ ಅವರೊಂದಿಗೆ ಸಮಿತಿಯು ಸರ್ವಾನುಮತದಿಂದ ಒಗ್ಗಟ್ಟನ್ನು ವ್ಯಕ್ತಪಡಿಸಿದೆ.

ನಾನು ಮಿಶ್ರಿ ಪರ ನಿಲ್ಲುತ್ತೇನೆ..

ಮೇ 10 ರಂದು ಭಾರತ ಮತ್ತು ಪಾಕಿಸ್ತಾನಗಳು ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಕದನ ವಿರಾಮ ಒಪ್ಪಂದ ಮಾಡಿಕೊಂಡ ನಂತರ ವಿದೇಶಾಂಗ ಕಾರ್ಯದರ್ಶಿ ಮತ್ತು ಅವರ ಮಗಳು ಸೇರಿದಂತೆ ಅವರ ಕುಟುಂಬವು ಬಲಪಂಥೀಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಂದ ಭಾರೀ ಟ್ರೋಲಿಂಗ್‌ಗೆ ಒಳಗಾಗಿತ್ತು. ಹಲವಾರು ರಾಜಕೀಯ ನಾಯಕರು, ಮಾಜಿ ಅಧಿಕಾರಿಗಳು ಮತ್ತು ರಕ್ಷಣಾ ನಿವೃತ್ತರು ಈ ದಾಳಿಯನ್ನು ಖಂಡಿಸಿದ್ದಾರೆ. ಅಲ್ಲದೆ ವಿಕ್ರಮ್ ಮಿಶ್ರಿ ಅವರೊಂದಿಗೆ ನಾವು ಜೊತೆಯಾಗಿ ನಿಲ್ಲುತ್ತೇವೆ ಎಂದು ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss