ಮೆಹಂದಿ ಬೀಡಿಸೋ ಕಲೆ ಎಲ್ಲರಿಗೂ ಒಲಿಯಲ್ಲ. ಅದ್ಭುತವಾಗಿ ಮೆಹಂದಿ ಬಿಡಿಸುವವರು ಅವರ ಹವ್ಯಾಸವನ್ನೇ ಉದ್ಯಮವನ್ನಾಗಿಸಿಕೊಳ್ಳಬಹುದು. ಆ ಬಗ್ಗೆ ಕೆಲ ಟಿಪ್ಸ್‌ಗಳನ್ನ ನಾವಿಂದು ನಿಮಗೆ ನೀಡಲಿದ್ದೇವೆ.

ಮದುವೆ ಮನೆಯಲ್ಲಿ ಮಧುಮಗಳಿಗೆ ಮಾಡುವ ಅಲಂಕಾರಗಳಲ್ಲಿ ಮೆಹಂದಿ ಹಾಕುವುದು ಕೂಡಾ ಒಂದು. ಅದು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರತ್ತೆ. ಅದರ ಜೊತೆ ಅಲ್ಲಿ ಬಂದ ಹೆಂಗೆಳೆಯರಿಗೂ ಮೆಹಂದಿ ಹಾಕುವ ಅವಕಾಶ ಕೂಡ ಸಿಗುತ್ತದೆ. ನೀವೂ ಏನಾದ್ರೂ ಅದ್ಭುತವಾಗಿ ಮೆಹಂದಿ ಹಾಕುವವರಾಗಿದ್ದರೆ, ನಿಮ್ಮ ಹವ್ಯಾಸವನ್ನೇ ಉದ್ಯಮವನ್ನಾಗಿಸಿಕೊಳ್ಳಬಹುದು. ಅಲ್ಲದೇ ಮೆಹಂದಿ ಹಾಕುವುದನ್ನ ಕಲಿಸಿಕೊಡಲೆಂದೇ ತರಬೇತಿ ನೀಡಲಾಗುತ್ತದೆ. ಅಲ್ಲಿ ತರಬೇತಿ ತೆಗೆದುಕೊಂಡರೂ ಉತ್ತಮ.


ಈಗಂತೂ ಮೆಹಂದಿ ಹಾಕುವವರಿಗೆ ಸಖತ್ ಬೆಡಿಕೆ ಇದೆ. ಎರಡು ಕೈಗೆ ಮೆಹಂದಿ ಹಾಕಿದ್ರೆ 1ರಿಂದ 2 ಸಾವಿರದ ತನಕ ಚಾರ್ಜ್ ಆಗತ್ತೆ. ಹೀಗೆ ಒಂದು ಮದುವೆಯಲ್ಲಿ 10 ಮಂದಿಗೆ ಮೆಹಂದಿ ಹಾಕಿದ್ರು ಸಾಕು. ಒಂದೇ ದಿನದಲ್ಲಿ 10ರಿಂದ 20 ಸಾವಿರ ಹಣ ನಿಮ್ಮದಾಗತ್ತೆ.
ಈ ಉದ್ಯಮದ ಮೊದಲ ಸ್ಟೆಪ್ ಗೋರಂಟಿ ತಯಾರಿಕೆ
ಮಾರುಕಟ್ಟೆಯಲ್ಲಿ ಬೇಕಾದಷ್ಟು ಬ್ರ್ಯಾಂಡ್‌ನ ಮೆಹಂದಿ ಸಿಗತ್ತೆ. ಆದ್ರೆ ಅದು ಕೆಮಿಕಲ್ ಭರಿತವಾಗಿರುತ್ತದೆ. ಆದ್ದರಿಂದ ನೀವು ಮನೆಯಲ್ಲೇ ಮೆಹಂದಿ ತಯಾರಿಸಿ ಕೋನ್ ಮಾಡಿ ಬಳಸಿದರೆ ಉತ್ತಮ. ಮೆಹಂದಿ ಮಾಡೋದನ್ನ ಕಲಿತು ಅದರ ಕೋನ್ ತಯಾರಿಸಿಕೊಳ್ಳಿ. ಮೆಹಂದಿ ಹಾಕಿದ ಬಳಿಕ ಅದಕ್ಕೆ ಕಲರ್ ಬರಲು ಕೆಲವರು, ತೆಂಗಿನ ಎಣ್ಣೆ ಹಚ್ಚುತ್ತಾರೆ, ಕೆಲವರು ಸಕ್ಕರೆ ನೀರು, ನಿಂಬೆರಸ, ಇತ್ಯಾದಿಗಳನ್ನ ಹಚ್ಚುತ್ತಾರೆ. ಈ ಬಗ್ಗೆ ಸ್ವಲ್ಪ ಮಾಹಿತಿ ತಿಳಿದುಕೊಂಡಿರಿ.
ಈ ಉದ್ಯಮದ ಎರಡನೇ ಸ್ಟೆಪ್ ನಿಮ್ಮ ಪ್ರತಿಭೆ ಅನಾವರಣಗೊಳಿಸಲು ಸಹಕಾರ ಅಗತ್ಯ
ನೀವು ಚೆನ್ನಾಗಿ ಮೆಹಂದಿ ಹಾಕುತ್ತೀರಿ ಅಂತಾ ನಿಮ್ಮ ಮುಖ ನೋಡಿದ ಮೇಲೆ ಯಾರೂ ಕಂಡು ಹಿಡಿಯಲ್ಲ. ನೀವು ನಿಮ್ಮ ಪ್ರತಿಭೆಯನ್ನ ಕೆಲ ಕಡೆ ತೋರಿಸಬೇಕಾಗುತ್ತದೆ. ಹೀಗಾಗಿ ಹಬ್ಬ ಹರಿದಿನಗಳಲ್ಲಿ ನಿಮ್ಮ ಮನೆಯ ಅಥವಾ ಅಕ್ಕಪಕ್ಕದ ಮನೆಯ ಹೆಣ್ಣು ಮಕ್ಕಳಿಗೆ ಅಥವಾ ನಿಮ್ಮ ಗೆಳತಿಯರ ಕೈಗೆ ಮೆಹಂದಿ ಹಾಕಿ. ನೀವು ಚೆನ್ನಾಗಿ ಮೆಹಂದಿ ಬಿಡಿಸಿದ್ದಲ್ಲಿ ನಿಮಗೆ ಬಾಯಿ ಮಾತಿನಿಂದಲೇ ಪ್ರಚಾರ ಸಿಗತ್ತೆ. ಆಗ ಮದುವೆ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಮೆಹಂದಿ ಹಾಕಲು ನಿಮಗೆ ಆಮಂತ್ರಣ ಸಿಗತ್ತೆ.
ಈ ಉದ್ಯಮದ ಮೂರನೇ ಸ್ಟೆಪ್ ಪ್ರಚಾರ
ನೀವು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಪೇಜ್ ಮಾಡಿ, ಅದರಲ್ಲಿ ನಿಮ್ಮ ಮೆಹಂದಿ ಡಿಸೈನ್ ಫೋಟೋ, ವೀಡಿಯೋ ಅಪ್ಲೋಡ್ ಮಾಡಿ. ಅಲ್ಲದೇ ನಿಮ್ಮ ಕಾಂಟಾಕ್ಟ್ ನಂಬರ್ ಕೂಡ ಹಾಕಿ. ಮದುವೆ ಮನೆ ಅಥವಾ ಬೇರೆ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಪರಿಚಯವಾದ ಹೆಣ್ಣು ಮಕ್ಕಳಿಗೆ ನಿಮ್ಮ ವಿಸಿಟಿಂಗ್ ಕಾರ್ಡ್ ನೀಡಿ. ನೀವು ಯಾವ ಯಾವ ಕಾರ್ಯಕ್ರಮಗಳಿಗೆ ಹೋಗಿ ಮೆಹಂದಿ ಹಾಕಿದ್ದೀರೋ ಅಂಥವರ ಕಾಂಟಾಕ್ಟ್‌ನಲ್ಲಿರಿ. ಅವರೊಂದಿಗೆ ಒಳ್ಳೆಯ ಗೆಳೆತನ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಬಗ್ಗೆ ಪ್ರೀತಿ, ಗೌರವದ ಜೊತೆಗೆ ನಿಮ್ಮ ಕಲೆಗೆ ಬೆಲೆ ಕೊಡುವ ಮನಸ್ಸು ಮಾಡುತ್ತಾರೆ. ಅವರ ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ಮೆಹಂದಿ ಹಾಕಲು ನಿಮ್ಮನ್ನೇ ಕರೆದರೂ ಕರೀಬಹುದು.
ಇನ್ನು ನೀವು ಮೆಹಂದಿ ಬಿಡಿಸೋದ್ರಲ್ಲಿ ನಿಪುಣರಾಗಿದ್ರೆ ಮೆಹಂದಿ ಕಲಿಸಿಕೊಡುವ ಕ್ಲಾಸ್ ಶುರು ಮಾಡಬಹುದು. ಅದು ಆನ್‌ಲೈನ್ ಮೂಲಕ ಕೂಡ ಸ್ಟಾರ್ಟ್ ಮಾಡಬಹುದು.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




