Health Tips: ಶುಗರ್ ಅನ್ನೋದು ಇತ್ತೀಚೆಗೆ ಸಾಮಾನ್ಯ ಖಾಯಿಲೆಯಾಗಿದೆ. ಆದರೆ ಅದರ ಎಫೆಕ್ಟ್ ಮಾತ್ರ ಸಾಮಾನ್ಯವಲ್ಲ. ಹಾಗಾಗಿ ಶುಗರ್ ಇದ್ದವರು ಆಹಾರ ಸೇವನೆ ಮಾಡುವಾಗ ಎಚ್ಚರಿಕೆ ವಹಿಸಬೇಕು ಅಂತಾ ಹೇಳೋದು. ಅದರಲ್ಲೂ ಬಿಳಿ ಅಕ್ಕಿ ಸೇವನೆ ಕಡಿಮೆ ಮಾಡಬೇಕು ಅಂತಾ ಹೇಳುತ್ತಾರೆ. ಹಾಗಾದ್ರೆ ನಿಜಕ್ಕೂ ಶುಗರ್ ಇದ್ದವರು ಬಿಳಿ ಅಕ್ಕಿ ಅನ್ನವನ್ನ ನಿಜಕ್ಕೂ ಸೇವಿಸಬಾರದು ಅನ್ನೋ ಬಗ್ಗೆ ಕುಟುಂಬ ವೈದ್ಯರಾದ ಡಾ.ಪ್ರಕಾಶ್ ರಾವ್ ವಿವರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ ಬಿಳಿ ಅಕ್ಕಿ ಅಥವಾ ಕುಸುಬಲು ಅಕ್ಕಿ ಪ್ರಮುಖ ಆಹಾರ. ಪ್ರತಿನಿತ್ಯ ಇದರ ಬಳಕೆಯಾಗುತ್ತದೆ. ಆದರೆ ಶುಗರ್ ಇದ್ದವರು ಅದನ್ನು ಬಳಸಬಾಾರದಾ ಅಂತಾ ಹಲವರು ಕೇಳುತ್ತಾರೆ. ಈ ಅಕ್ಕಿಗಳನ್ನು ಶುಗರ್ ಇದ್ದವರು ಕೂಡ ಬಳಸಬಹುದು. ಆದರೆ ಮಿತವಾಗಿ ಬಳಸಬಹುದು.
ಏಕೆಂದರೆ ಗೋದಿ, ಅಕ್ಕಿ, ರಾಗಿ ಈ ಎಲ್ಲದರ ಸೇವನೆಯಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ. ಹಾಗಾಗಿ ನಾವು ರಾಗಿ, ಗೋದಿ ಬಳಸುವ ಹಾಗೆ ಅಕ್ಕಿಯನ್ನು ಸಹ ಬಳಸಬಹುದು. ಆದರೆ ಇದರ ಜತೆಗೆ ನೀವು ನಾರು ಇರುವ ಪದಾರ್ಥಗಳ ಬಳಕೆ ಮಾಡಬೇಕು. ಅಂದ್ರೆ ಸೋಪ್ಪು, ತರಕಾರಿ ಸೇವನೆ ಹೇರಳವಾಗಿ ಮಾಡಬೇಕು. ಆಗ ಅಕ್ಕಿ ಸೇವನೆಯಿಂದ ಸಕ್ಕರೆ ಖಾಯಿಲೆಯ ಮೇಲೆ ಯಾವುದೇ ರೀತಿ ಎಫೆಕ್ಟ್ ಉಂಟಾಗುವುದಿಲ್ಲ ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.