Thursday, July 31, 2025

Latest Posts

Health Tips: ಎಣ್ಣೆ ತಿಂಡಿ ತಿನ್ನೋದ್ರಿಂದ ಏನಾಗುತ್ತೆ? ಮಕ್ಕಳಿಗೆ ಇದೆಷ್ಟು ಹಾನಿಕಾರಕ?

- Advertisement -

Health Tips: ಚಿಕ್ಕ ಮಕ್ಕಳು ಆರೋಗ್ಯಕರ ಆಹಾರಕ್ಕಿಂತ, ಜಂಕ್ ಫುಡ್, ಎಣ್ಣೆ ತಿಂಡಿಯನ್ನೇ ಹೆಚ್ಚು ಇಷ್ಟ ಪಡೋದು. ಹಾಗಾಗಿ ಹಲವು ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಯೋಚನೆ ಮಾಡದೇ, ಮಕ್ಕಳು ಕೇಳಿದ್ದನ್ನು ತಿನ್ನೋಕ್ಕೆ ನೀಡುತ್ತಾರೆ. ಆದರೆ ಮಕ್ಕಳಿಗೆ ಎಣ್ಣೆ ತಿಂಡಿ ಹೆಚ್ಚು ನೀಡಿದರೆ, ಅದರಿಂದ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.

ಬೇಸಿಗೆಯಲ್ಲಿ ಮಕ್ಕಳನ್ನು ಹೆಚ್ಚು ಆಡಲು ಬಿಡಬಾರದು. ಮತ್ತು ಮಕ್ಕಳಿಗೆ ತೆಳುವಾದ ಕಾಟನ್ ಬಟ್ಟೆಗಳನ್ನೇ ಹೆಚ್ಚು ಹಾಕಬೇಕು. ಅಲ್ಲದೇ ತಂಪಾದ ಆಹಾರ, ಪೇಯವನ್ನು ಸೇವಿಸಲು ನೀಡಬೇಕು. ಅಲ್ಲದೇ, ಆದಷ್ಟು ಮಕ್ಕಳಿಗೆ ಮನೆಯ ಆಹಾರವನ್ನೇ ಸೇವಿಸಲು ನೀಡಬೇಕು. ಬೀದಿಬದಿಯಲ್ಲಿ ಆಹಾರ ಸೇವಿಸುವುದು, ಕೈ ತ“ಳೆಯದೇ ಆಹಾರ ಸೇವಿಸುವ ಅಭ್ಯಾಸದಿಂದಲೇ ವಾಂತಿ ಬೇದಿ ಶುರುವಾಗುತ್ತದೆ ಅಂತಾರೆ ವೈದ್ಯರು.

ಎಣ್ಣೆ ತಿಂಡಿ ಹೆಚ್ಚು ತಿಂದಾಗ, ಈ ರೀತಿ ಆರೋಗ್ಯ ಹಾಳಾಗಲು ಆರಂಭಿಸುತ್ತದೆ. ಹಾಗಾಗಿ ಮನೆಯಲ್ಲಿಯೇ ಆರೋಗ್ಯಕರವಾದ, ಬಿಸಿ ಬಿಸಿ ಆಹಾರ ತಯಾರಿಸಿ, ಮಕ್ಕಳಿಗೆ ನೀಡಬೇಕು. ಫ್ರಿಜ್‌ನಲ್ಲಿ ಇರಿಸಿದ ಆಹಾರವನ್ನು ಪದೇ ಪದೇ ಬಿಸಿ ಮಾಡಿ ಸೇವಿಸುವುದರಿಂದಲೇ ರೋಗಗಳು ಬರುತ್ತದೆ. ಹಾಗಾಗಿ ಉತ್ತಮ ಆಹಾರವನ್ನೇ ಸೇವಿಸಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss