Health Tips: ನಿರ್ಜಲತೆ ಯಾಕಾಗುತ್ತೆ? ನಿರ್ಲಕ್ಷ್ಯ ಮಾಡಿದ್ರೆ ತುಂಬಾ ಡೇಂಜರ್!

Health Tips: ನಮ್ಮ ದೇಹಕ್ಕೆ ಊಟ, ತಿಂಡಿ, ಗಾಳಿ ಎಷ್ಟು ಮುಖ್ಯವೋ, ಅಷ್ಟೇ ನೀರು ಕೂಡ ಮುಖ್ಯ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ, ನಿರ್ಜಲತೆ ಉಂಟಾಗುತ್ತದೆ. ಆದರೆ ನಿರ್ಜಲತೆ ಯಾಕಾಗುತ್ತದೆ..? ಯಾಕೆ ನಾವು ಅದನ್ನು ನಿರ್ಲಕ್ಷ್ಯ ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ದೇಹದಲ್ಲಿ ಸಂಪೂರ್ಣ ನಿರ್ಜಲನೆ ಉಂಟಾದರೆ ಸಾವು ಸಂಭವಿಸುತ್ತದೆ. ಹಾಗಾಗಿ ನಿಮಗೆ ವಾಂತಿ, ಬೇಧಿಯಾದಾಗ, ನಿಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಹೀಗಾಗಿಯೇ ವಾಂತಿ, ಬೇಧಿಯಾದಾಗ ಹೆಚ್ಚು ನೀರು, ಎಳನೀರು, ಮಜ್ಜಿಗೆ ಕುಡಿಯಬೇಕು ಎಂದು ಹೇಳುತ್ತಾರೆ.

ಇನ್ನು ನಿಮಗೆ ಬೇಧಿ, ವಾಂತಿ ಶುರುವಾದಾಗ, ವೈದ್ಯರು ನೀಡುವ ಮದ್ದು ಅಂದ್ರೆ ಓಆರ್‌ಎಸ್. ಇದನ್ನು ನೀರಿಗೆ ಹಾಕಿ ಕುಡಿದರೆ, ದೇಹದಲ್ಲಿನ ನಿರ್ಜಲತೆ ಕಡಿಮೆಯಾಗುತ್ತದೆ. ಇನ್ನು ಮುಖ್ಯವಾದ ವಿಚಾರ ಅಂದ್ರೆ, ಬೇದಿ, ವಾಂತಿಯಾದಾಗ ಬಿಸಿ ಬಿಸಿ ನೀರು, ಚಹಾ, ಕಾಫಿ ಇದೆಲ್ಲ ಕುಡಿಬಾರದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author