Health Tips: ಕೆಲವು ಮಕ್ಕಳು ಅದೆಷ್ಟು ಆಕ್ಟಿವ್ ಎಂದರೆ ಅವರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗೋದಿಲ್ಲ ಅಷ್ಟು. ಅಲ್ಲದೇ ಮಾತು ಕೂಡ ಹೆಚ್ಚು. ಆದರೆ ಇನ್ನು ಕೆಲ ಮಕ್ಕಳು, ಮಾತು ತೀರಾ ಕಡಿಮೆ ಆಡುತ್ತಾರೆ. ಹಾಗಾಗಿ ಪೋಷಕರಿಗೆ ಮಕ್ಕಳ ಬಗ್ಗೆ ಚಿಂತೆಯಾಗುತ್ತದೆ. ಹಾಗದ್ರೆ ಮಕ್ಕಳಲ್ಲಿ ಮಾತು ಕಡಿಮೆಯಾಗಲು ಕಾರಣವೇನು..? ಅದಕ್ಕೇನು ಮಾಡಬೇಕು ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ.
ಮಕ್ಕಳು 9ರಿಂದ 10 ತಿಂಗಳಿಗೆ ಟಾಟಾ ಬೈಬೈ ಮಾಡೋದನ್ನು ಕಲಿಯುತ್ತದೆ. ಅಲ್ಲದೇ 2 ವರ್ಷಕ್ಕೆ ಎರಡೆರಡು ಪದ ಬಳಸಿ ಮಾತನಾಡುತ್ತದೆ. ಯಾವ ಮಗು ಇವೆರಡನ್ನೂ ಮಾಡುವುದಿಲ್ಲವೋ. ಅದಕ್ಕೆ ಕಿವಿ ಕೇಳದಿರುವ ಸಮಸ್ಯೆ ಇರಬಹುದು. ಹಾಗಾಗಿ ಅಂಥ ಮಕ್ಕಳ ಕಿವಿಯ ಪರೀಕ್ಷೆಯನ್ನು ನೀವು ಮಾಡಿಸಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




