Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಶಾಸಕ ಪ್ರಸಾದ್ ಅಬ್ಬಯ್ಯ, ಹುಬ್ಬಳ್ಳಿ ಗಲಭೆಕೋರರ ಪರ ಬ್ಯಾಟ್ ಬೀಸುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಳೆ ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ಹಿನ್ನೆಲೆ ಕೋರ್ಟ್ ತಡೆ ವಿಚಾರದ ಬಗ್ಗೆ ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಈಗಲೂ ಅಮಾಯಕರು ಅಂತಾನೇ ಹೇಳ್ತೇನೆ. ಕೋರ್ಟ್ ಆದೇಶ ನಾನು ನೋಡಿಲ್ಲ, ಸರ್ಕಾರ ನಿರ್ಧಾರ ಕೈಗೊಳ್ಳುತ್ತೆ. ಲಾಬುರಾಮ್ ಒಳ್ಳೆಯ ಅಧಿಕಾರಿ ಇದ್ರು, ಒತ್ತಡ ಹಾಕಿಸಿ ಮಾಡಿಸಿದ್ರು. ಆ ಪ್ರತಿಭಟನೆಯಲ್ಲಿ ಹಿಂದೂಗಳಿದ್ರು ಅವರನ್ನ ಯಾಕೆ ನೀವು ಗಣನೆಗೆ ತೆಗೆದುಕೊಳ್ಳಲಿಲ್ಲ. ಹಠಕ್ಕೆ ಬಿದ್ದು ವಾಪಸ್ ಪಡೆಯೋದೆ ಇಲ್ಲಾ. ಸಾದಕ ಭಾದಕಗಳನ್ನ ನೋಡಿ ತೆಗೆದುಕೊಳ್ಳುತ್ತೇ. ಯಾವುದೋ ಡಿಪಾರ್ಟ್ಮೆಂಟ್ ಕೊಟ್ಟ ಕೊಡಲೇ ತೀರ್ಮಾನ ಆಗೋದಿಲ್ಲ. ಸರ್ಕಾರ ಇದರ ಬಗ್ಗೆ ಚರ್ಚೆ ಮಾಡುತ್ತೆ. ಇದೊಂದೇ ಅಲ್ಲಾ ಇನ್ನು ಉಳಿದ ದೊಂಬಿ ಕೇಸ್ ಗಳನ್ನ ಹಿಂಪಾಡೆದರಲ್ಲ ಎಂದು ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ.