Sports News: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಂಗಳವಾರ ರಾತ್ರಿ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಕಿರೀಟ ಧರಿಸುತ್ತಿದ್ದಂತೆಯೇ ದೇಶದೆಲ್ಲೆಡೆ ಅಭಿಮಾನಿಗಳ ಸಂಭ್ರಮ ಉಕ್ಕಿ ಹರಿದಿದೆ. ಸತತ ಹದಿನೆಂಟು ವರ್ಷಗಳಿಂದ ಈ ಕ್ಷಣಕ್ಕಾಗಿ ಕಾದಿದ್ದ ಲಕ್ಷಾಂತರ ಜನರು ಬೀದಿಗಿಳಿದು ಸಂಭ್ರಮಿಸಿದರು. ಕುಣಿದು, ಪರಸ್ಪರ ಸಿಹಿ ಹಂಚಿ ರಾತ್ರಿಯಿಡೀ ಜಯಘೋಷಗಳನ್ನು ಕೂಗುತ್ತ ಆರ್ಸಿಬಿ ಆರ್ಸಿಬಿ ಎಂಬ ಹರ್ಷೋದ್ಘಾರಗಳು ಮುಗಿಲು ಮುಟ್ಟಿದ್ದವು.
ಮೂರು ಬಾರಿ ಫೈನಲ್ ತಲುಪಿ ನಿರಾಸೆಗೊಂಡಿದ್ದ ಆರ್ಸಿಬಿ..!
ಇನ್ನೂ ಪ್ರಮುಖವಾಗಿ ಐಪಿಎಲ್ ಶುರುವಾದಾಗಿನಿಂದಲೂ ಮೂರು ಬಾರಿ ಫೈನಲ್ ತಲುಪಿದ್ದ ಆರ್ಸಿಬಿಗೆ ಪ್ರಶಸ್ತಿಯ ಭಾಗ್ಯ ಒಲಿದು ಬಂದಿರಲಿಲ್ಲ ತಂಡವು ನಿರಾಸೆಗೊಂಡಿತ್ತು. ಆದರೆ ಈ ಸಲ ಐಪಿಎಲ್ ಕಪ್ ನಮ್ಮ ಆರ್ಸಿಬಿಯ ಕೈ ತಪ್ಪಲಿಲ್ಲ. ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ಗಳಿಂದ ಸೋಲಿಸಿದ ಆರ್ಸಿಬಿ ಚಾಂಪಿಯನ್ ಪಟ್ಟಕ್ಕೇರಿದೆ.
ಈ ಹಿಂದೆ ಆರ್ಸಿಬಿಯಲ್ಲಿ ಆಡಿದ್ದ ದಿಗ್ಗಜರಾದ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮತ್ತು ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಅವರೂ ಕ್ರೀಡಾಂಗಣದಲ್ಲಿ ಹಾಜರಿದ್ದು, ತಂಡಕ್ಕೆ ಹುರಿದುಂಬಿಸಿದರು. ತಮ್ಮ ಪ್ರೀತಿಯ ಗೆಳೆಯ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡು ಅಭಿನಿಂದಿಸಿದರು. ಈ ವೇಳೆ ಭಾವುಕರಾದ ಕೊಹ್ಲಿಯ ಕಂಗಳು ತೇವಗೊಂಡವು.
ಎರಡು ದಿನಗಳ ಹಿಂದಷ್ಟೇ ಮುಂಬೈ ಮಣಿಸಿದ್ದ ಪಂಜಾಬ್ ಕಿಂಗ್ಸ್..
ಪಂಜಾಬ್, ಎರಡು ದಿನಗಳ ಹಿಂದಷ್ಟೇ ಎರಡನೇ ಕ್ವಾಲಿಫೈಯರ್ನಲ್ಲಿ ಬಲಿಷ್ಠ ಮುಂಬೈ ಇಂಡಿಯನ್ ತಂಡವನ್ನು ಮಣಿಸಿ ಫೈನಲ್ಗೆ ಲಗ್ಗೆ ಇಟ್ಟಿತ್ತು. ಆ ಪಂಧ್ಯದಲ್ಲಿ ಶ್ರೇಯಸ್ ಅಯ್ಯರ್ ಅಬ್ಬರಿಸಿದ ರೀತಿಯನ್ನು ನೋಡಿದವರಿಗೆ ಆರ್ಸಿಬಿಯ ಗೆಲವು ಸುಲಭವಲ್ಲ ಎಂಬ ಭಾವ ಮೂಡಿತ್ತು. ಆದರೆ ಅಂತಿಮವಾಗಿ ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಪಂಜಾಬ್ ಕೂಡ ಉತ್ತಮ ಪ್ರದರ್ಶನ ನೀಡಿತು. ಆದರೆ ಟಾಸ್ ಗೆದ್ದ ಬಳಿಕವೂ ಅಭಿಮಾನಿಗಳ ಮನದಲ್ಲಿ ಆತಂಕ ಮನೆ ಮಾಡಿತ್ತು. ಅದಕ್ಕೆ ತಕ್ಕಂತೆ ಪಂಜಾಬ್ ತಂಡದ ಕೈಲ್ ಜೆಮಿಸನ್ 48 ಎಸೆತಕ್ಕೆ 3 ವಿಕೆಟ್ ಹಾಗೂ ಎಡಗೈ ವೇಗಿ ಅರ್ಷದೀಪ್ ಸಿಂಗ್ 40 ಎಸೆತಕ್ಕೆ 3 ವಿಕೆಟ್ ಕಬಳಿಸುವ ಮೂಲಕ ಆರ್ಸಿಬಿಯ ಗೆಲುವಿನ ಓಟಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಿದರು. ಇದರ ನಡುವೆಯೂ ಬೆಂಗಳೂರು ತಂಡವು 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ಗಳನ್ನು ಬಾಚಿಕೊಂಡಿತು.
ಇನ್ನೂ ಪಂಜಾಬ್ ತಂಡದಲ್ಲಿರುವ ಪ್ರತಿಭಾವಂತ ಮತ್ತು ಇನ್ಫಾರ್ಮ್ ಬ್ಯಾಟರ್ಗಳಿಗೆ ಈ ಮೊತ್ತ ದೊಡ್ಡ ಸವಾಲಾಗಿರಲಿಲ್ಲ. ಆದರೆ ಆರ್ಸಿಬಿಯ ಸ್ಪಿನ್ನರ್ ಕೃಣಾಲ್ ಪಾಂಡ್ಯ ಮತ್ತು ವೇಗಿ ಭುವನೇಶ್ವರ್ ಕುಮಾರ್ ಕಿಂಗ್ಸ್ಗೆ ತಡೆಯೊಡ್ಡಿದರು. ಪ್ರಭಸಿಮ್ರನ್ ಸಿಂಗ್ 26 ರನ್ ಮತ್ತು ಜೋಶ್ ಇಂಗ್ಲಿಸ್ 39 ರನ್ ಗಳಿಸಿದರು. ಹೀಗೆ ಇವರು ವಿಕೆಟ್ ಗಳಿಸಿದ್ದ ಕೃಣಾಲ್ ಗೆಲುವಿನ ರೂವಾರಿಯಾದರು. ಶ್ರೇಯಸ್ ಅಯ್ಯರ್ 1 ರನ್ಗೆ ರೊಮೆಯೊ ಶೆಫರ್ಡ್ ಪೆವಿಲಿಯನ್ ದಾರಿ ತೋರಿಸಿದ್ದು ಮಹತ್ವದ ತಿರುವಾಯಿತು.
ಆರ್ಸಿಬಿ ಬಳಗದಲ್ಲಿ ಮುಗಿಲು ಮುಟ್ಟಿದ ಜಯದ ಸಂಭ್ರಮ..
ಆದರೆ ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ದಿಟ್ಟ ಆಟವಾಡಿದ್ದ ಶಶಾಂಕ್ ಸಿಂಗ್ ಅಜೇಯರಾಗಿ ಆಟವಾಡಿದರು. ಹೀಗೆ ಇವರು ಕೊನೆಯ ಹಂತದಲ್ಲಿ ಅಬ್ಬರಿಸಿದರು. ಅದರಲ್ಲೂ ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ 29 ರನ್ಗಳು ಬೇಕಿದ್ದಾಗಲೂ ಅವರು ಕ್ರೀಸ್ನಲ್ಲಿದ್ದು ಭರವಸೆ ಮೂಡಿಸಿದ್ದರು. ಜೋಶ್ ಹ್ಯಾಜಲ್ವುಡ್ ಹಾಕಿದ ಆ ಓವರ್ನಲ್ಲಿ ಶಶಾಂಕ್ 3 ಸಿಕ್ಸರ್ ಮತ್ತು ಒಂದು ಬೌಂಡರಿ ಹೊಡೆದರು. ಆದರೆ ಅವರ ಪ್ರಯತ್ನಕ್ಕೆ ಗೆಲುವು ಒಲಿಯಲಿಲ್ಲ. ಆದರೆ ಆರ್ಸಿಬಿ ಬಳಗದಲ್ಲಿ ಜಯದ ಸಂಭ್ರಮ ಗರಿಗೆದರಿ ಮುಗಿಲು ಮುಟ್ಟಿತ್ತು.
ಈ ಸಲ ಕಪ್ ನಮ್ದೆ ಎಂದ ರಜತ್ ಪಾಟೀದಾರ್..
ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಆರ್ಸಿಬಿಯು ಅತ್ಯಂತ ಶಿಸ್ತಿನ ಆಟವಾಡಿತು. ಲೀಗ್ ಹಂತದ 14 ಪಂದ್ಯಗಳಲ್ಲಿ 9ರಲ್ಲಿ ಜಯಿಸಿದ್ದ ತಂಡವು 4ರಲ್ಲಿ ಸೋತಿತ್ತು. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದು ಕ್ವಾಲಿಫೈಯರ್ನಲ್ಲಿ ಪಂಜಾಬ್ ಕಿಂಗ್ಸ್ ಎದುರು ಗೆದ್ದು ಫೈನಲ್ಗೆ ಲಗ್ಗೆ ಇಟ್ಟಿತ್ತು.ಪಂದ್ಯದ ಬಳಿಕ ಮಾತನಾಡಿದ ತಂಡದ ನಾಯಕ ರಜತ್ ಪಾಟೀದಾರ್ ಈ ಸಲ ಕಪ್ ನಮ್ದು ಎಂದು ಹೇಳುವ ಮೂಲಕ ಭಾವುಕರಾಗಿದ್ದಾರೆ. ಈ ಮೂಲಕ ಸತತ 18 ವರ್ಷಗಳ ಹೋರಾಟದ ಬಳಿಕ ಅಂತಿಮವಾಗಿ ಆರ್ಸಿಬಿಯು 2025ರ ಐಪಿಯಲ್ ಟ್ರೋಫಿಗೆ ಮುತ್ತಿಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಎಲ್ಲ ಕನ್ನಡಿಗರು ಹಾಗೂ ಅಭಿಮಾನಿಗಳು ಸಂಭ್ರಮಿಸುವಂತೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದ್ದು, ಇದೀಗ ಆರ್ಸಿಬಿ ತಂಡಕ್ಕೆ ಶುಭಾಶಗಳ ಮಹಾಪೂರವೇ ಹರಿದು ಬರುತ್ತಿದೆ.