International News: ಭಾರತದ ವಿರುದ್ಧ ಕಾಲು ಕೆದರಿ ಜಗಳಕ್ಕಿಳಿಯುವ ಪಾಕಿಸ್ತಾನ ಈಗಾಗಲೇ ದಿವಾಳಿ ದಾರಿ ಹಿಡಿದಿದ್ದು, ಕೆಲವೇ ದಿನಗಳಲ್ಲಿ ಆರ್ಥಿಕವಾಗಿ ಸಂಪೂರ್ಣವಾಗಿ ನೆಲಕಚ್ಚುವ ಲಕ್ಷಣಗಳು ಗೋಚರಿಸುತ್ತಿವೆ. ರಕ್ತಗತವಾಗಿಯೇ ಭಯೋತ್ಪಾದನೆಯನ್ನು ಪೋಷಿಸಿ ಉತ್ತೇಜಿಸುವ ರಣಹೇಡಿ ದೇಶಕ್ಕೆ ಮುಂದೇ ಕೇಡುಗಾಲ ಎದುರಾಗಲಿದೆ. ಇನ್ನೂ ಪಾಕಿಸ್ತಾನದ ಈ ಸ್ಥಿತಿಗೆ ಕಾರಣವನ್ನು ಸಮೀಕ್ಷೆಯೊಂದು ಬಿಚ್ಚಿಟ್ಟಿದ್ದು, ಸಾಲದ ಸುಳಿಗೆ ಸಿಲುಕಿ ಅಕ್ಷರಶಃ ಪಾಕ್ ಭಿಕಾರಿಸ್ತಾನವಾಗುವ ಎಚ್ಚರಿಕೆ ನೀಡಿದೆ.
ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಬಡತನದ ಬೇಗೆಯಲ್ಲಿರುವ ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್ ಯಿಂದ ಸಾಲ ಪಡೆದು ಬದುಕುತ್ತಿದೆ. ಪದೇಪದೇ ಸಾಲ ಪಡೆಯುತ್ತಿರುವುದಿಂದ ಸಾಲದ ಮೊತ್ತವು ಕಳೆದ 4 ವರ್ಷಗಳಲ್ಲಿ ಬಹುತೇಕ ದುಪ್ಪಟ್ಟಾಗಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ಆ ದೇಶದ ಆರ್ಥಿಕ ಸಮೀಕ್ಷೆಯಲ್ಲಿ ಬಯಲಾಗಿದೆ.
2014-15ಕ್ಕಿಂತ ದುಪ್ಪಟ್ಟಾಗಿದ ಪ್ರಸ್ತುತ ಸಾಲ..!
ಆರ್ಥಿಕ ಸಮೀಕ್ಷೆ ಪ್ರಕಾರ, ಪ್ರಸ್ತುತ ಪಾಕ್ ನ ಸಾಲದ ಮೊತ್ತ 76 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿಗಳಷ್ಟಿದೆ. ಅಂದರೆ 23.1 ಲಕ್ಷ ಕೋಟಿ ಭಾರತೀಯ ರೂಪಾಯಿ 2020-2021ರ ಅವಧಿಯಲ್ಲಿ ಪಾಕ್ ನ ಸಾಲದ ಮೊತ್ತ 39.8 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿ ಅಂದರೆ 12.1 ಲಕ್ಷ ಕೋಟಿ ಭಾರತೀಯ ರೂಪಾಯಿ ಆಗಿತ್ತು. ಇನ್ನೂ ಆಘಾತಕಾರಿ ಅಂಶವೆಂದರೆ 10 ವರ್ಷಗಳ ಹಿಂದೆ ಅಂದರೆ 2014-15ರಲ್ಲಿ ಪಾಕ್ 17.3 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿ ಅಂದರೆ 5.2 ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲ ಹೊಂದಿತ್ತು. ಆದರೆ ಪ್ರಸ್ತುತ ಸಾಲವು ಇದಕ್ಕಿಂತ ಐದು ಪಟ್ಟು ಹೆಚ್ಚಾಗಿದೆ.
ಈ ಮೊತ್ತದಲ್ಲಿ 51.5 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿ ದೇಶಿಯ ಸಾಲವಾಗಿದ್ದು, 24.4 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿ ಬಾಹ್ಯ ಸಾಲವಾಗಿದೆ. ಪಾಕಿಸ್ತಾನವು ಹೀಗೆಯೇ ಸಾಲ ನಿರ್ವಹಣೆಯಲ್ಲಿ ವಿಫಲವಾಗುತ್ತಾ ಹೋದಲ್ಲಿ ಅದು ದೇಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಸಮೀಕ್ಷೆ ಎಚ್ಚರಿಕೆ ನೀಡಿದೆ.
ಐಎಂಎಫ್ ನಿಂದ ಮತ್ತೆ 28 ಲಕ್ಷ ಕೋಟಿ ರೂಪಾಯಿ ಸಾಲ ಪಡೆದ ಪಾಕ್..
ಇನ್ನೂ ಐಎಂಎಫ್ ನಿಂದ ಪಡೆಯುತ್ತಿರುವ ಸಾಲದಿಂದಲೇ ಪಾಕ್ ಗೆ ಸಾಲದ ಮೊತ್ತದಲ್ಲಿ ಇಷ್ಟೊಂದು ಹೊರೆ ಬೀಳುತ್ತಿದೆ. ಇಷ್ಟಾಗಿಯೂ ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಐಎಂಎಫ್ ನಿಂದ ಮತ್ತೆ 28 ಲಕ್ಷ ಕೋಟಿ ರೂಪಾಯಿ ಅಂದರೆ 1 ಶತಕೋಟಿ ಡಾಲರ್ ಅಥವಾ 8.5 ಲಕ್ಷ ಕೋಟಿ ಭಾರತೀಯ ರೂಪಾಯಿ ಸಾಲ ಪಡೆದಿದೆ. ಇದು ಕಳೆದ 2024ರಲ್ಲಿ ಐಎಂಎಫ್ ಪಾಕ್ ಗೆ 7 ಶತಕೋಟಿ ಡಾಲರ್ ನೀಡುವ ಬಗ್ಗೆ ಒಪ್ಪಿಕೊಂಡಿದ್ದರ ಕಂತಾಗಿದೆ.
ಜಿಡಿಪಿಯ ಶೇಕಡಾ 50 ರಷ್ಟು ಹೆಚ್ಚಾದ ಸಾಲದ ಮೊತ್ತ..
ಇನ್ನೂ ಪಾಕಿಸ್ತಾನಕ್ಕೆ ಎಲ್ಲ ವಿಚಾರಗಳಲ್ಲೂ ಬೆನ್ನಿಗೆ ನಿಂತು ಸಹಾಯ ಮಾಡುವ ಚೀನಾದಿಂದಲೂ ಪಾಕ್ ಸಾಲ ಪಡೆದಿದೆ. ಚೀನಾ – ಪಾಕಿಸ್ತಾನ ಆರ್ಥಿಕ ಕಾರಿಡಾರ್ ಹಾಗೂ ಇನ್ನಿತರ ದ್ವಿಪಕ್ಷೀಯ ಒಪ್ಪಂದಗಳ ಅಡಿಯಲ್ಲಿ ಚೀನಾ ಸುಮಾರು 8.4 ಲಕ್ಷ ಕೋಟಿ ಪಾಕ್ ರೂಪಾಯಿಗಳಷ್ಟು ಸಾಲವನ್ನು ಉಗ್ರರಾಷ್ಟ್ರ ಪಾಕಿಸ್ತಾನಕ್ಕೆ ನೀಡಿದೆ. ಈ ಎಲ್ಲ ಕಾರಣಗಳಿಂದ ಸಾಲದ ಮೊತ್ತ ಪಾಕಿಸ್ತಾನದ ಜಿಡಿಪಿಯ ಶೇಕಡಾ 50 ರಷ್ಟಕ್ಕೆ ತಲುಪಿದೆ. ಅಲ್ಲದೆ ಪಾಕ್ ಉಗ್ರ ಪೋಷಕ ಕೊಳಕು ಕೆಲಸ ಹೀಗೆ ಮುಂದುವರೆಸಿದರೆ ಸಂಪೂರ್ಣ ಭಿಕ್ಷುಕ ರಾಷ್ಟ್ರವಾಗುವ ಕಾಲ ದೂರವಿಲ್ಲ.