ಬೆಂಗಳೂರು : ಚಿನ್ನದ ಮೇಲೆ ಹೂಡಿಕೆ ಮಾಡೋರಿಗೆ ಇದು ಬೆಸ್ಟ್ ಟೈಮ್. ಸದ್ಯ ಚಿನ್ನದ ಬೆಲೆಯೂ ಇಳಿಕೆಯಾಗ್ತಿದೆ. ಕೆಲವೇ ದಿನಗಳಲ್ಲಿ ಆಷಾಢ ಮಾಸವೂ ಶುರುವಾಗ್ತಿದೆ. ಹೂಡಿಕೆ ಮಾಡೋರೆಲ್ಲಾ ಚಿನ್ನದ ಮೇಲೆ ಹಣ ಹಾಕಿದ್ರೆ ಹೆಚ್ಚು ಲಾಭ ಗಳಿಸಬಹುದು.
ಪ್ರಪಂಚದಲ್ಲೇ ಅತೀ ಹೆಚ್ಚು ಚಿನ್ನ ಖರೀದಿ ಮಾಡುವ ದೇಶವೆಂದರೆ ಭಾರತ. ಭಾರತೀಯರ ನರನಾಡಿಗಳಲ್ಲೂ ಚಿನ್ನವೇ ಹಾಸುಹೊಕ್ಕಾಗಿದೆ. ಆಭರಣಗಳಿಂದ ಹಿಡಿದು, ಚಿನ್ನದ ಹಲ್ಲು, ಹಲ್ಲುಜ್ಜುವ ಬ್ರಷ್, ಚಿನ್ನದ ರ‍್ಟ್, ಚಿನ್ನದ ತಟ್ಟೆ-ಲೋಟ, ಚಿನ್ನದ ಚೇರ್, ಟಾಯ್ಲೆಟ್ ಫಿಟ್, ಕಾಲು ಹಾಕಿಕೊಳ್ಳೋ ಖರ‍್ಚಿಯನ್ನೂ ಚಿನ್ನದಲ್ಲೇ ಮಾಡಿಸಿಕೊಳ್ತಾರೆ. ಅಷ್ಟರ ಮಟ್ಟಿಗೆ ಭಾರತೀಯರು, ಹಳದಿ ಲೋಟದ ವ್ಯಾಮೋಹ ಹೊಂದಿದ್ದಾರೆ.
ಶತ ಶತಮಾನಗಳಿಂದ, ತಲೆತಲಾಂತರದಿಂದಲೂ ಭಾರತದಲ್ಲಿ ಚಿನ್ನಕ್ಕೇ ಹೆಚ್ಚಿನ ಮೌಲ್ಯ ಮತ್ತು ಪ್ರಾಮುಖ್ಯತೆ ಕೊಡ್ತಾರೆ. ಇನ್ನು, ಹಬ್ಬ ಹರಿದಿನ, ಜಾತ್ರೆ, ಮದುವೆ, ಧರ‍್ಮಿಕ ಕರ‍್ಯಕ್ರಮಗಳಲ್ಲಿ, ಮೈ ಮೇಲೆ ಬಂಗಾರ ಹೇರಿಕೊಂಡು ಪ್ರರ‍್ಶನ ಮಾಡೋರೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಹಳದಿ ಲೋಹವನ್ನು ಹೂಡಿಕೆಯ ಪ್ರಮುಖ ಭಾಗವಾಗಿ ಪರಿಗಣಿಸಲಾಗ್ತಿದೆ.
ಕೆಲ ರ‍್ಷಗಳಿಂದ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದಾಗಿ, ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಯಲ್ಲಿ ಅಸ್ಥಿರತೆ ಕಂಡು ಬಂದಿತ್ತು. ಮತ್ತೆ ಅಂತದ್ದೇ ಪರಿಸ್ಥಿತಿ ಮಧ್ಯಪ್ರಾಚ್ಯ ದೇಶಗಳಾದ ಇಸ್ರೇಲ್ ಮತ್ತು ಇರಾನ್ ನಡುವಿನ ಸಂರ‍್ಷ ಕಾರಣದಿಂದ ಎದುರಾಗಿದೆ. ಪರಿಣಾಮ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ತಲೆಕೆಡಿಸಿಕೊಂಡಿದ್ದಾರೆ. ಇನ್ನು, ಅಮೆರಿಕಾ-ಚೀನಾ ನಡುವಿನ ವ್ಯಾಪಾರ ಸಂರ‍್ಷ, ಸುಂಕ ಹೆಚ್ಚಳ ನಿಲುವು ಹೂಡಿಕೆ ಮೇಲಿನ ಅನಿಶ್ಚಿತತೆಯನ್ನು ದುಪ್ಪಟ್ಟು ಮಾಡಿದೆ. ಹೀಗಾಗಿ ಹೂಡಿಕೆದಾರರು ಚಿನ್ನ ಹಾಗೂ ಬೆಳ್ಳಿಯ ಬಾಂಡ್ಗಳ ಮೊರೆ ಹೋಗಿದ್ದು, ಹಳದಿ ಲೋಹದ ಮೇಲೆ ಹೆಚ್ಚು ಬಂಡವಾಳ ಹಾಕುತ್ತಿದ್ದಾರೆ.
ಜಾಗತಿಕ ಚಿನ್ನದ ಮಾರುಕಟ್ಟೆಯ ಏರಿಳಿತ ಭಾರತದಲ್ಲಿ ಚಿನ್ನದ ದರವನ್ನು ನರ‍್ಧರಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಭೌಗೋಳಿಕ, ರಾಜಕೀಯ ಘಟನೆಗಳು, ರ‍್ಥಿಕ ಪರಿಸ್ಥಿತಿಗಳು ಮತ್ತು ಕರೆನ್ಸಿ ಏರಿಳಿತಗಳಂತಹ ಅಂಶಗಳು ಚಿನ್ನದ ದರದ ಮೇಲೆ ನೇರ ಪರಿಣಾಮ ಬೀರುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳು ಅನಿಶ್ಚಿತತೆಗೆ ಒಳಗಾದಾಗ ಹೂಡಿಕೆದಾರರು ಹೆಚ್ಚಾಗಿ ಚಿನ್ನದತ್ತ ಮುಖ ಮಾಡುತ್ತಾರೆ. ಇನ್ನೂ ಪ್ರಸ್ತುತ ನಾವು ಚಿನ್ನದ ಬೆಲೆಯನ್ನು ಗಮನಿಸಿದಾಗ..
೨೪ ಕ್ಯಾರೆಟ್ – ೧ ಗ್ರಾಂ
ಇಂದು ೧೦,೧೫೧
ನಿನ್ನೆ ೧೦,೧೬೮
೧೭ ರೂಪಾಯಿ ಇಳಿಕೆ
೨೪ ಕ್ಯಾರೆಟ್ – ೧೦ ಗ್ರಾಂ
ಇಂದು ೧,೦೧,೫೧೦ ರೂ.
ನಿನ್ನೆ ೧,೦೧,೬೮೦ ರೂ.
೧೭೦ ರೂಪಾಯಿ ಕಡಿಮೆ
೨೨ ಕ್ಯಾರೆಟ್ ಚಿನ್ನ – ೧ ಗ್ರಾಂ
ಇಂದು ೯,೩೦೫ ರೂ.
ನಿನ್ನೆ ೯,೩೨೦ ರೂ.
೧೫ ರೂಪಾಯಿ ಕಡಿಮೆ
೨೨ ಕ್ಯಾರೆಟ್ ಚಿನ್ನ – ೧೦ ಗ್ರಾಂ
ಇಂದು ೯೩,೦೫೦ ರೂ.
ನಿನ್ನೆ ೯೩,೨೦೦ ರೂ.
೧೫೦ ರೂಪಾಯಿ ಕಡಿಮೆ
ಹೂಡಿಕೆದಾರರಿಗೆ ವರದಾನವಾಗಿ ಜುಲೈ ೮ರಿಂದ ಆಷಾಢ ಮಾಸ ಶುರುವಾಗುತ್ತಿದೆ. ಹೀಗಾಗಿ ಚಿನ್ನ ಇಳಿಮುಖದತ್ತ ಸಾಗಿದೆ. ನಿನ್ನೆ ೧೦,೧೬೮ ರೂಪಾಯಿ ಇದ್ದ ೨೪ ಕ್ಯಾರೆಟ್ನ ೧ ಗ್ರಾಂ ಚಿನ್ನದ ಬೆಲೆ, ಇಂದು ೧೦,೧೫೧ ರೂಪಾಯಿ ಆಗಿದ್ದು, ೧೭ ರೂಪಾಯಿ ಇಳಿಕೆಯಾಗಿದೆ. ನಿನ್ನೆ ೧,೦೧,೬೮೦ ರೂಪಾಯಿ ಇದ್ದ ೨೪ ಕ್ಯಾರೆಟ್ನ ೧ ಗ್ರಾಂ ಚಿನ್ನದ ಬೆಲೆ ,ಇಂದು ೧,೦೧,೫೧೦ ರೂ. ಆಗಿದ್ದು, ೧೭೦ ಕಡಿಮೆ ಆಗಿದೆ. ಇನ್ನು ೨೨ ಕ್ಯಾರೆಟ್ ಚಿನ್ನದ ಬೆಲೆ ನಿನ್ನೆಗಿಂತ ಇಂದು, ೧ ಗ್ರಾಂಗೆ ೧೫ ರೂಪಾಯಿ, ೧೦ ಗ್ರಾಂಗೆ ೧೨೦ ರೂಪಾಯಿ ಇಳಿಕೆಯಾಗಿದೆ.
ಹಳದಿ ಲೋಹದ ಬೆಲೆ ಇಳಿಕೆಯತ್ತಾ ಸಾಗಿದ್ದು, ಹೂಡಿಕೆದಾರರಿಗೆ ಇಂದು ಸೂಕ್ತ ಸಮಯವಾಗಿದೆ. ಬಹುಮುಖ್ಯವಾಗಿ ಭಾರತದಲ್ಲಿ ಆಷಾಢ ಮಾಸದಲ್ಲಿ ಶುಭ ಸಮಾರಂಭಗಳನ್ನು ಮಾಡುವುದಿಲ್ಲ. ಈ ವೇಳೆ ಚಿನ್ನದ ಖರೀದಿ ಕಡಿಮೆ ಇರಲಿದ್ದು, ಗ್ರಾಹಕರನ್ನು ಸೆಳೆಯಲು ಚಿನ್ನದ ಅಂಗಡಿಗಳು ಹಲವು ರಿಯಾಯಿತಿಗಳನ್ನು ಕೊಡಲಿದ್ದಾರೆ. ಇದು ಕೂಡ ಚಿನ್ನದ ಮೇಲೆ ಹೂಡಿಕೆ ಮಾಡೋರಿಗೆ ಹೇಳಿ ಮಾಡಿಸಿದ ಸಮಯವಾಗಿದೆ.