Wednesday, June 18, 2025

Latest Posts

ಹಿರಿಜೀವಗಳ ಒಂಟಿತನಕ್ಕೆ ಸಂಜೀವಿನಿ! : ನಾಗರಿಕರ ಕೈ ಹಿಡಿದ ಓಲ್ಡ್ ಏಜ್ ಮ್ಯಾಟ್ರಿಮೊನಿ!..

- Advertisement -

ಬೆಂಗಳೂರು : ವರ ಸಿಗ್ತಿಲ್ಲ.. ವಧು ಸಿಕ್ತಿಲ್ಲ ಅಂತಾ ಯಾರೋ ಕೂಡ ಕೊರಗುವ ಅಗತ್ಯವಿಲ್ಲ. ನಮ್ಮ ಬೆರಳ ತುದಿಯಲ್ಲೇ ನಮ್ಮಿಷ್ಟದ ಸಂಗಾತಿಯನ್ನು ಹುಡುಕಿಕೊಳ್ಳುವ ಕಾಲ ಇದು. ಇಷ್ಟು ದಿನ 50 ವರ್ಷದೊಳಗೆ ಜೋಡಿಗಳನ್ನು ಜೊತೆಯಾಗಿಸ ಬಲ್ಲ ಮ್ಯಾಟ್ರಿಮೊನಿಗಳನ್ನು ಕೇಳಿದ್ದೀರಿ. ಆದ್ರೆ ಹಿರಿಯ ಜೀವಿಗಳಿಗಾಗಿಯೂ ಮ್ಯಾಟ್ರಿಮೋನಿ ಇದೆ ಅಂದ್ರೆ ನಂಬಲೇಬೇಕು.

ಒಡಿಶಾದಲ್ಲೊಂದು ಓಲ್ಡ್​ ಏಜ್ ಮ್ಯಾಟ್ರಿಮೊನಿ ಶುರುವಾಗಿದೆ. ಒಂಟಿತನದಲ್ಲಿರುವ ಹಿರಿಯ ಜೀವಿಗಳಿಗೆ ಜೋಡಿ ಹುಡುಕಿಕೊಡುವ ಕೆಲಸ ಮಾಡುತ್ತಿದೆ. ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಯಾವ ವಯಸ್ಸಿನಲ್ಲಾದ್ರೂ ಪ್ರೀತಿ ಚಿಗುರೊಡೆಯಬಹುದು. ಹೀಗಾಗಿ ನಾವು ಹಿರಿಜೀವಗಳಿಗಳಿಗೂ ಜೋಡಿ ಹುಡುಕುವ ಕೆಲಸ ಮಾಡುತ್ತಿದ್ದೇವೆ ಅಂತಾ ಹೇಳಿಕೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಓಲ್ಡ್ ಮ್ಯಾಟ್ರಿಮೊನಿಯಲ್ಲಿ ನೋಂದಾಯಿಸಿ ಕೊಳ್ಳುವವರ ಸಂಖ್ಯೆ ಶೇಕಡ 40ರಷ್ಟು ಹೆಚ್ಚಾಗಿದೆ.

ಕೋವಿಡ್ ಬಳಿಕ ಬದುಕಿನಲ್ಲಿ ಸಂಗಾತಿಯ ಮಹತ್ವ ಹಾಗೂ ಪ್ರೀತಿ ಪಾತ್ರರ ಆದ್ಯತೆಯು ಜನರಿಗೆ ಗೊತ್ತಾಗಿದೆ. 52 ವರ್ಷದ ಉದ್ಯಮಿಯೊಬ್ಬರು ತಮ್ಮ ಪತ್ನಿಯನ್ನು ಅನಾರೋಗ್ಯದಿಂದ ಕಳೆದುಕೊಂಡ ನಂತರ ಇತ್ತೀಚೆಗೆ ವಿಶೇಷ ವೈವಾಹಿಕ ಸೇವೆಯ ಮೂಲಕ ಪ್ರೀತಿಯನ್ನು ಕಂಡುಕೊಂಡಿದ್ದಾರೆ. ಎರಡನೇ ಮದುವೆ ಮತ್ತು ತಡವಾಗಿ ವಿವಾಹವಾಗುವ ಸನ್ನಿವೇಶಗಳು ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ, ಗಮನಾರ್ಹ ಬದಲಾವಣೆಗಳು ಆಗುತ್ತಿವೆ.

ಓಲ್ಡ್ ಏಜ್ ಮ್ಯಾಟ್ರಿಮೊನಿಯಲ್ಲಿ ಸಂಗಾತಿ ಸಿಕ್ಕ ಬಳಿಕ ವ್ಯಕ್ತಿಯೊಬ್ಬರು ತಮ್ಮ ಸಂಭ್ರಮ ಹಂಚಿಕೊಂಡಿದ್ದೀಗೆ. ನಾನು ಮತ್ತೆ ಸಂತೋಷವನ್ನು ಕಂಡುಕೊಳ್ಳುತ್ತೇನೆ ಅಂತ ಎಂದಿಗೂ ಭಾವಿಸಿರಲಿಲ್ಲ. ನನ್ನ ಹೊಸ ಪತ್ನಿಯು ನನ್ನ ಬಾಳಿಗೆ ಬಂದ ನಂತರ ಎಲ್ಲವೂ ಬದಲಾಯಿತು. ನಮ್ಮ ಅನುಭವಗಳು ಮತ್ತು ತಿಳುವಳಿಕೆಗಳು ನಮ್ಮ ಸಂಬಂಧವನ್ನು ವಿಶೇಷವಾಗಿಸುತ್ತಿದೆ ಅಂತಾ ಹೇಳಿಕೊಂಡಿದ್ದಾರೆ.

ಈ ಹಿಂದೆ, ವಿಧವೆಯರು ಅಥವಾ ವಿಚ್ಛೇದಿತ ಮಹಿಳೆಯರು, ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತ ಕಾಲ ಕಳೆಯಬೇಕಿತ್ತು. ಆದ್ರೀಗ ತಮ್ಮ ಸಂಗಾತಿಯಯೊಂದಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಕೆಲವು ದಿನಗಳ ಹಿಂದಷ್ಟೇ 50 ವರ್ಷದ ಮಹಿಳೆಯೊಬ್ಬರು, ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುವಂತೆ, ಓಲ್ಡ್ ಏಜ್ ಮ್ಯಾಟ್ರಿಮೊನಿ ಸಂಪರ್ಕಿಸಿದ್ದರಂತೆ. ಈ ಬಗ್ಗೆ ಓಲ್ಡ್ ಏಜ್ ಮ್ಯಾಟ್ರಿಮೊನಿ ಸಂಸ್ಥೆಯ ಅಧಿಕಾರಿ ಸಂತೋಷ ಪಾಣಿ ಹೇಳಿಕೊಂಡಿದ್ದಾರೆ.

ಓಲ್ಡ್ ಮ್ಯಾಟ್ರಿಮೊನಿಯಲ್ಲಿ ವಿವರವಾದ ಪರಿಶೀಲನಾ ಪ್ರಕ್ರಿಯೆಗಳು ಮತ್ತು ವಿಶೇಷ ಸಮಾಲೋಚನೆ ಸೇವೆಗಳನ್ನು ನೀಡಲಾಗ್ತಿದೆ. ಮ್ಯಾಟ್ರಿಮೊನಿ ಸೇವೆಗಳನ್ನು ಒದಗಿಸುವ ಕೆಲವು ಸಂಸ್ಥೆಗಳು ಹಿರಿಯ ನಾಗರಿಕರಿಗಾಗಿಯೇ ಮೀಟ್-ಆ್ಯಪ್‌ಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಕೇವಲ ಬಾಳ ಸಂಗಾತಿ ಮಾತ್ರವಲ್ಲ. ಮದುವೆಗೂ ಮುನ್ನ ಆಸ್ತಿಯಲ್ಲೂ ಸಮಾನ ಹಕ್ಕನ್ನು ಸಹ ಕಲ್ಪಿಸಿಕೊಡುತ್ತಿವೆ. ಅಂದರೆ ಹಿರಿಯ ಮಹಿಳೆ ಅಥವಾ ಪುರುಷರು ಮದುವೆಗೂ ಮುನ್ನವೇ ಆಸ್ತಿ ಹಂಚಿಕೆ ಬಗ್ಗೆ ಮೊದಲೇ ಒಮ್ಮತದ ನಿರ್ಧಾರಕ್ಕೆ ಬಂದು, ಬಳಿಕ ಮದುವೆಯಾಗುತ್ತಿದ್ದಾರೆ.

- Advertisement -

Latest Posts

Don't Miss