Life lesson: ಓರ್ವ ಮನುಷ್ಯ ಜೀವನದಲ್ಲಿ ಸಕ್ಸಸ್ ಕಾಣಬೇಕು ಅಂದ್ರೆ, ಅವರು ಬರೀ ಕೆಲಸ ಮಾಡಿದರೆ ಸಾಲದು. ಬದಲಾಗಿ ಅವನ ಯೋಚನಾ ಶಕ್ತಿ ಚೆನ್ನಾಗಿರಬೇಕು. ಹೆಚ್ಚು ತಾಳ್ಮೆ ಇರಬೇಕು. ಜೀವನದಲ್ಲಿ ಶಿಸ್ತಿರಬೇಕು. ಇದೆಲ್ಲ ಇದ್ದಾಗ ಮಾತ್ರ ನಾವು ಜೀವನದಲ್ಲಿ ಯಶಸ್ವಿಯಾಗೋಕ್ಕೆ ಸಾಧ್ಯ. ಅಲ್ಲದೇ ನಾವು ಪ್ರತೀ ದಿನ ನಮ್ಮಲ್ಲಿ 3 ಪ್ರಶ್ನೆಗಳನ್ನು ಕೇಳಬೇಕಂತೆ. ಮತ್ತೆ ಆ ತಕ್ಷಣವೇ ಉತ್ತರ ಹುಡುಕಿ, ಅದನ್ನು ಜೀವನದಲ್ಲಿ ಅಳವಡಿಸಿಕ“ಳ್ಳಬೇಕು. ಹಾಗಾದ್ರೆ ಆ ಪ್ರಶ್ನೆ ಯಾವುದು ಅಂತಾ ತಿಳಿಯೋಣ ಬನ್ನಿ.
ಯಾವ ಅಭ್ಯಾಸ ತ್ಯಜಿಸಬೇಕು..?: ನೀವು ಬೆಳಿಗ್ಗೆ ಎದ್ದ ತಕ್ಷಣ, ನಿಮ್ಮ ಯಶಸ್ಸಿಗೆ ಯಾವ ಅಭ್ಯಾಸ ಅಡ್ಡಿಯಾಗುತ್ತಿದೆ ಎಂದು ಯೋಚಿಸಬೇಕು. ಆ ಅಭ್ಯಾಸವನ್ನು ತ್ಯಜಿಸುವ ಬಗ್ಗೆ ನಿಮ್ಮಲ್ಲಿ ನೀವು ಪ್ರಶ್ನಿಸಬೇಕು. ಮತ್ತು ಆ ಅಭ್ಯಾಸವನ್ನು ಹೇಗೆ ತ್ಯಜಿಸಬೇಕು ಎಂದು ಯೋಚಿಸಬೇಕು. ಆ ಅಭ್ಯಾಸಗಳು, ಆಲಸ್ಯವಾಗಿರಬಹುದು, ಯಾವುದೇ ವಿಷಯದ ಬಗೆಗಿನ ಚಿಂತೆ ಇರಬಹುದು, ಅಥವಾ ಬೇರೆ ಯಾವುದೇ ಅಭ್ಯಾಸ ಇರಬಹುದು. ಅದನ್ನು ತ್ಯಜಿಸುವ ನಿರ್ಧಾರ ಮಾಡಿ.
ಭಯವಿಲ್ಲದೇ, ಆರಾಮವಾಗಿ ಇಂದಿನ ದಿನ ಶುರು ಮಾಡಬಲ್ಲೆನಾ.?: ಕೆಲವರಿಗೆ ಯಾವುದಾದರೂ ವಿಷಯದ ಬ್ಗಗೆ ಭಯ, ಹಿಂಜರಿಕೆ, ನಾಟಕೀಯವಾಗಿ ಜೀವನ ಮಾಡಲೇಬೇಕಾದ ಪರಿಸ್ಥಿತಿ ಇದ್ದರೆ, ಅಂಥ ಪರಿಸ್ಥಿತಿಯಲ್ಲಿ ಅವರು ಯಶಸ್ಸು ಸಾಧಿಸಲು ಸಾಧ್ಯವೇ ಆಗುವುದಿಲ್ಲ. ಏಕೆಂದರೆ, ಅವರಿಗೆ ಕಿಂಚಿತ್ತು ಮಾನಸಿಕ ನೆಮ್ಮದಿ ಇರುವುದಿಲ್ಲ. ಹಾಗಾಗಿ ಇಂಥ ವಿಷಯಗಳಿಗೆ ಆದಷ್ಟು ಬೇಗ ಪರಿಹಾರ ಕಂಡುಕ“ಳ್ಳಬೇಕು. ಅಥವಾ ಇದನೆನ್ಲ್ಲ ನಿರ್ಲಕ್ಷಿಸಿ ಬದುಕುವುದನ್ನು ಕಲಿಯಬೇಕು.
ಯಶಸ್ವಿಯಾಗಲು ಇಂದು ನಾನೇನು ಮಾಡಬೇಕು..?: ಇನ್ನು ನೀವು ಯಾವ ವಿಷಯದಲ್ಲಿ ಯಶಸ್ವಿಯಾಗಬೇಕೆಂದು ಬಯಸಿದ್ದೀರೋ, ಆ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮಲ್ಲಿ ಇಂದು ಯಾವ ರೀತಿಯ ಇಂಪ್ರೂವ್ಮೆಂಟ್ ಮಾಡಿಕ“ಳ್ಳಬೇಕು ಎಂಬುದರ ಬಗ್ಗೆ ಯೋಚಿಸಿ, ಅದನ್ನು ಜೀವನದಲ್ಲಿ ಅಳವಡಿಸಿಕ“ಳ್ಳಿ.




