Movie News: ಸಂಜು ವೆಡ್ಸ್ ಗೀತಾ ಪಾರ್ಟ್ 2 ಭಾಗವನ್ನು ನಿರ್ಮಿಸಿ, ನಿರ್ದೇಶಿಸಿರುವ ನಿರ್ದೇಶಕ ನಾಗಶೇಖರ್, ನಟಿ ರಚಿತಾ ರಾಮ್ ವಿರುದ್ಧ ಗರಂ ಆಗಿದ್ದಾರೆ. ತಾವು ಕೋಟಿ, ಕೋಟಿ ಸಾಲ ಮಾಡಿ, ಈ ಸಿನಿಮಾ ನಿರ್ಮಾಣ ಮಾಡಿದ್ದು, ಚಿತ್ರದ ಪ್ರಮೋಷನ್ಗೆ ಬರಲು ರಚಿತಾ ನಿರಾಕರಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಬಗ್ಗೆ ಕರ್ನಾಟಕ ಟಿವಿ ಜತೆ ಮಾತನಾಡಿರುವ ನಾಗಶೇಖರ್, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನವರಿ 10ನೇ ತಾರೀಖು ನಾವು ಸಿನಿಮಾ ರಿಲೀಸ್ ಮಾಡಬೇಕು ಎಂದು ನಿರ್ಧರಿಸಿದ್ದೆವು. ಆದರೆ ಅದೇ ಸಮಯದಲ್ಲಿ ಸಿನಿಮಾಗೆ ಸಂಬಂಧವೇ ಇಲ್ಲದ ಓರ್ವ ವ್ಯಕ್ತಿ ಸಿನಿಮಾಗೆ ಸ್ಟೇ ತರುತ್ತಾರೆ. ಹಾಗಾಗಿ ನಾವು ಜಸ್ಟ್ ಟ್ರ್ೇಲರ್ ರಿಲೀಸ್ ಮಾಡಿದ್ದೆವು. ಅಲ್ಲಿಯವರೆಗೆ ಎಲ್ಲ ಪ್ರೆಸ್‌ಮೀಟ್, ಕಾರ್ಯಕ್ರಮ ಎಲ್ಲದರಲ್ಲೂ ರಚಿತಾ ರಾಮ್ ಭಾಗವಹಿಸಿದ್ದರು. ಅದು ಸತ್ಯ.
ಆದರೆ ಜೂನ್‌ನಲ್ಲಿ ನಾವು ಫಿಕ್ಸ್ ಮಾಡಿದ ಯಾವುದೇ ಕಾರ್ಯಕ್ರಮಕ್ಕೂ ರಚಿತಾ ಬರಲಿಲ್ಲ. ಅಲ್ಲದೇ ವಾಯ್ಸ್ ಡಬ್ ಮಾಡಲು ಕರೆದಾಗ, ಅವರ ಮ್ಯಾನೇಜರ್, ರಚಿತಾ ಅವರು ಬ್ಯುಸಿ ಇದ್ದಾರೆಂದು ಹೇಳಿದರು. ಹಾಗಾಗಿ ನಾನು ಬೇರೆಯವರ ಬಳಿ ಡಬ್ ಮಾಡಿಸಿದೆ. ಜೂನ್ 6ಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎಂದು ಪ್ರೆಸ್‌ಮೀಟ್ ಮಾಡಿಸಿ, ಅನೌನ್ಸ್ ಮಾಡಲಾಯಿತು ಎಂದು ನಾಗಶೇಖರ್ ಹೇಳಿದ್ದಾರೆ.
ಆದರೆ ಜೂನ್‌ನಲ್ಲಿ ನಡೆದ ಪ್ರೆಸ್‌ಮೀಟ್‌ನಿಂದ ಇಲ್ಲಿಯವರೆಗೂ ಯಾವುದೇ ಪ್ರೆಸ್‌ಮೀಟ್ ಅಥವಾ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವ 1 ವೀಡಿಯೋ ತೋರಿಸಲು ಹೇಳಿ ಅಂತಾ ನಾಗಶೇಖರ್ ಹೇಳಿದ್ದಾರೆ. ಅಲ್ಲದೇ ರಚಿತಾ ರಾಮ್ ಮೈ ತೋರ್ಸಿ ಸಿನಿಮಾ ಮಾಡಿಲ್ಲ, ಅಶ್ಲೀಲವಾಾಗಿ ನಟಿಸಿಲ್ಲ ಎಂದು ನಾಗಶೇಖರ್ ಹೇಳಿದ್ದಾರೆ. ಈ ಬಗ್ಗೆ ನಾಗಶೇಖರ್ ಇನ್ನೂ ಏನೇನು ವಿವರಿಸಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ.