Life Lesson: ಗಂಡ ಹೆಂಡ್ತಿ ಸಂಬಂಧದ ಮಧ್ಯೆ ಸಮಸ್ಯೆಗಳು ಉಂಟಾಗೋದು ಯಾವಾಗ? ಮತ್ತು ಯಾರಿಂದ?

Life Lesson: ಮನೋವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು, ಪತಿ ಪತ್ನಿ ಸಂಬಂಧದಲ್ಲಿ ಬಿರುಕು ಬರೋದು ಹೇಗೆ..? ಯಾವ ಸಂದರ್ಭದಲ್ಲಿ ನಾವು ಯಾವ ನಿರ್ಧಾರಗಳನ್ನು ತೆಗೆದುಕ“ಂಡು, ನಮ್ಮ ವೈವಾಹಿಕ ಜೀವನವನ್ನು ಸರಿಪಡಿಸಿಕ“ಳ್ಳಬಹುದು ಅಂತಾ ವಿವರಿಸಿದ್ದರು. ಇದೀಗ ಸೋಶಿಯಲ್ ಮೀಡಿಯಾ ಯಾವ ರೀತಿಯಾಗಿ ಸಂಬಂಧಗಳನ್ನು ಮುರಿಯುತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ.

ವೈದ್ಯರು ಹೇಳುವ ಪ್ರಕಾರ, ಹೆಣ್ಣು ಮಕ್ಕಳು ಮದುವೆಯಾದ ಬಳಿಕ ನಿಮಗೆ ಪ್ರೀತಿ, ಕಾಳಜಿ ಸಿಗುತ್ತಿಲ್ಲ ಎನ್ನುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆಯಬೇಡಿ. ಏಕೆಂದರೆ ನಿಮ್ಮ ಬರವಣಿಗೆಯ ಅರ್ಥವನ್ನಿರತು, ಸೋಶಿಯಲ್ ಮೀಡಿಯಾ ಮೂಲಕವೇ ನಿಮ್ಮ ಜತೆ ಕ್ಲೋಸ್ ಆಗಿ, ನಿಮ್ಮ ಮೈಂಡ್ ವಾಶ್ ಮಾಡುವ ಆಟವಾಡಬಹುದು ಅಂತಾರೆ ವೈದ್ಯರು.

ಏಕೆಂದರೆ ಹಾಗೆ ಮಾತನಾಡುವವರು, ನಿಮ್ಮ ಬಳಿ ಎಮೋಷನಲ್ ಆಗಿ ಮಾತನಾಡಿ, ನಿಮ್ಮನ್ನು ಬೀಳಿಸಿಕ“ಂಡು ಬಿಡುತ್ತಾರೆ. ಬಳಿಕ ನಿಮ್ಮ ಜೀವನದ ಎಲ್ಲ ವಿಷಯಗಳನ್ನು ಕೆದಕಿ ಕೆದಕಿ ಕೇಳಿ ಕೇಳಿ, ನಿಮ್ಮನ್ನು ಅಥವಾ ನಿಮ್ಮ ಪರಿವಾರವನ್ನು ಅಥವಾ ನಿಮ್ಮ ಪತಿಯನ್ನು ಬ್ಲಾಕ್‌ಮೇಲ್ ಮಾಡಬಹುದು. ಹಾಗಾಗಿ ನಿಮ್ಮ ಜತೆ ಮಾತನಾಡಲು, ನಿಮ್ಮ ಸಂಂಸಾರದ ವಿಷಯವನ್ನು ಕೇಳುವಂಥವರನ್ನು ನೀವು ಇಗ್ನೋರ್ ಮಾಡುವುದು ಉತ್ತಮ ಅಂತಾರೆ ವೈದ್ಯರು. ಈ ಬಗ್ಗೆ ವಿವರವಾಗಿ ತಿಳಿಯಲು ಈ ವೀಡಿಯೋ ನೋಡಿ.

About The Author