Political News: ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಬಗ್ಗೆ ಇರುವ ಮಾತುಕತೆಗಳೆಲ್ಲ ಊಹಾಪೋಹಗಳು ಅಂತಾ ಜೋಶಿ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿರುವ ಜೋಶಿ, ಪ್ರಧಾನಿ ಮೋದಿ ಮತ್ತು ನಡ್ಡಾ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ, ಚೆನ್ನಾಗಿದೆ. ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ತೆಗೆದುಕ“ಳ್ಳುತ್ತಾರೆ ಎಂದು ಜೋಶಿ ಹೇಳಿದ್ದಾರೆ.
ಅಲ್ಲದೇ ಆರ್.ಅಶೋಕ್ ಅವರು ದೆಹಲಿಗೆ ಭೇಟಿ ನೀಡಿದ್ದು ನಿಜ. ಆದರೆ ನಾನು ಈ ಬಗ್ಗೆ ಕೇಳಿದಾಗ, ನಾನು ನನ್ನ ಎಜುಕೇಶನಲ್ ಇನ್‌ಸ್ಟಿಟ್ಯೂಶನ್‌ಗೆ ಲೈಸೆನ್ಸ್ ಪಡೆದುಕ“ಳ್ಳಲು ಬಂದಿದ್ದೇನೆ ಎಂದು ಹೇಳಿದ್ದರು. ಧರ್ಮೇಂದ್ರ ಪ್ರಧಾನ್ ಅವರ ಭೇಟಿಗೆ ನಾನೇ ಅವಕಾಶ ಮಾಡಿಕ“ಟ್ಟಿದ್ದೇನೆ ಅಂತಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಆದರೆ ನೀವು ದೆಹಲಿ ಬಂದ್ರೆ ಸಾಕು, ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿಯೇ ಬಂದಿದ್ದಾರೆ ಅಂತಾ ಅಂದುಕ“ಂಡರೆ ನಾವೇನು ಉತ್ತರ ಹೇಳಬೇಕು ಎಂದು ಜೋಶಿ ಪ್ರಶ್ನಿಸಿದ್ದಾರೆ. ಹಾಗೇನೂ ಇಲ್ಲ. ಪಕ್ಷದ ನಾಯಕತ್ವ ಶಕ್ತಿಶಾಲಿಯಾಗಿದೆ. ನಮ್ಮ ನೇತೃತ್ವದ ಬಗ್ಗೆ ನಮಗೆ ಅಭಿಮಾನವಿದೆ. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಚರ್ಚೆ ಮಾಡಿಯೇ ನಮ್ಮ ನಾಯಕರು ಎಲ್ಲವನ್ನೂ ನಿರ್ಣಯಿಸುತ್ತಾರೆ ಅಂತಾ ಜೋಶಿ ಹೇಳಿದ್ದಾರೆ.




