Recipe: ಬೇಕಾಗುವ ಸಾಮಗ್ರಿ: 1ಕಪ್ ಪಾಲಕ್, ಅರ್ಧ ಕಪ್ ಕಡಲೆ ಹುಡಿ, 2 ಸ್ಪೂನ್ ಕಾರ್ನ್ ಫ್ಲೋರ್, 4 ಆಲೂಗಡ್ಡೆ, ಚಿಕ್ಕ ತುಂಡು ಶುಂಠಿ, 10 ಎಸಳು ಬೆಳ್ಳುಳ್ಳಿ, ಹಸಿಮೆಣಸು, ಜೀರಿಗೆ, ಸೋಂಪು, ಕೊತ್ತೊಂಬರಿ ಕಾಳು, ಕರಿಯಲು ಎಣ್ಣೆ, ಉಪ್ಪು.
ಮಾಡುವ ವಿಧಾನ: ಪಾಲಕ್‌ನ್ನು ಸಣ್ಣಗೆ ಹೆಚ್ಚಿ, ಆಲೂಗಡ್ಡೆಯನ್ನು ತುರಿಯಬೇಕು. ಮಿಕ್ಸಿಂಗ್ ಬೌಲ್‌ಗೆ ಕಡಲೆ ಹುಡಿ, ಕಾರ್ನ್ ಫ್ಲೋರ್, ನೀರು, ಉಪ್ಪು, ಅರಿಶಿನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಪಾಲಕ್, ಆಲೂಗಡ್ಡೆ ತುರಿ ಕೂಡ ಸೇರಿಸಬೇಕು.
ಬಳಿಕ ಶುಂಠಿ, 10 ಎಸಳು ಬೆಳ್ಳುಳ್ಳಿ, ಹಸಿಮೆಣಸು, ಜೀರಿಗೆ, ಸೋಂಪು, ಕೊತ್ತೊಂಬರಿ ಕಾಳು ಇವೆಲ್ಲವನ್ನೂ ಕುಟ್ಟಣಿಗೆಗೆ ಹಾಕಿ, ತರಿತರಿಯಾಗಿ ಪುಡಿ ಮಾಡಬೇಕು. ಇದನ್ನು ಬಜ್ಜಿ ಹಿಟ್ಟಿಗೆ ಮಿಕ್ಸ್ ಮಾಡಬೇಕು. ಬಜ್ಜಿ ಹಿಟ್ಟು ವಡಾ ಹಿಟ್ಟಿನ ರೀತಿ ಗಟ್ಟಿಯಾಗಿರಬೇಕು.
ಬಳಿಕ ಕಾದ ಎಣ್ಣೆಗೆ ಈ ಬಜ್ಜಿ ಹಾಕಿ, ಮಂದ ಉರಿಯಲ್ಲಿ ಕರಿದರೆ, ಪಾಲಕ್ ಬಜ್ಜಿ ರೆಡಿ.