Hassan: ಕಳೆದೆರಡು ತಿಂಗಳ ಹಿಂದೆ ಮದುವೆಯಾಗಿದ್ದ ವ್ಯಕ್ತಿ ಇಂದು ಹೃದಯಾಘಾತದಿಂದ ಮೃತನಾಗಿರುವ ಘಟನೆ ಹಾಸನದ ಹೊಳೆನರಸೀಪುರ ತಾಲೂಕಿನ ಸೋಮನಹಳ್ಳಿ ಕೊಪ್ಪಲು ಎಂಬಲ್ಲಿ ನಡೆದಿದೆ.
27 ವರ್ಷದ ಸಂಜಯ್ ಮೃತ ವ್ಯಕ್ತಿಯಾಗಿದ್ದು, ಈತ ಸ್ನೇಹಿತರ ಜತೆ ಸುತ್ತಲು ಹೋಗಿದ್ದಾಗ, ಅಚಾನಕ್ ಆಗಿ ಎದೆ ನೋವು ಕಾಣಿಸಿದೆ. ಆಗ ಸ್ನೇಹಿತರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ವೇಳೆ ಬಿಪಿ ಚೆಕ್ ಮಾಡಿದಾಗ 220ಕ್ಕೂ ಹೆಚ್ಚು ಇರುವುದು ತಿಳಿದಿದೆ. ಆ ಆಸ್ಪತ್ರೆ ವೈದ್ಯರು, ಬೇರೆ ಆಸ್ಪತ್ರೆಗೆ ರೆಫರ್ ಮಾಡಲು ಹೋದಾಗ, ಅಲ್ಲೇ ಸಂಜಯ್ ಸಾವನ್ನಪ್ಪಿದ್ದಾನೆ.
ಆದರೆ ಸಂಜಯ್ ಮನೆಯವರು ಸಂಜಯ್ ಸಾವನ್ನು ಅನುಮಾನಾಸ್ಪದ ಸಾವು ಎಂದು, ಹಳ್ಳಿ ಮೈಸೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಸಹಜ ಸಾವೆಂದು ದೂರು ದಾಖಲಿಸಿದ ಹಿನ್ನೆಲೆ, ಸಂಜಯ್ ಮೃತದೇಹವನನು ಮರಣೋತ್ತರ ಪರೀಕ್ಷೆಗೆ ಕರೆದ“ಯ್ಯಲಾಗಿದೆ.
ಹಾಸನದಲ್ಲಿ 40 ದಿನಗಳಿಂದ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವುದು ಆತಂಕಕ್ಕೆ ಎಡೆ ಮಾಡಿದೆ. ಇದೀಗ 40 ದಿನಗಳಲ್ಲಿ 24ರಿಂದ 25 ಹಾಸನ ಜನ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.