Friday, July 4, 2025

Latest Posts

Bidar News: ನಾನು ಬೇರೆಯವರ ರೀತಿ ಸರ್ಕಾರ ಬೀಳತ್ತೆ ಅಂತಾ ಹೇಳಲ್ಲ: ನಿಖಿಲ್ ಕುಮಾರ್

- Advertisement -

Bidar News: ಬೀದರ್‌ನಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಜೆಡಿಎಸ್ ನಾಯಕ ನಿಖಿಲ್ ಕುಮಾರ್, ನಾವು ಬೇರೆಯವರ ರೀತಿ ರಾಜ್ಯ ಸರ್ಕಾರ ಪತನವಾಗುತ್ತೆ ಎಂದು ಹೇಳುವುದಿಲ್ಲ.

ಆದರೆ ಇದಂತೂ ಸತ್ಯ, ಕಾಂಗ್ರೆಸ್‌ನಲ್ಲಿ ಹಲವು ಗುಂಪುಗಳಿದೆ. ಆ ಗುಂಪುಗಳು ಮೌನವಾಗಿ ಕೆಲಸ ಮಾಡುತ್ತಿದೆ. ಕೆಲವು ಗುಂಪುಗಳು ನೇರವಾಗಿ ಗುಂಪುಗಾರಿಕೆ ಮಾಡುತ್ತಿದೆ. ಸಿಎಂ ಮಗ ಕೂಡ ಇತ್ತೀಚೆಗೆ 1 ಹೇಳಿಕೆ ನೀಡಿದರು. ನಿನ್ನೆ ,ಸಿಎಂ ಕೂಡ ನಾನೇ 5 ವರ್ಷ ಸಿಎಂ ಎಂದು ಹೇಳಿಕೆ ನೀಡಿದ್ದರು. ಏನಾಗತ್ತೋ ನೋಡೋಣ. ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿದ್ದವರೇ, ಅದೇನೋ ಕ್ರಾಂತಿ ಆಗುತ್ತೆ ಎಂದು ಹೇಳುತ್ತಿದ್ದಾರೆ ಎಂದು ನಿಖಿಲ್ ಹೇಳಿದ್ದಾರೆ.

ಇನ್ನು ಬಿಜೆಪಿಯ ಜತೆಗಿನ ಮೈತ್ರಿ ಬಗ್ಗೆ ಮಾತನಾಡಿರುವ ನಿಖಿಲ್, ಬಿಜೆಪಿಯ ಜತೆ ಸೇರಿ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತ್ರ ನಾವು ಚರ್ಚಿಸುತ್ತೇವೆ. ನಮ್ಮಲ್ಲೇನೂ ಸಮಸ್ಯೆ ಇಲ್ಲ ಎಂದು ನಿಖಿಲ್ ಹೇಳಿದ್ದಾರೆ.

ಅಲ್ಲದೇ ನಾವು ರಾಜಕೀಯ ಪಕ್ಷ, ಬಿಜೆಪಿಯೂ ರಾಜಕೀಯ ಪಕ್ಷ. ನಾವೆಲ್ಲ ಸೇರಿ ಹೋರಾಟ ಮಾಡಬೇಕು ಎಂದು ಹೇಳಲಿಲ್ಲ. ನಾವೂ ಪ್ರತ್ಯೇಕವಾಗಿ ಹೋರಾಟ ಮಾಡಬೇಕಾಗುತ್ತದೆ. ಜತೆಗೆ ಹೋರಾಟ ಮಾಡುವ ಸಂದರ್ಭ ಬಂದರೆ ಅದಕ್ಕೂ ನಾವು ಸಿದ್ಧರಿದ್ದೇವೆ. ಅದರ ಬಗ್ಗೆ ಚರ್ಚಿಸಿಯೇ ತೀರ್ಮಾನ ತೆಗೆದುಕ“ಳ್ಳುತ್ತೇವೆ. ವಿ ಆರ್ ಪಾರ್ಟ್ ಆಫ್ ಎನ್‌ಡಿಎ ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.

- Advertisement -

Latest Posts

Don't Miss