Friday, July 4, 2025

Latest Posts

Andhra Pradesh: ತಿರುಪತಿ ದೇವಾಲಯ ಮಾದರಿಯಲ್ಲೇ ಮಿಲ್ಟ್ರಿ ಹೋಟೇಲ್ : ಜನರ ಆಕ್ರೋಶ

- Advertisement -

Andhra Pradesh: ಆಂಧ್ರಪ್ರದೇಶದ ಮಲ್ಲೆಪಲ್ಲಿ ಎಂಬಲ್ಲಿ ಹೋಟೇಲ್ ನಿರ್ಮಿಸಲಾಗಿದ್ದು, ತಿರುಪತಿ ದೇಗುಲದಲ್ಲಿ ಹೇಗೆ ತಿರುಮಲನಿಗಾಗಿ ಗರ್ಭಗುಡಿ ಮಾಡಲಾಗಿದೆಯೋ ಅದೇ ರೀತಿ ಈ ಹೋಟೇಲ್‌ನಲ್ಲಿ ತಿರುಪತಿ ದೇವಸ್ಥಾನ ಮಾಡಲಾಗಿದೆ. ಆದರೆ ಇದಕ್ಕೆ ಹಲವು ಹಿಂದೂಗಳು, ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಕಾರಣ ಏನೆಂದರೆ, ಈ ಹೋಟೇಲ್ ಮಾಂಸಾಹಾರಿ ಹೋಟೇಲ್. ಮಾಂಸ ತಯಾರಿಸುವ ಜಾಗದಲ್ಲಿ ದೇವರ ಗುಡಿ ಸ್ಥಾಪಿಸಿರುವುದು ಎಷ್ಟು ಸರಿ ಅನ್ನೋದು ತಿಮ್ಮಪ್ಪನ ಭಕ್ತರ ವಾದ. ಹೀಗಾಗಿ ಈ ರೆಸ್ಟೋರೆಂಟ್ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯುಡು ಮಿಲ್ಟ್ರಿ ಹೋಟೇಲ್ ಮಾಲೀಕ, ಸ್ಥಳೀಯ ಹೆದ್ದಾರಿಯಲ್ಲಿ ಈ ಮಾಂಸದ ಹೋಟೇಲ್‌ನಲ್ಲಿ ಆನಂದ ನಿಲಯ ಸ್ಥಾಪಿಸಿದ್ದಾನೆ. ಹೀಗಾಗಿ ಈತನ ವಿರುದ್ಧ ಇದೀಗ ಜನರು ಟಿಟಿಡಿಗೆ ದೂರು ನೀಡಿದ್ದಾರೆ. ಅಲ್ಲದೇ, ಈ ದೇವಸ್ಥಾನ ತೆಗೆಯದಿದ್ದರೆ, ದಾಳಿ ಮಾಡುವುದಾಗಿ ಹಿಂದೂ ಸಂಘಟನೆಗಳು ಹೇಳಿಕ“ಂಡಿದೆ.

ಆಂಧ್ರಪ್ರದೇಶದ ಸಾಧು ಪರಿಷತ್ ಅಧ್ಯಕ್ಷರಾಗಿರುವ ಶ್ರೀನಿವಾಸಾನಂದ ಸ್ವಾಮೀಜಿ ಈ ಬಗ್ಗೆ ಮಾತನಾಡಿದ್ದು, ಶ್ರೀವಾರಿ ಮನೋಭಾವನೆ ಜತೆ ಯಾರೇ ಆಟವಾಡಿದರೂ ನಾವು ಅವರನ್ನು ಕ್ಷಮಿಸುವುದಿಲ್ಲ. ಕಠಿಣ ಕ್ರಮ ತೆಗೆದುಕ“ಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಟ ಪವನ್ ಕಲ್ಯಾಣ ಸ್ಥಾಪಿಸಿರುವ ಜನಸೇನಾ ಪಕ್ಷವು ಕೂಡ ಈ ವಿರುದ್ಧ ಟಿಟಿಡಿಗೆ ದೂರು ನೀಡಿದೆ. ಹೋಟೇಲ್ ಮಾಲೀಕನ ವಿರುದ್ಧ ತಕ್ಷಣ ಕ್ರಮ ಕೈಗ“ಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ, 24 ಗಂಟೆಯಲ್ಲಿ ಈ ದೇವಸ್ಥಾನವನ್ನು ತೆಗೆದುಹಾಾಕದಿದ್ದರೆ, ನಿನ್ನ ಹೋಟೇಲ್ ಮೇಲೆ ದಾಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ. ಹೋಟೇಲ್ ಮಾಲೀಕ ಈಗಲಾದರೂ ಎಚ್ಚೆತ್ತುಕ“ಂಡು ಈ ದೇವಸ್ಥಾನವನ್ನು ತೆಗೆಯುತ್ತಾರಾ ಕಾದು ನೋಡಬೇಕಿದೆ.

- Advertisement -

Latest Posts

Don't Miss