ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಆಶಾ ಕಾರ್ಯಕರ್ತೆಯರು ಪ್ರತಿಬಟನೆ ನಡೆಸಿದರು. ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರ, ಹೊಸಕೋಟೆ, ದೊಡ್ಡಬಳ್ಳಾಪುರ, ನೆಲಮಂಗಲ ಸೇರಿದಂತೆ ಹಲವು ಭಾಗಗಳಿಂದ ಬಂದ ಆಶಾ ಕಾರ್ಯಕರ್ತರು ಮೌರ್ಯಸರ್ಕಲ್ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಈಗ ನೀಡುತ್ತಿರುವ ಗೌರವ ಧನ ಸರಿಯಾಗಿ ಸಿಗುತ್ತಿಲ್ಲ. ಕೇವಲ 6 ಸಾವಿರ ರೂ ಗೌರವ ಧನ ಮಾತ್ರ ನೀಡಲಾಗ್ತಿದೆ. ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ಹಣ ನಿಗಧಿಯಾಗಬೇಕು. ಕೊರೋನಾದಿಂದ ತಪ್ಪಿಸಿಕೊಳ್ಳಲು ಸುರಕ್ಷಿತ ಸಾಮಗ್ರಿಗಳನ್ನೂ ಮೊದಲು ಕೊಡಬೇಕು. ತಕ್ಷಣವೇ ಈ ಬೇಡಿಕೆಗಳನ್ನು ಈಡೇರಿಸುವಂತೆ ಆಶಾ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ.
ಕೋವಿಡ್ ರೋಗಿಗಳನ್ನ ಒಂದು ವಾರಕ್ಕೆ ಡಿಸ್ಚಾರ್ಜ್ ಮಾಡುವ ಬಗ್ಗೆ ಸಚಿವ, ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದು, ಕೋವಿಡ್ ಸೋಂಕಿತರನ್ನು 7ದಿನಕ್ಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ನನ್ನ ಗಮನಕ್ಕೆ ಬಂದಿದೆ. ಇಂದು ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡುತ್ತೇನೆ ಎಂದಿದ್ದಾರೆ.
ಅಲ್ಲದೇ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೋ ವೇಳೆ ಕೈಗೆ ಸೀಲ್ ಹಾಕ್ತಿಲ್ಲ.ಹೋಂ ಐಸೋಲೇಷನ್ಗೆ ಹೋಗೋರಿಗೆ ಕೈಗೆ ಸೀಲ್ ಹಾಕದೆ ಕಳುಹಿಸಲಾಗ್ತಿದೆ. ಕೋವಿಡ್ ಟೆಸ್ಟ್ ಮಾಡದೆ ಹೋಂ ಐಸೋಲೇಷನ್ ಮಾಡಲಾಗುತ್ತಿದೆ. ಹೋಂ ಐಸೋಲೇಷನ್ನಲ್ಲಿರೋರಿಗೆ ಕೋವಿಡ್ ಟೆಸ್ಟ್ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೆಲ ಸಮೀಕ್ಷೆಯ ಪ್ರಕಾರ, ಮುಂಬೈನ ಶೇ. 57% ಕೊಳಗೇರಿ ನಿವಾಸಿಗಳಲ್ಲಿ ಕೋವಿಡ್ ಸೋಂಕು ಕಂಡುಬಂದಿದ್ದು, ಮಹಿಳೆಯರಲ್ಲೇ ಹೆಚ್ಚು ಕೊರೊಾ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೊಳೆಗೇರಿಗಳಲ್ಲಿ ಕೋವಿಡ್ -19 ಹರಡಲು ಜನಸಂಖ್ಯಾ ಪ್ರಮಾಣ ಮತ್ತು ಸಮುದಾಯವಾಗಿ ಬಳಸಲ್ಪಡುವ ಶೌಚಾಲಯ ಮತ್ತು ನೀರಿನ ಬಳಕೆ ಕಾರಣವಾಗಿದೆ. ಆದರೆ ಸಮೀಕ್ಷೆಯ ಅಂಕಿ ಅಂಶಗಳು ಹೊಸ ಅನುಮಾನ ಮೂಡಿಸಿದ್ದು ಭಾರತದಲ್ಲಿ ಅಧಿಕೃತವಾಗಿ ಪ್ರಕಟಗೊಳ್ಳುತ್ತಿರುವ ಕೋವಿಡ್ ಪ್ರಕರಣದ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ.
ಅಮೇರಿಕದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ರೋಗಿಗಳ ಪ್ರಮಾಣ ಹೆಚ್ಚುತ್ತ ಹೋಗುತ್ತಿದ್ದು, ದಿನಕ್ಕೆ 60 ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆಯಾಗುತ್ತಿದೆ. ಅಲ್ಲದೇ ದಿನಕ್ಕೆ 1,200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದುವರೆಗೆ ಅಮೇರಿಕದಲ್ಲಿ ಒಂದುವರೆ ಲಕ್ಷ ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. 13,55,363 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ, 11 ಮತ್ತು 12ನೇ ತರಗತಿ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ ಫೋನ್ ವಿತರಿಸಲು ಮುಂದಾಗಿದೆ. ಈಗಾಗಲೇ 50 ಫೋನ್ಗಳು ನೀಡಲು ನಿರ್ಧರಿಸಿದ್ದು, ಯಾರ ಬಳಿ ಸ್ಮಾರ್ಟ್ ಫೋನ್ ಇಲ್ಲವೋ ಅಂಥವರಿಗೆ ಸ್ಮಾರ್ಟ್ ಫೋನ್ ನೀಡಲು ನಿರ್ಧರಿಸಿದ್ದಾರೆ. ಆನ್ಲೈನ್ ಶಿಕ್ಷಣಕ್ಕೆ ಸಹಾಯವಾಗಲಿ ಎಂಬ ಆಶಯ ಇವರದ್ದಾಗಿದೆ.





