Health Tips: ಶೇಂಗಾ ಚಿಕ್ಕಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲಾ ಹೇಳಿ..? ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಶೇಂಗಾ ಚಿಕ್ಕಿಯನ್ನು ಜನ ಇಷ್ಟಪಟ್ಟು ತಿನ್ನುತ್ತಾರೆ. ಈ ಶೇಂಗಾ ಚಿಕ್ಕಿ ಬರೀ ರುಚಿ ಮಾತ್ರವಲ್ಲ. ಬದಲಾಗಿ ಆರೋಗ್ಯಕರವೂ ಹೌದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ..
ಶೇಂಗಾ ಚಿಕ್ಕಿ ಅಥವಾ ಶೇಂಗಾ ಮತ್ತು ಬೆಲ್ಲ ಸೇರಿಸಿ ಸೇವಿಸಿದರೆ, ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ನೀವು ಹಸಿ ಶೇಂಗಾ ಮತ್ತು ಬೆಲ್ಲವನ್ನು ಸೇರಿಸಿ, ಸ್ವಲ್ಪ ಸ್ವಲ್ಪ ತಿಂದರೆ, ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗಿ, ನಿಮ್ಮ ದೇಹ ಶಕ್ತಿಯುತವಾಗುತ್ತದೆ.
ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಇದೆ ಎಂದಲ್ಲಿ ನೀವು, ಬೆಲ್ಲ ಮತ್ತು ಶೇಂಗಾವನ್ನು ಸೇವಿಸಿ. ಇದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಿ, ಲೋ ಬಿಪಿ ಸರಿಯಾಗುತ್ತದೆ. ನ್ಯಾಚುರಲ್ ಆಗಿ ಲೋ ಬಿಪಿ ಸರಿಪಡಿಸಿಕ“ಳ್ಳಲು ಇದು ಸರಿಯಾದ ಮಾರ್ಗವಾಗಿದೆ.
ಶೇಂಗಾ ಮತ್ತು ಬೆಲ್ಲದ ಸೇವನೆಯಿಂದ ನಿಮ್ಮ ದೇಹಕ್ಕೆ ಹೆಚ್ಚು ಶಕ್ತಿ ಸಿಗುತ್ತದೆ. ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮಲ ವಿಸರ್ಜನೆಗೆ ಸಮಸ್ಯೆಯಾಗುತ್ತಿದ್ದಲ್ಲಿ, ಶೇಂಗಾ ಮತ್ತು ಬೆಲ್ಲ ಸೇವನೆ ಮಾಡಿದ್ದಲ್ಲಿ, ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.