Beauty Tips: ನೀವು ಬ್ಯೂಟಿ ಪಾರ್ಲರ್‌ನಲ್ಲಿ ಪೆಡಿಕ್ಯೂರ್ ಎಂಬ ಸರ್ವಿಸ್ ಹೆಸರು ಕೇಳಿರುತ್ತೀರಿ. ಇದನ್ನು ಮಾಡುವುದರಿಂದ ನಿಮ್ಮ ಕಾಲಿನ ಉಗುರು, ಚರ್ಮ, ಹಿಮ್ಮಡಿ, ಪಾದ ಎಲ್ಲವೂ ಸಾಫ್ಟ್ ಆಗಿ ಸ್ಮೂತ್ ಆಗುತ್ತದೆ. ಆದರೆ ನೀವು ಹೆಚ್ಚು ಖರ್ಚಿಲ್ಲದೇ, ಇದನ್ನು ಮನೆಯಲ್ಲಿಯೇ ಮಾಡಿಕ“ಳ್ಳಬಹುದು. ಆ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ ನೋಡಿ.
1 ಬಾಲ್ದಿ ಉಗುರು ಬೆಚ್ಚಗಿನ ನೀರಿಗೆ, 1 ಸ್ಪೂನ್ ದಪ್ಪ ಉಪ್ಪು ಅಥವಾ ಕೆಂಪುಪ್ಪು, ರೋಸ್ ವಾಟರ್, ನಿಂಬೆರಸ ಹಾಕಿ, ಅದರಲ್ಲಿ ಕಾಲದ್ದಿ ಕುಳಿತುಕ“ಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಕಾಲಿನ ಸಣ್ಣ ನೋವು ಗುಣವಾಗುತ್ತದೆ. ಪಾದ, ಹಿಮ್ಮಡಿ ಎಲ್ಲವೂ ಸ್ಮೂತ್ ಆಗುತ್ತದೆ.
ಅಲ್ಲದೇ ಕಾಲಿನಲ್ಲಿ ಅಡಗಿರುವ ಕೊಳೆ ಕ್ಲೀನ್ ಆಗಿ, ನಿಮ್ಮ ಕಾಲು ಸ್ವಚ್ಛವಾಗುತ್ತದೆ. ಉಪ್ಪು ಮತ್ತು ನಿಂಬೆರಸ ನಿಮ್ಮ ಕಾಲನ್ನು ಕ್ಲೀನ್ ಮಾಡಿದರೆ, ರೋಸ್ ವಾಟರ್ ನಿಮ್ಮ ಕಾಲನ್ನು ಕೋಮಲವನ್ನಾಗಿಸುತ್ತದೆ.
ನೀವು ಬೇಕಾದರೆ ಉಪ್ಪು ಮತ್ತು ಸುವಾಸನೆಭರಿತವಾದ ಎಣ್ಣೆಯನ್ನು ಕೂಡಾ ಉಗುರುಬೆಚ್ಚಗಿನ ನೀರಿಗೆ ಹಾಕಿ, ಅದರಲ್ಲಿ ಕಾಲದ್ದಿ ಇಡಬಹುದು. ಸಾಕ್ಸ್ ಬಳಸುವವರು ಈ ರೀತಿ ಮಾಡಿದರೆ, ನಿಮ್ಮ ಕಾಲಿನಿಂದ ದುರ್ಗಂಧ ಬರುವುದಿಲ್ಲ.
ನಮ್ಮ ಪಾದ ಎಷ್ಟು ಕ್ಲೀನ್ ಆಗಿರುತ್ತದೆಯೋ, ನಮ್ಮ ಆರೋಗ್ಯ ಅಷ್ಟೇ ಚೆನ್ನಾಗಿರುತ್ತದೆ. ಕಾಲಿನಡಿಯಿಂದಲೇ ನಮ್ಮ ದೇಹಕ್ಕೆ ಹಲವು ಕ್ರಿಮಿಗಳು ಸೇರುತ್ತದೆ ಎಂದು ಹೇಳಲಾಗಿದೆ. ಹಾಗಾಗಿಯೇ ಎಲ್ಲಾದರೂ ಹೋಗಿ ಬಂದ ಬಳಿಕ, ಕಾಲು ಸ್ವಚ್ಛ ಮಾಡಲಾಗುತ್ತದೆ.