Beauty Tips: ಮೊಸರಿನ ಸೇವನೆ ಮಾಡಿದರೆ ಆರೋಗ್ಯಕ್ಕೆ ಎಷ್ಟು ಉತ್ತಮವೋ, ನಾವು ಅದರಿಂದ ಸೌಂದರ್ಯವನ್ನೂ ಉತ್ತಮಗ~`ಳಿಸಬಹುದು. ಹಾಗಾದ್ರೆ ಮೊಸರನ್ನು ಬಳಸಿ ಯಾವ ರೀತಿ ನಾವು ನಮ್ಮ ಸೌಂದರ್ಯ ಹೆಚ್ಚಿಸಿಕ“ಳ್ಳಬಹುದು ತಿಳಿಯೋಣ ಬನ್ನಿ.
1 ಸ್ಪೂನ್ ಮುಲ್ತಾನಿ ಮಣ್ಣು ಮತ್ತು ಕರ್ಡ್ ಮಿಕ್ಸ್ ಮಾಡಿ, ಫೇಸ್‌ಪ್ಯಾಕ್ ತಯಾರಿಸಿ. ಬಳಿಕ, ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷದ ನಂತರ ಮುಖ ಕ್ಲೀನ್ ಮಾಡಿ. ಇದರಿಂದ ನಿಮ್ಮ ತ್ವಚೆ ಸ್ಮೂತ್ ಆಗುತ್ತದೆ.
2 ಸ್ಪೂನ್ ಮೊಸರಿಗೆ ಸ್ವಲ್ಪ ಅರಿಶಿನ ಮತ್ತು ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ. ಮತ್ತು ಇದರಿಂದ ಮುಖ ಮತ್ತು ಕುತ್ತಿಗೆಗೆ ಮಸಾಜ್ ಮಾಡಿ. ಇದರಿಂದ ಮುಖದ ಭಾಗದಲ್ಲಿ ರಕ್ತಪರಿಚಲನೆ ಚೆನ್ನಾಗಿ ಆಗುತ್ತದೆ. ಇದರಿಂದ ನಿಮ್ಮ ಮುಖ ನ್ಯಾಚುರಲ್ ಆಗಿ ಗ್ಲೋ ಆಗುತ್ತದೆ.
1 ಸ್ಪೂನ್ ಕಡಲೆ ಹುಡಿ ಮತ್ತು 2ರಿಂದ 3 ಸ್ಪೂನ್ ಮೊಸರು ಹಾಕಿ ಮಿಕ್ಸ್ ಮಾಡಿ, ಇದರಿಂದ ಮುಖಕ್ಕೆ ಸ್ಕ್ರಬ್ ಮಾಡಿ. ಇದು ನ್ಯಾಚುರಲ್ ಸ್ಕ್ರಬ್ ಆಗಿದ್ದು, ಇದರಿಂದ ಮುಖಕ್ಕೇನೂ ಸಮಸ್ಯೆ ಆಗುವುದಿಲ್ಲ. ಅಲ್ಲದೇ ಮುಖ ಕೂಡ ಚೆನ್ನಾಗಿ ಕಾಣುತ್ತದೆ.
ಆದರೆ ನೆನಪಿರಲಿ, ನೀವು ಬಳಸುವ ವಸ್ತುಗಳು ಉತ್ತಮ ಕ್ವಾಲಿಟಿಯದ್ದಾಗಿರಬೇಕು. ಇಲ್ಲವಾದಲ್ಲಿ ಮುಖದ ಮೇಲೆ ಗುಳ್ಳೆ ಬರಬಹುದು. ಇನ್‌ಫೆಕ್ಷನ್ ಆಗಬಹುದು.