Dharwad News: ಧಾರವಾಡ: ಧಾರವಾಡದಲ್ಲಿ ಮಾಧ್ಯಮಗಳ ಜತೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಿಎಂ, ಡಿಸಿಎಂ ದೆಹಲಿ ಪ್ರವಾಸ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಅದರಲ್ಲಿ ವಿಶೇಷ ಏನು ಇಲ್ಲ, ಸಿಎಂ ಅವರ ಕೆಲಸಕ್ಕೆ ಅವರು ಹೋಗಿದ್ದಾರೆ. ಡಿಸಿಎಂ ಅವರು ತಮ್ಮ ಕೆಲಸಕ್ಕೆ ತಾವು ಹೋಗಿದ್ದಾರೆ. ರಾಜ್ಯ ಸರ್ಕಾರದ ಕೆಲಸಗಳು ಕೇಂದ್ರ ಮಂತ್ರಿಗಳ ಜೊತೆ ಭೇಟಿ ಮಾಡುವ ಕೆಲಸ ಇರ್ತಾವೆ. ಅದಕ್ಕೆ ವಿಶೇಷ ಬಣ್ಣ ಏನೂ ಬೇಡ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.
ಸಿಎಂ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ, ವಿಪಕ್ಷ ಮೊದಲಿನಿಂದ ಅದನ್ನೇ ಹೇಳುತ್ತ ಬಂದಿದೆ. ೧೩೬ ಜನ ಗೆದ್ದಾಗಲೇ ಅವರು ಹೇಳಿದ್ರು. ಈ ಸರ್ಕಾರ ಮೂರು ತಿಂಗಳಲ್ಲಿ ಬಿಳುತ್ತೆ ಅಂತಾ ಹೇಳಿದ್ರು. ಅವರು ಒಂದೊಂದು ಮಾತಾಡ್ತಾ ಹೋಗ್ತಾರೆ, ಅವರಿಗೆ ಕೆಲಸ ಇಲ್ಲಾ. ಬದಲಾವಣೆ ಆಗಲಿ ಮತ್ತೊಂದು ಆಗಲಿ ನಮ್ಮ ಪಕ್ಣದ ಹೈಕಮಾಂಡ್ ಅಂತಾ ಇದೆ. ಪ್ರಸ್ತುತ ಅಂತಹ ಸೀನ್ ಇಲ್ಲಾ ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿದ್ದಾರೆ.
ಶಾಸಕರ ಒನ್ ಟು ಒನ್ ಸಭೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅದು ನಿರಂತರ ನಡೆಯುವ ಪ್ರಕ್ರಿಯೆ. ಈ ಬಾರಿ ಅದು ಸ್ವಲ ತಡವಾಯ್ತು. ಪ್ರತಿ ಆರು ತಿಂಗಳಲ್ಲಿ ಅಥವಾ ಒಂದು ವರ್ಷದಲ್ಲಿ ಅದು ನಡೆಯುತ್ತ ಇರುತ್ತದೆ. ಸಿಎಲ್ಪಿ ಮೀಟಿಂಗ್ ಅಂತಾ ಇರುತ್ತದೆ. ಇದಕ್ಕೆ ಉಸ್ತುವಾರಿ ಜನರಲ್ ಸೆಕ್ರೆಟರಿಗಳು ಸರ್ಕಾರ ಇದ್ದಾಗ ಆಗಲಿ, ಇಲ್ದಾಗ ಆಗಲಿ ಬಂದು ಶಾಸಕರ ಕುಂದು ಕೊರತೆಗಳನ್ನು ಮಾಡೊದು ಅವರ ಕೆಲಸ. ಇದು ಪಕ್ಷದ ಆಂತರಿಕ ಪ್ರಕ್ರಿಯೆ. ಇದಕ್ಕೆ ಬೇರೆ ಅರ್ಥಾ ಇಲ್ಲಾ ಎಂದಿದ್ದಾರೆ.
ಆಹಾರ ಇಲಾಖೆಯ ಲಾರಿ ಮುಷ್ಕರ ವಿಚಾರದ ಬಗ್ಗೆ ಮಾತನಾಡಿರುವ ಸಚಿವೆ, ನಾನು ಎರಡು ದಿನಗಳಿಂದ ಹೊರಗೆ ಇದ್ದೆನೆ ಆಹಾರ ಸಚಿವರ ಕಡೆ ನಾನು ತಿಳಕೊಂಡು ಪ್ರತಿಕ್ರಿಯೆ ಕೊಡ್ತೇನೆ ಎಂದಿದ್ದಾರೆ.