Friday, July 11, 2025

Latest Posts

Movie News: ನಯನತಾರಾಗೆ ಮತ್ತೆ ನೋಟೀಸ್ ಜಾರಿ: ಕಳಿಸಿದ್ಯಾರು..? ಕೇಳಿದ್ದೇನು..?

- Advertisement -

Movie News: ಕೆಲ ದಿನಗಳ ಹಿಂದೆ ನಟಿ ನಯನತಾರಾಗೆ ಸಂಬಂಧಿಸಿದ ಡಾಕ್ಯೂಮೆಂಟರಿಯಲ್ಲಿ ನಟ ಧನುಷ್‌ ಸಿನಿಮಾದ ತುಣುಗಳನ್ನು ಬಳಸಿದ್ದರಿಂದ, ಕಾಪಿರೈಟ್ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ, ಧನುಷ್ 5 ಕೋಟಿ ಪರಿಹಾರ ಕೇಳಿ, ನೋಟೀಸ್ ಕಳುಹಿಸಿದ್ದರು.

ಇದೀಗ ಆಪ್ತಮಿತ್ರ ಸಿನಿಮಾ ರಿಮೇಕ್ ಆಗಿರುವ ಚಂದ್ರಮುಖಿ ಸಿನಿಮಾ ತುಣುಕುಗಳನ್ನು ಸಹ ಈ ಡಾಕ್ಯೂಮೆಂಟರಿಯಲ್ಲಿ ಬಳಸಲಾಗಿದ್ದು, ಇದಕ್ಕೂ ಉತ್ತರಿಸಬೇಕು ಎಂದು ನಯನತಾರಾಗೆ ನೋಟೀಸ್ ಕಳುಹಿಸಲಾಗಿದೆ. ಅಲ್ಲದೇ ಈ ತಂಡ ಕೂಡ 5 ಕೋಟಿ ಪರಿಹಾರ ಕೇಳಿದೆ.

ಈ ಹಿಂದೆ ಧನುಷ್ ನೋಟೀಸ್ ನೀಡಿದಾಗ, ಅವರ ವ್ಯಕ್ತಿತ್ವದ ಕುರಿತು ನಯನತಾರಾ ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದರು. ಇದೀಗ ಚಂದ್ರಮುಖಿ ಚಿತ್ರತಂಡ ಕೂಡ ಇವರಿಗೆ ನೋಟೀಸ್ ನೀಡಿದ್ದು, ಇದಕ್ಕೆ ನಯನತಾರಾ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅಂತಾ ಕಾದು ನೋಡಬೇಕಿದೆ.

- Advertisement -

Latest Posts

Don't Miss