Friday, July 11, 2025

Latest Posts

Health Tips: ಪಿರಿಯಡ್ಸ್ ಸಮಯದಲ್ಲಿ ಈ ಆಹಾರಗಳನ್ನು ಆದಷ್ಟು ಅವೈಡ್ ಮಾಡಿ

- Advertisement -

Health Tips: ಮುಟ್ಟು ಅನ್ನೋದು ಪ್ರತೀ ತಿಂಗಳು ಪ್ರತೀ ಹೆಣ್ಣು ಮಕ್ಕಳು ಅನುಭವಿಸಲೇಬೇಕಾದ ಕಷ್ಟ. ಈ ವೇಳೆ ಆದಷ್ಟು ಆಕೆಯ ಕಾಳಜಿ ಮಾಡುವುದು ಅವಶ್ಯಕ. ಈ ವೇಳೆ ಆಹಾರದ ಬಗ್ಗೆಯೂ ಗಮನ ಹರಿಸಬೇಕು. ಅದರಲ್ಲೂ ತಣ್ಣಗಿನ ಅಂದ್ರೆ ಫ್ರಿಜ್‌ನಲ್ಲಿರುವ ಆಹಾರಗಳನ್ನು ಹೆಣ್ಣು ಮಕ್ಕಳು ಈ ದಿನಗಳಲ್ಲಿ ಸೇವಿಸಲೇಬಾರದು. ಹಾಗಾದ್ರೆ ಯಾಕೆ ತಣ್ಣಿಗಿನ ಆಹಾರವನ್ನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ..

ನೀವು ಪಿರಿಯಡ್ಸ್ ಸಮಯದಲ್ಲಿ ಫ್ರಿಜ್‌ನಲ್ಲಿ ಇರಿಸಿದ ಆಹಾರ, ಕೋಲ್ಡ್ ಕಾಫಿ, ಐಸ್‌ಕ್ರೀಮ್, ಕೂಲ್‌ಡ್ರಿಂಕ್ಸ್ ಇವನ್ನೆಲ್ಲ ಸೇವಿಸಿದರೆ, ಅದು ಭವಿಷ್ಯದಲ್ಲಿ ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಹಾರ್ಮೋನುಗಳಲ್ಲಿ ಬದಲಾವಣೆ ತರುತ್ತದೆ. ಹಾಗಾಗಿ ಭವಿಷ್ಯದಲ್ಲಿ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಾರದು ಅಂದ್ರೆ ನಾವು ವರ್ತಮಾನದಲ್ಲಿ ಆರೋಗ್ಯಕರ ಆಹಾರ ಸೇವನೆ ಮಾಡಬೇಕು.

ನಾವು ತಣ್ಣಗಿನ ಆಹಾರ ತಿನ್ನುವುದರಿಂದ ದೇಹದಲ್ಲಿ ರಕ್ತಸಂಚಲನಕ್ಕೆ ಅಡ್ಡಿಯಾಗುತ್ತದೆ. ಹಾಗಾಗಿ ಪಿರಿಯಡ್ಸ್ ಸಮಯದಲ್ಲಿ ತಣ್ಣನೆಯ ಆಹಾರ ಸೇವನೆ ಮಾಡಿದರೆ, ರಕ್ತಸ್ರಾವದಲ್ಲೂ ಏರುಪೇರಾಗಬಹುದು. ಸರಿಯಾದ ರೀತಿಯಲ್ಲಿ ರಕ್ತಸ್ರಾವವಾಗದಿದ್ದಲ್ಲಿ, ದೇಹದಲ್ಲಿ ಏರುಪೇರಾಗಿ, ಆರೋಗ್ಯಕ್ಕೂ ಹಾನಿಯಾಗಬಹುದು.

ಹಾಗಾಗಿ ಪಿರಿಯಡ್ಸ್ ಸಮಯದಲ್ಲಿ ಆರೋಗ್ಯಕರ ಆಹಾರಗಳಾದ ಬಿಸಿ ನೀರು, ಡ್ರೈಫ್ರೂಟ್ಸ್, ನೆನೆಸಿದ ಕಾಳು, ಹಣ್ಣು, ತರಕಾರಿ, ತುಪ್ಪ, ಹಾಲು, ಎಳನೀರು ಇಂಥ ಆಹಾರಗಳನ್ನು ಸೇವಿಸಬೇಕು.

- Advertisement -

Latest Posts

Don't Miss