Friday, July 11, 2025

Latest Posts

ಟೀಕೆಗಳು ಸಾಯುತ್ತವೆ, ಸಾಧನೆಗಳು ಉಳಿಯುತ್ತವೆ ಎಂಬ ಮಾತಿಗೆ ಶಕ್ತಿ ಯೋಜನೆ ಉತ್ತಮ ನಿದರ್ಶನ: ಸಚಿವ ಗುಂಡೂರಾವ್

- Advertisement -

Political News: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಲ್ಲಿ ಇಲ್ಲಿಯವರೆಗೆ 493 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಈ ಸಂಖ್ಯೆ 500 ಕೋಟಿ ದಾಟಲಿದೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕ“ಂಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ತಮ್ಮ ಸರ್ಕಾರದ ಯಶಸ್ಸನ್ನು ಹೇಳಿದ್ದಲ್ಲದೇ, ಬಿಜೆಪಿ ಜೆಡಿಎಸ್ ಟೀಕೆಗೆ ತಲೆಕೆಡಿಸಿಕ“ಳ್ಳುವುದಿಲ್ಲವೆಂಬ ಸಂದೇಶ ನೀಡಿದ್ದಾರೆ.

ರಾಜಕೀಯ ವಿರೋಧಿಗಳ ಅಪಹಾಸ್ಯ ಹಾಗೂ ವಿರೋಧದ ನಡುವೆಯೂ ನಮ್ಮ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಯೋಜನೆ ಪ್ರಾರಂಭವಾದ ಬಳಿಕ ಸುಮಾರು 493 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆ ಸೇವೆ ಪಡೆದಿದ್ದು, ಕೆಲವೇ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ 500 ಕೋಟಿ ದಾಟಲಿದೆ‌. ಇದೊಂದು ಮೈಲಿಗಲ್ಲು ಎಂದು ಗುಂಡೂರಾವ್ ಹೇಳಿದ್ದಾರೆ.

ಟೀಕೆಗಳು ಸಾಯುತ್ತವೆ, ಸಾಧನೆಗಳು ಉಳಿಯುತ್ತವೆ ಎಂಬ ಮಾತಿಗೆ ಶಕ್ತಿ ಯೋಜನೆ ಉತ್ತಮ ನಿದರ್ಶನ. ಶಕ್ತಿ ಯೋಜನೆಯ ಯಶಸ್ಸು ಕಾಂಗ್ರೆಸ್ ಪಕ್ಷದ ದೂರದೃಷ್ಟಿಯ ಫಲ. ಮಹಿಳಾ ಸಬಲೀಕರಣ ಹಾಗೂ ಆರ್ಥಿಕ ಚೈತನ್ಯ ನೀಡುವ ಉದ್ದೇಶದಿಂದ ಜಾರಿಗೆ ತಂದ ಶಕ್ತಿ ಯೋಜನೆ ಜನರ ಪಾಲಿಗೆ ವರವಾಗಿದೆ.

ಶಕ್ತಿ ಯೋಜನೆಯಂತೆಯೇ ನಮ್ಮ ಸರ್ಕಾರದ ಇನ್ನುಳಿದ ಯೋಜನೆಗಳು ಕೂಡ ಜನರ ಕೈ ಹಿಡಿದಿವೆ‌. ನಮ್ಮ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಯೋಜನೆಗಳೆಂದು ಹೀಯಾಳಿಸುತ್ತಿರುವ BJP-JDS ನಾಯಕರ ಮಾತಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಯೋಜನೆಗಳ ಯಶಸ್ಸೇ ಅವರ ಟೀಕೆಗಳಿಗೆ ತಕ್ಕ ಉತ್ತರ ನೀಡುತ್ತೀವೆ‌ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

- Advertisement -

Latest Posts

Don't Miss