ಉದ್ಯಮಿಗಳು ತಮ್ಮ ದುಡಿಮೆಯ ಚಿಕ್ಕ ಮೊತ್ತವನ್ನು ದಾನ ಮಾಡುವುದು ಸಾಮಾನ್ಯ. ಭಾರೀ ತೆರಿಗೆಯಿಂದ ತಪ್ಪಿಸಿಕೊಳ್ಳಲು ದಾನದ ದಾರಿ ಹಿಡಿಯುತ್ತಾರೆ. ಆದರೆ ಬಡವನೊಬ್ಬ, ತನ್ನ ಅಲ್ಪ ದುಡಿಮೆಯಲ್ಲಿ ಸಹಾಯ ಹಸ್ತ ಚಾಚಿದ್ದಾನೆ. ಅಷ್ಟೇನು ಸ್ಥಿತಿವಂತನೂ ಅಲ್ಲ.. ಪಿತ್ರಾರ್ಜಿತ ಆಸ್ತಿಯೂ ಅವರಿಗಿಲ್ಲ. ಆದರೂ ಕೂಡಿಟ್ಟ ಸ್ವಲ್ಪ ಹಣದಲ್ಲೇ, ತಮ್ಮೂರಿನ 11 ಬಡ ಮಕ್ಕಳಿಗೆ ಸೈಕಲ್ ಕೊಡಿಸಿ, ಎಲ್ಲರ ಹೃದಯ ಗೆದ್ದಿದ್ದಾರೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮಲ್ಕಂದಿನ್ನಿ ನಿವಾಸಿ ಆಂಜನೇಯ. ಮಲ್ಕಂದಿನ್ನಿ ಗ್ರಾಮದಲ್ಲಿ ಪ್ರೌಢಶಾಲೆಯೂ ಇಲ್ಲ. ಹೀಗಾಗಿ ಪಕ್ಕದ ಹೇಮನೂರಿಗೆ ಪ್ರತಿದಿನ 10 ಕಿಲೋ ಮೀಟರ್ ನಡೆದುಕೊಂಡೇ ಹೋಗ್ತಿದ್ರು. ಮಕ್ಕಳು ಶಾಲೆಗೆ ಹೋಗುವ ವೇಳೆ ಆಂಜನೇಯ ಕೂಡ ಕೂಲಿ ಕೆಲಸಕ್ಕೆ ಹೊರಡುತ್ತಿದ್ದ.
ಮಕ್ಕಳು ಕಷ್ಟ ಪಡುತ್ತಿರುವುದನ್ನು ಗಮನಿಸಿದ್ದಾನೆ. ಪಕ್ಕದೂರಿನ ಶಾಲೆಗೆ ಹೋಗಲು ಬಸ್ ಸೌಲಭ್ಯಗಳಿಲ್ಲದ ಕಾರಣಕ್ಕೆ, ಪ್ರತಿ ವರ್ಷ 15ರಿಂದ 20 ಮಕ್ಕಳು ಶಾಲೆಯನ್ನ ಅರ್ಧಕ್ಕೆ ತೊರೆಯುತ್ತಿದ್ದರು. ಇದೆಲ್ಲವನ್ನು ಸೂಕ್ಷ್ಮವಾಗಿ ಆಂಜನೇಯ ಗಮನಿಸಿದ್ರು. ಸಹಾಯ ಮಾಡಲು ನಿರ್ಧರಿಸಿದ್ರು.
ಯಾವುದೇ ಸಲಹೆ, ಬೇರೊಬ್ಬರ ಸಹಾಯಕ್ಕೆ ಕಾಯದೇ, ತಮ್ಮ ಉಳಿತಾಯದಿಂದ 11 ಮಕ್ಕಳಿಗೆ ಸೈಕಲ್ ಕೊಡಿಸಿದ್ದಾರೆ. 1 ಸೈಕಲ್‌ಗೆ ಮಾರುಕಟ್ಟೆಯಲ್ಲಿ 5-6 ಸಾವಿರ ರೂಪಾಯಿ ಖರ್ಚಾಗುತ್ತದೆ. 11 ಸೈಕಲ್‌ಗೆ 60 ಸಾವಿರಕ್ಕೂ ಅಧಿಕ ಖರ್ಚಾಗುತ್ತದೆ.
ಅಂದಾಜಿನ ಪ್ರಕಾರ ಮಲ್ಕಂದಿನ್ನಿ ಗ್ರಾಮದಲ್ಲಿ ಸುಮಾರು 186 ಕಂದಾಯ ಗ್ರಾಮಗಳಿವೆ. 50ಕ್ಕೂ ಹೆಚ್ಚು ಹಳ್ಳಿಗಳು, 30ಕ್ಕೂ ಹೆಚ್ಚು ಗುಡಿಸಲುಗಳಿವೆ. ಆದರೂ 10ಕ್ಕೂ ಹೆಚ್ಚು ಹಳ್ಳಿಗಳಿಗೆ ಬಸ್ ಸೌಲಭ್ಯಗಳಿವೆ. ಹೀಗಾಗಿ ಹಲವು ಮಕ್ಕಳು ಶಿಕ್ಷಣ ಮೊಟಕುಗೊಳ್ಳುತ್ತಿದೆ. ವೀಕ್ಷಕರೇ, ಆಂಜನೇಯನ ಈ ಸೈಕಲ್ ಸಹಾಯಕ್ಕೆ ನಿಮ್ಮ ಅಭಿಪ್ರಾಯವೇನು ಅನ್ನೋದನ್ನ ಕಾಮೆಂಟ್ ಮಾಡಿ ತಿಳಿಸಿ.