Friday, July 11, 2025

Latest Posts

Hubli: ಹುಬ್ಬಳ್ಳಿ ಗ್ಯಾಂಗ್‌ವಾರ್ ಕೇಸ್: ಘಟನೆ ಬಗ್ಗೆ ರೋಚಕ ವಿಷಯ ತಿಳಿಸಿದ ಕಮಿಷನರ್ ಶಶಿಕುಮಾರ್

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಗ್ಯಾಂಗ್ ವಾರ್ ಪ್ರಕರಣದ ಹಿನ್ನೆಲೆಯಲ್ಲಿ, ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಟೂರ್ ರಸ್ತೆಯ ಬಳಿಯ ಅರಳಿಕಟ್ಟೆ ಎಂಬುವಲ್ಲಿ ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದೆ. ಬೆಂಡಿಗೇರಿ ವ್ಯಾಪ್ತಿಯಲ್ಲಿ ಸುರೇಶ್ ಎಂಬ ಮೃತನಾದವನ ಅಂತ್ಯಕ್ರಿಯೆಗೆ ಬಂದಿದ್ರು. ಶವ ಸಂಸ್ಕಾರ ಮುಗಿಸಿ ವಾಪಸ್ ಆಗುವಾಗ ಎರಡು ಗುಂಪುಗಳ ನಡುವೆ ಜಗಳವಾಗಿದೆ. ನಿಂದನೆ, ಗುರಾಯಿಸಿದ್ರು ಅಂತ ಆರಂಭವಾಗಿ ಹೊಡೆದಾಡಿ ಕೊಂಡಿದ್ದಾರೆ. ನಾಲ್ಕು ಜನರಿಗೆ ಗಾಯವಾಗಿದೆ. ಪ್ರತ್ಯೇಕ ಎರಡು ಆಸ್ಪತ್ರೆಗೆ ಗಾಯಾಳುಗಳನ್ನ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.

ಮಾಧ್ಯಮದಲ್ಲಿ ಮಾತನಾಡಿದ ಅವರು, ಎರಡು ಗುಂಪುಗಳು ಮೊದಲು ಜೊತೆಗಿದ್ದವರು. ನಂತರ ಪರಸ್ಪರ ದ್ವೇಷ ಬೆಳೆದಿತ್ತು. ಎರಡು ಕಡೆ ದೂರು-ಪ್ರತಿ ದೂರು ದಾಖಲಾಗಿದೆ. ಎರಡು ಕಡೆಯಿಂದ ನಾಲ್ಕರಿಂದ ಐದು ಜನರನ್ನು ವಶಕ್ಕೆ ಪಡೆದಿದ್ದೇವೆ. ತಳ್ಳಾಟದಿಂದ ಆರಂಭವಾದ ಜಗಳ ವಿಕೋಪಕ್ಕೆ ಹೋಗಿದೆ.

ಗಲಾಟೆ ವೇಳೆ ಒಬ್ಬ ವ್ಯಕ್ತಿ ಕೈಯಲ್ಲಿದೆ ಖಡ್ಗದಂತಹ ಮಾರಕಾಸ್ತ್ರ ಹಿಡಿದುಕೊಂಡಿದ್ದು ಕಂಡು ಬಂದಿದೆ. ಮಂಟೂರ್ ರಸ್ತೆಯ ಭಾಗದಲ್ಲಿ ಜನ ಜಾಸ್ತಿ ಇದ್ದಾಗ ಈ ರೀತಿ ಆಗುತ್ತೆ ಅಂತ ನಮ್ಮ ಸಿಬ್ಬಂದಿಯನ್ನು ಸಹ ನೇಮಕ ಮಾಡಲಾಗಿತ್ತು. ಸ್ಥಳದಲ್ಲಿದ್ದ ನಮ್ಮ ಸಿಬ್ಬಂದಿ ಎರಡು ಗುಂಪುಗಳ ಜಗಳ ಬಿಡಿಸಲು ಮುಂದಾಗಿದ್ರು. ಆ ವೇಳೆ ಕರ್ತವ್ಯಕ್ಕೆ ಅಡ್ಡಿ ಸಹ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ಕೂಡ ದಾಖಲಿಸಿಕೊಳ್ಳಲಾಗಿದೆ.

ಎರಡು ಗುಂಪುಗಳಲ್ಲಿ ಎಲ್ಲಾ ಜಾತಿಯವರಿದ್ದಾರೆ. ಈಗಾಗಲೇ ಸಿಸಿ ಟಿವಿ ಕ್ಯಾಮೆರಾ ಸಹ ಪರಿಶೀಲನೆ ಮಾಡಲಾಗುತ್ತಿದೆ.ಅಲ್ಲಿ ಮತ್ತೆ ಗಲಭೆ ಆಗದಂತೆ ಕ್ರಮ ಸಹ ಕೈಗೊಳ್ಳಲಾಗಿದೆ. ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗಲಾಟೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿ ಆದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.

- Advertisement -

Latest Posts

Don't Miss