Friday, July 11, 2025

Latest Posts

ಹುಬ್ಬಳ್ಳಿ ಗ್ಯಾಂಗ್ ವಾರ್ ಆರೋಪಿಗಳ ಬಂಧನ: ಪೊಲೀಸ್ ಕಮಿಷನರ್ ಹೇಳಿದ್ದೇನು..?

- Advertisement -

Hubli News: ಹುಬ್ಬಳ್ಳಿಯಲ್ಲಿ ನಡೆದ ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಕಿಪಡೆ ಫುಲ್ ಅಲರ್ಟ್ ಆಗಿದೆ. ಘಟನೆ ನಡೆದ ಒಂದೇ ರಾತ್ರಿಯಲ್ಲಿ ಎರಡು ಗ್ಯಾಂಗ್ ಗಳಲ್ಲಿ ಗಲಾಟೆ ಮಾಡಿದವರ ಹಡೆಮುರಿ ಕಟ್ಟಲಾಗಿದೆ. ಈ ಫೈಟ್ ನಿಂದ ಎಚ್ಚೆತ್ತಿರುವ ಪೊಲೀಸರು, ಪುಡಿ ರೌಡಿಗಳಿಗೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಕಮಿಷನರ್ ಸುದ್ದಿಗೊಷ್ಠಿ ವೇಳೆ ಆರೋಪಿಗಳ ಕುಟುಂಬಸ್ಥರಿಂದ ಹೈಡ್ರಮಾ ನಡೆದಿದೆ..

ದಿನಾಂಕ 09-07-2025 ರಂದು ಹುಬ್ಬಳ್ಳಿ ಸೆಟಲಮೆಂಟ್ ನಿವಾಸಿ ರೌಡಿ ಶಿಟರ್ ಶ್ಯಾಮ್ ಜಾಧವ,ಸಂಬಂಧಿ ಸುರೇಶ ಸಂಗಣ್ಣವರ ಕ್ಯಾನ್ಸರ್ ಖಾಯಿಲೆಯಿಂದ ಮೃತರಾಗಿದ್ದು, ಇವರ ಅಂತ್ಯ ಸಂಸ್ಕಾರ ಮಂಟೂರರೋಡ ರುದಭೂಮಿಯಲ್ಲಿ ಮುಗಿಸಿಕೊಂಡು ಅರಳಿಕಟ್ಟಿ ಕಾಲೋನಿ ಬ್ರಿಡ್ಜ್ ಮೂಲಕ ಶ್ಯಾಮ್ ಜಾಧವ ಕುಟುಂಬಸ್ಥರು ಮನೆಗೆ ಹೋಗುತ್ತಿರುವಾಗ, ಎಂಡಿ ದಾವೂದ್ ಸಹಚರರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದಾರೆ. ಈ ವಿಚಾರವಾಗಿ ಎರಡು ಗುಂಪುಗಳ ಮಧ್ಯ ಗಲಾಟೆ ನಡೆದಿದೆ. ಮಾಹಿತಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಗಲಾಟೆಯನ್ನು ನಿಯಂತ್ರಿಸುತ್ತಿಸಲು ಮುಂದಾಗಿದ್ದರು. ಈ ವೇಳೆ ಎರಡೂ ಗುಂಪಿನವರು ಪೊಲೀಸರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.ಅಲ್ಲದೆ ಪೊಲೀಸರ ಮುಂದೆಯೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದರು..ಈ ಘಟನೆ ಹುಬ್ಬಳ್ಳಿ ಜನರನ್ನು ಭಯಗೊಳಿಸಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು, ಒಟ್ಟು 20 ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಕೆಲವು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಹುಡುಕಾಟ ಸಹ ನಡೆಯುತ್ತಿದೆ. ಶ್ಯಾಮ್ ಜಾಧವ್ ಗ್ಯಾಂಗ್ ಮೇಲೆ , ಎಂಡಿ ದಾವೂದ್ ಗ್ಯಾಂಗ್ ಗಿದ್ದ ಹಳೇ ದ್ವೇಷ, ವೈನಮಸ್ಸು , ಈ ಫೈಟ್ ಗೆ ಮೂಲ ಕಾರಣ..

ಘಟನೆಗೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು,ಶ್ಯಾಮ್ ಜಾಧವ್ ಗ್ಯಾಂಗ್ ನಿಂದ 9 ಜನ,ಎಂಡಿ ದಾವೂದ್ ಗ್ಯಾಂಗ್ ನಿಂದ 11 ಆರೋಪಿಗಳ ಬಂಧನ ಮಾಡಿದ್ದು, ಇದರಲ್ಲಿ ಐದು ಜನ ರೌಡಿ ಶಿಟರ್ ಗಳಿದ್ದಾರೆ. ಗಣೇಶ ಜಾಧವ,ಶುಭಂ ಬಿಜವಾಡ, ಪವನ ಇಂದರಗಿ,ವಿನಾಯಕ ದೋಂಡಿ,ಗೌತಮ ಗಾಯಕವಾಡ,ಅಶ್ವಥ ಮಡಿವಾಳರ , ರಾಘವೇಂದ್ರ ಭಜಂತ್ರಿ, ವಿಶಾಲ ಕರಿಗಾರ, ಮಂಜುನಾಥ ಗಾಯಕವಾಡ,ರಾಜೇಶ ಕೊರವರ,ಶೇಖರ ಯರಕಲ್, ಜಾಕೀರ ಹುಸೇನ ಶೇಖ , ನರೋತ್ತಮ ಸಿಂಗ್ ಬದೋರಿಯಾ ,ಕುಮಾರ ಬಿಜಾಪೂರ , ಮಜೀದ ಬೇಪಾರಿ ,ಮಹ್ಮದ ಪಹಾದ ಮೀಠಾಯಿಗರ, ಇಸಾಕ ಬೇಪಾರಿ , ಮಹೆಬೂಬ ಮುಲ್ಲಾ ,ಸನ್ನಿ, ಮುರಾದ ಬೇಪಾರ ಎರಡು ಗ್ಯಾಂಗ್ ಗಳಲ್ಲಿ ಬಂಧಿತ ಆರೋಪಿಗಳು.‌..

ಇನ್ನೂ ಹುಬ್ಬಳ್ಳಿ ನಗರದಲ್ಲಿ ವಯಕ್ತಿಕ ಕಾರಣಕ್ಕೆ ಶಾಂತಿಕದಡುವವರನ್ನು ಸುಮ್ಮನೆ ಬಿಡುವುದಿಲ್ಲ, ಬಂಧಿತ ಆರೋಪಿಗಳಲ್ಲಿ ಕೆಲ ರೌಡಿ‌ ಶಿಟರ್ ಗಳಿದ್ದು, ಅವರ ಗಡಿಪಾರಿಗೆ ಚಿಂತನೆ ನಡೆಸಲಾಗಿದೆ. ಇನ್ನೂಳಿದ ರೌಡಿ ಶಿಟರ್ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಟೌನ್ ಪೊಲೀಸ್ ಠಾಣೆ ಆವರಣದಲ್ಲಿ ಹೈಡ್ರಾಮಾ ಸಹ ನಡೆಯಿತು. ನಮ್ಮ ಮಕ್ಕಳು ಏನು ತಪ್ಪು ಮಾಡಿಲ್ಲ ಸುಮ್ಮನೆ ಪೊಲೀಸರು ಕರೆದುಕೊಂಡು ಬಂದಿದ್ದಾರೆ..ನಮ್ಮ ಮಗನಿಗೆ ಹೃದಯ ಕಾಯಿಲೆ ಇದೆ ಏನಾದರೂ ಆದರೆ ಪೊಲೀಸರೇ ಹೊಣೆ ಅಂತ, ಎಂಡಿ ದಾವೂದ್ ನಿಂದ ಗ್ಯಾಂಗ್ ಬಂಧಿತ ಆರೋಪಿಗಳ ಪರ ಕುಟುಂಬಸ್ಥರು ಕೂಗಾಡಿದ್ದಾರೆ. ಇದಕ್ಕೆ ಉತ್ತರಿಸಿದ ಕಮಿಷನರ್ ನಿಮ್ಮ ಮಕ್ಕಳನ್ನಾ ಮನೆಯಲ್ಲಿಟ್ಟುಕೊಂಡು ಬುದ್ಧಿ ಕಲಿಸಿ, ಅದನ್ನು ಬಿಟ್ಟು ಇಲ್ಲಿ ಬಂದು ಗಲಾಟೆ ಮಾಡಿ ಬೇಡಿ ಎಂದರು.‌ ಪೊಲೀಸ್ ಸಿಬ್ಬಂದಿ ಆರೋಪಿಗಳ ಕುಟುಂಬಸ್ಥರನ್ನು ಠಾಣೆ ಆವರಣದಿಂದ ಹೊರಹಾಕಿದ ಘಟನೆ ಸಹ ನಡೆಯಿತು..

ಒಟ್ಟಿನಲ್ಲಿ ವಯಕ್ತಿಕ ಕಾರಣಕ್ಕೆ ಎರಡು ಗ್ಯಾಂಗ್ ಗಳು ಹೊಡೆದಾಡಿಕೊಂಡು, ಹುಬ್ಬಳ್ಳಿಯಲ್ಲಿ ಶಾಂತಿಕದಡುವ ಪ್ರಯತ್ನ ಮಾಡಿವೆ. ಇನ್ನೂಳಿದ ಆರೋಪಿಗಳನ್ನು ಶಿಘ್ರ ಬಂಧನ ಮಾಡಿ, ಹುಬ್ಬಳ್ಳಿ ನಗರವನ್ನು ಮತ್ತೆ ಸಹಜ ಸ್ಥಿತಿಗೆ ತರುವ ಕಾರ್ಯ ಪೊಲೀಸ್ ಇಲಾಖೆ ಮಾಡಬೇಕಿದೆ..

-ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ..

- Advertisement -

Latest Posts

Don't Miss