Bengaluru: ಬೆಂಗಳೂರಿನ ಬನಶಂಕರಿಯಲ್ಲಿ ಮರದ ಕೊಂಬೆ ಬಿದ್ದು ಅಕ್ಷಯ್ ಎಂಬ ಯುವಕ ಮೃತನಾಗಿದ್ದ. ಕೆಲ ದಿನಗಳ ಕಾಲ ಕೋಮಾದಲ್ಲಿದ್ದ ಅಕ್ಷಯ್ ಬಳಿಕ ಮೃತನಾದ. ಅಪ್ಪನ ಬರ್ತ್‌ಡೇ ಎಂದು ಚಿಕನ್ ತರಲು ಹೋಗಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿತ್ತು.
ಇದೀಗ ಮಗನ ಸಾವಿನ ನೆನಪಲ್ಲೇ ತಂದೆಯೂ ನಿಧನರಾಗಿದ್ದಾರೆ. ಅಕ್ಷಯ್ ತಂದೆ ಶಿವರಾಮ್ ಮೃತ ವ್ಯಕ್ತಿಯಾಗಿದ್ದಾರೆ. ಅಕ್ಷಯ್ ಮೇಲೆ ಕೊಂಬೆ ಬಿದ್ದು, ಆತನನ್ನು ಹಲವು ದಿನಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಕೋಮಾಗೆ ಹೋಗಿದ್ದಾನೆಂದು ಹೇಳಿದ್ದ ವೈದ್ಯರು, ಬಳಿಕ ಆತನ ಬ್ರೈನ್ ಡೆಡ್ ಆಗಿದೆ ಎಂದಿದ್ದರು. ಅದಾದ ನಂತರ ಜೂನ್ 19ರಂದು ಅಕ್ಷಯ್ ನಿಧನವಾದ. ಬಳಿಕ ಅವನ ಮನೆಯವರು ನೇತ್ರದಾನ ಮಾಡಿ ಮಾನವೀಯತೆ ಮೆರೆದಿದ್ದರು.
ಇದೀಗ ಮಗನ ಸಾವಿನ 20 ದಿನಗಳ ಬಳಿಕ ತಂದೆ ಶಿವರಾಮ್ ಕೂಡ ಸಾವನ್ನಪ್ಪಿದ್ದಾರೆ. ಶಿವರಾಮ್ ಅವರು ಅನಾರೋಗ್ಯದಿಂದ ಬಳಲುತ್‌ತಿದ್ದು, ಮಗನ ಸಾವಿನಿಂದಾಗಿ ಆರೋಗ್ಯದ ಕಡೆ ಗಮನ ಹರಿಸಲಾಗದೇ, ಇದೀಗ ಸಾವನ್ನಪ್ಪಿದ್ದಾರೆ.