Saturday, July 12, 2025

Latest Posts

ದೇಶದಲ್ಲಿ ಯಾವ ಸಿಎಂಗೂ ಸಿದ್ದರಾಮಯ್ಯ ಬಂದ ಪರಿಸ್ಥಿತಿ ಬಂದಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

- Advertisement -

Hubli News: ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯ ಉಣಕಲ್ ನಲ್ಲಿರುವ ಭಾರತೀಯ ಸರ್ಕಾರದ ಉಗ್ರಾಣಕ್ಕೆ ಇಂದು ಭೇಟಿ ನೀಡಿದ್ದು, ಅಕ್ಕಿಯನ್ನು ಪರಿಶೀಲಿಸಿದರು. ನಂತರ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ.

ಇದಾದ ಬಳಿಕ ಮಾಧ್ಯಮದ ಜತೆ ಮಾತನಾಡಿರುವ ಜೋಶಿ, ಉಗ್ರಾಣಕ್ಕೆ ನಾನು ಬಂದಿದ್ದೆ, ತಂತ್ರಜ್ಞಾನ ಉಪಯೋಗಿಸಿ ಆಹಾರ ವೆಸ್ಟ್ ಆಗಬಾರದು. ಅಂತ ಆದ್ಯತೆ ಕೊಟ್ಟಿದ್ದೇವೆ. ಅನ್ನ ಚಕ್ರ ಸೇರಿ ಹಲವು ಆಪ್ ಗಳನ್ನ ಡೆವಲಪ್ ಮಾಡಿದ್ದೇವೆ. ವೇಸ್ಟೇಜ್ ಬಹಳಷ್ಟು ಇಳಿದಿದೆ. ಮೋದಿ ಸರ್ಕಾರದ ಬಂದ ನಂತರ ಹಲವು ಕ್ರಮಗಳನ್ನ ಕೈಗೊಂಡಿದ್ದೇವೆ ಎಂದು ಜೋಶಿ ಹೇಳಿದ್ದಾರೆ.

ಡಿಪೋ ದರ್ಪಣದಲ್ಲಿ ಏನೇನು ಆಗ್ತಾ ಇದೆ. ಅನ್ನೋದನ್ನ ಒಂದೇ ಕಡೆ ಕೂತು ಪರಿಶೀಲನೆ ಮಾಡಬಹುದು. ಅನ್ನಚಕ್ರದಲ್ಲಿ ವಾಹನಗಳಿಗೆ ಜಿ ಪಿ ಎಸ್ ಹಾಕಿ ಎಲ್ಲೆ ಹೋಗ್ತಾ ಇದೆ ಅನ್ನೋದು ತಿಳಿದುಕೊಳ್ಳಬಹುದು. ಜನರಿಗೆ ಉತ್ತಮ ರೀತಿಯಾಗಿ ಮುಟ್ಟಬೇಕು. ಹೀಗಾಗಿ ಇಲ್ಲಿ ಹೇಗಿದೆ ಅನ್ನೋದನ್ನ ಪರಿಶೀಲನೆ ಮಾಡಲು ಬಂದಿದೆ. 1.74 ಲಕ್ಷ ಟನ್ ಸಾಮರ್ಥ್ಯ ಆಹಾರ ಧಾನ್ಯ ಸಂಗ್ರಹಿಸೋ ಉಗ್ರಾಣ ಬೇರೆ ಬೇರೆ ಕಡೆ ಮಾಡಿದ್ದೇವೆ. ಪ್ರಧಾನ ಮಂತ್ರಿ ಗರೀಬ್ ಯೋಜನೆ. ಅನ್ನಭಾಗ್ಯ ಅಂತ ಕೊಡ್ತಾರೆ ಆದ್ರೆ ಅಕ್ಕಿ ನಾವು ಕೊಡ್ತೇವೆ. ಮುನಿಯಪ್ಪ ಅವರು ಜೋಳ ಕೇಳಿದ್ರು, ಕೊಟ್ಟಿದ್ವಿ.  ಆದರೆ 304 ಕೋಟಿ ಜೋಳದ ಹಣ ಇನ್ನು ಕೊಟ್ಟಿಲ್ಲ.

ಸ್ಥಳೀಯವಾಗಿ ಅಕ್ಕಿ ಖರೀಸಿದ್ದ 584 ಕೋಟಿ ಕೊಟ್ಟಿಲ್ಲ. ದುಡ್ಡು ನಾವು ಕೊಡ್ತೇವೆ, ಪೇಮೆಂಟ್ ಅವರು ಕೊಡಬೇಕು. ಮುಖ್ಯಮಂತ್ರಿಗಳು ದೊಡ್ಡ ದೊಡ್ಡ ಭಾಷಣ ಮಾಡ್ತಾರೆ. ಟ್ರಾನ್ಸ್ಪೋರ್ಟ್ ಹಣ ಸಹ ಕೊಟ್ಟಿಲ್ಲ ಇವರು. ರಾಜ್ಯ ಸರ್ಕಾರ ದಿವಾಳಿ ಎದ್ದಿದೆ ಅನ್ನೋದಕ್ಕೆ ಇದು ಒಳ್ಳೆಯದು ಉದಾಹರಣೆ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ದೆಹಲಿಗೆ ಹೋಗಿದ್ದರ ಬಗ್ಗೆ ಮಾತನಾಡಿರುವ ಜೋಶಿ, ಮುಖ್ಯಮಂತ್ರಿಗಳು ದೆಹಲಿಗೆ ಹೋಗಿ ಖುರ್ಚಿ ಉಳಿಸಿಕೊಳ್ಳೋದಕ್ಕೆ ಹೊರಟ್ಟಿದ್ದಾರೆ. ರಾಹುಲ್ ಗಾಂಧೀಯನ್ನ ಭೇಟಿ ಆಗೋದಕ್ಕೆ ಮೂರ್ಮುರು ದಿನ ಕೂರ್ತಾರೆ ಅದರ ಬದಲು ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಿ ರಾಜನಾಥ ಸಿಂಗ ಭೇಟಿ ಮಾಡುವ ನೆಪದಲ್ಲಿ ಬಂದಿದ್ದಾರೆ ನಕಲಿ ಗಾಂಧೀ ಕಾಂದಾನ ಅವರ ಅಹಂಕಾರ ಹಾಗೂ ಮುಖ್ಯಮಂತ್ರಿಗಳ ಯೋಗ್ಯತೆ ಏನು ಗೊತ್ತಾಗ್ತಾ ಇದೆ ಎಂದು ಜೋಶಿ ಹೇಳಿದ್ದಾರೆ.

ಜೈಲಿನಲ್ಲಿ ಇರುವ ಭಯೋತ್ಪಾದಕರಿಗೆ ಕರ್ನಾಟಕ ಸುರಕ್ಷಿತ ಸ್ಥಾನ ಆಗಿದೆ. ಜೈಲಿನಲ್ಲಿ ಎಲ್ಲಾ ಆಥಿತ್ಯ ಸಿಗುತ್ತೆ
ಆದರೆ ಇವರಿಗೆ ಗೊತ್ತಾಗಲ್ಲ. ಕೇಂದ್ರದವರು ಹೇಳಿದಾಗ ಆಕಳಿಸುತ್ತ ಏಳುತ್ತಾರೆ. ಸರ್ಕಾರದಲ್ಲಿರುವವರು ನಮ್ಮ ಸ್ನೇಹಿತರು ಅಂತ ಭಯೋತ್ಪಾದಕರಿಗೆ ಗೊತ್ತಾಗಿದೆ. ಆಪರೇಷನ್ ಸಿಂಧೂರಲ್ಲಿ ಭಯೋತ್ಪಾದಕರಿಗೆ ನಾವು ಪೆಟ್ಟು ಕೊಟ್ಟಿದ್ದೇವೆ. ರಾಜ್ಯ ಸರ್ಕಾರ ಆಡಳಿತ ಯಂತ್ರದ ಕಡೆ ಗಮನ ಹರಿಸಬೇಕು. ಭ್ರಷ್ಟಾಚಾರ ಕಡಿಮೆ ಮಾಡಿ ಎಂದು ಜೋಶಿ ಹೇಳಿದ್ದಾರೆ.

ನಾನೇ ಮುಖ್ಯಮಂತ್ರಿ ಅಂತ ಸಿದ್ದರಾಮಯ್ಯ ಹೇಳಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ದೇಶದ ಯಾವ ಮುಖ್ಯಮಂತ್ರಿ ಸಹ ಈ ರೀತಿ ಹೇಳಿಕೊಂಡಿಲ್ಲ. ಇಬ್ಬರಲ್ಲಿ ಸುಳ್ಳು ಯಾರು ಹೇಳ್ತಾ ಇದ್ದಾರೆ ಅಂತ ಖರ್ಗೆ, ರಾಹುಲ್ ಗಾಂಧೀ ಉತ್ತರ ಕೊಡಬೇಕು. ಸುರ್ಜೆವಾಲ್ 15 ದಿನಕ್ಕೊಮ್ಮೆ ಬಂದು ಹೋಗ್ತಾರೆ. ಚೀಟಿ ಬರೆದು ಕೊಡಲು ಹೇಳ್ತಾರೆ. ನಿಮಗೆ ಎಷ್ಟು ಬೆಂಬಲ ಇದೆ, ಅವರಿಗೆ ಎಷ್ಟು ಬೆಂಬಲ ಇದೆ ಅಂತ ಮುಖ್ಯಮಂತ್ರಿಗಳು ತಿಳಿಸಬೇಕು. ಇಬ್ಬರಲ್ಲಿ ಒಬ್ಬರಂತೂ ಸುಳ್ಳು ಹೇಳಿರಲೇ ಬೇಕಲ್ಲ..? ಡಿಕೆ ಶಿವಕುಮಾರ್ ಅವರು ನನಗೆ ಭೇಟಿ ಆಗಿ ಅಭಿವೃದ್ಧಿ ಬಗ್ಗೆ ಮಾತನಾಡಿದರು. ನಾವು ಸಿದ್ದರಾಮಯ್ಯ, ಡಿಕೆಶಿ ಇಬ್ಬರನ್ನು ನಂಬುವ ಹಾಗಿಲ್ಲ. ಅವರ ನಡುವೆ ಆದಂತ ಅಗ್ರಿಮೆಂಟ್ ಗೊತ್ತಿದೆ ಆದ್ರೆ ಅವರೇ ಹೇಳಬೇಕು ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.

ಮಹಾರಾಷ್ಟ್ರದಂತೆ ಇಲ್ಲಿ ನಡೆಯುವ ಯಾವುದೇ ಉದ್ದೇಶ ನಮಗಿಲ್ಲ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಂತ ಹಂತವಾಗಿ ಎಲ್ಲಾ ರಾಜ್ಯದಲ್ಲೂ ಚರ್ಚೆ ಮಾಡಿ ಮಾಡ್ತೇವೆ. ಯಾವುದೇ ಬಣದವರಿಗೆ ಪಬ್ಲಿಕ್ ಆಗಿ ಹೇಳಬಾರದು ಅಂತ ವರಿಷ್ಠರು ಹೇಳಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ರಾಜ್ಯ ಬಿಜೆಪಿಯಲ್ಲಿ ಬಣಗಳ ಬಗ್ಗೆ ಜೋಶಿ ಪ್ರಸ್ತಾಪಿಸಿದ್ದಾರೆ.

ವಿಜಯೇಂದ್ರ ನಾನೇ ರಾಜ್ಯಾಧ್ಯಕ್ಷ ಅಂತ ಹೇಳಿಕೆ ಕೊಟ್ಟಿಲ್ಲ. ಚುನಾವಣೆ ಮೂಲಕ ರಾಜ್ಯಾಧ್ಯಕ್ಷ ಆಯ್ಕೆ ಮಾಡಲಾಗುತ್ತೆ. ಪ್ರಕ್ರಿಯೆಯಲ್ಲಿ ಎಲ್ಲರನ್ನು ಗಣನೆಗೆ ತೆಗೆದುಕೊಂಡು ಮಾಡ್ತೇವೆ. ಪ್ರೊಸೆಸ್ ಇರೋದ್ರಿಂದ ಸಮಯ ಹಿಡಿಯುತ್ತೆ ಎಂದು ಜೋಶಿ ಹೇಳಿದ್ದಾರೆ.

- Advertisement -

Latest Posts

Don't Miss