- Advertisement -
Recipe: ಬೇಕಾಗುವ ಸಾಮಗ್ರಿ: 2 ಬೇಯಿಸಿದ ಆಲೂಗಡ್ಡೆ, ಅರ್ಧ ಸ್ಪೂನ್ ತರಿತರಿಯಾಗಿ ಪುಡಿ ಮಾಡಿದ ಕಾಳುಮೆಣಸು, ಕೊತ್ತೊಂಬರಿ ಸೊಪ್ಪು, ಶುಂಠಿ- ಬೆಳ್ಳುಳ್ಳಿ ಪೆಸ್ಟ್, 1 ಸ್ಪೂನ್ ಗರಂ ಮಸಾಲೆ, 4ರಿಂದ 5 ಸ್ಪೂನ್ ಕಡಲೆ ಹುಡಿ, ಉಪ್ಪು, 1 ಕಪ್ ತುರಿದ ಚೀಸ್, ಕರಿಯಲು ಎಣ್ಣೆ.
ಮಾಡುವ ವಿಧಾನ: ಮಿಕ್ಸಿಂಗ್ ಬೌಲ್‌ನಲ್ಲಿ ಆಲೂಗಡ್ಡೆಯನ್ನು ಮ್ಯಾಶ್ ಮಾಡಿ, ಅದಕ್ಕೆ ಕಾಳುಮೆಣಸಿನಪುಡಿ, ಕೊತ್ತೊಂಬರಿ ಸೊಪ್ಪು, ಶುಂಠಿ- ಬೆಳ್ಳುಳ್ಳಿ ಪೆಸ್ಟ್, ಗರಂ ಮಸಾಲೆ, ಕಡಲೆಹುಡಿ, ಉಪ್ಪು, ತುರಿದ ಚೀಸ್ ಸೇರಿಸಿ ಮಿಕ್ಸ್ ಮಾಡಿ. ಇದನ್ನೇ ಉಂಡೆ ಮಾಡಿ, ಕಾದ ಎಣ್ಣೆಯಲ್ಲಿ ಮಂದ ಉರಿಯಲ್ಲಿ ಕರಿದರೆ, ಚೀಸ್ ಬಾಲ್ಸ್ ರೆಡಿ. ಸಾಸ್ ಜತೆ ಕಾಂಬಿನೇಷನ್ ಉತ್ತಮವಾಗಿರುತ್ತದೆ.
- Advertisement -