Tuesday, July 15, 2025

Latest Posts

Recipe: ಹಬ್ಬದ ದಿನಗಳಲ್ಲಿ ತಯಾರಿಸಬಹುದಾದ ಬೇಸನ್ ಲಡ್ಡು ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: 2 ಕಪ್ ಕಡಲೆಹುಡಿ, ಅದರ ಅರ್ಧ ಕಪ್ ತುಪ್ಪ, 175 ಗ್ರಾಮ್ ಸಕ್ಕರೆ ಪುಡಿ, ಸ್ವಲ್ಪ ಏಲಕ್ಕಿ, ದ್ರಾಕ್ಷಿ, ಗೋಡಂಬಿ.

ಮಾಡುವ ವಿಧಾನ: 1 ಪ್ಯಾನ್ ಬಿಸಿ ಮಾಡಿ ಅದಕ್ಕೆ ಕಡಲೆಹುಡಿ ಹಾಕಿ ಘಮ ಬರುವವರೆಗೂ ಹುರಿಯಿರಿ. ಬಳಿಕ ತುಪ್ಪ ಹಾಕಿ, ಅದು ಹಲ್ವಾ ರೀತಿ ಆಗುವವರೆಗೂ ಮಗುಚಿರಿ. ಬಳಿಕ ಸಕ್ಕರೆ ಪುಡಿ ಹಾಕಿ ತಿರುವಿ. ನಂತರ ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ ಹಾಕಿ ಮಿಕ್ಸ್ ಮಾಡಿ. ಮಿಶ್ರಣ ಪೂರ್ತಿಯಾಗಿ ತಣಿಯದೇ, ಹೆಚ್ಚು ಬಿಸಿಯೂ ಇರದೇ ಇರುವಾಗ ಲಾಡು ತಯಾರಿಸಬೇಕು.

ಇದನ್ನು ಹಬ್ಬದ ಸಮಯದಲ್ಲಿ ಮಾಡಿ ಸವಿಯಬಹುದು. ಅಥವಾ ಮಕ್ಕಳಿಗೆ ಶಾಲೆಗೆ ಸ್ನ್ಯಾಕ್ಸ್ ಆಗಿ ನೀಡಬಹುದು. ಇದು ಆರೋಗ್ಯಕರವೂ ಹೌದು, ರುಚಿಕರವೂ ಹೌದು. ಆದರೆ ದಿನಕ್ಕೆ 1 ಲಾಡು ತಿಂದರೆ ಉತ್ತಮ. 2ಕ್ಕಿಂತ ಹೆಚ್ಚು ತಿಂದರೆ, ಉದರ ಸಮಸ್ಯೆ ಉದ್ಭವಿಸುತ್ತದೆ.

- Advertisement -

Latest Posts

Don't Miss