Tuesday, July 15, 2025

Latest Posts

ಮಂಡಿಯೂರಿದ ಬಾಂಗ್ಲಾ..! ಭಾರತ ಕಂಡರೆ ಭಯವೇಕೆ..? : ಹೊಸ ರಾಜತಾಂತ್ರಿಕತೆ ಆರಂಭಿಸಿದ ಯೂನಸ್ ಸರ್ಕಾರ

- Advertisement -

ನವದೆಹಲಿ : ಭಾರತದ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆಯ ಬಳಿಕ ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನಸ್‌ ಥಂಡಾ ಹೊಡೆದಿದ್ದಾರೆ. ನಿಮ್ಮ ದೇಶದಲ್ಲಿ ನಮ್ಮ ಭಾರತೀಯರಿಗೆ ಯಾವುದೇ ತೊಂದರೆಯಾದರೆ ಪರಿಣಾಮ ನೆಟ್ಟಗಿರಲ್ಲ ಎಂದು ಕಳೆದ ಕೆಲ ತಿಂಗಳ ಹಿಂದಷ್ಟೇ ವಾರ್ನ್ ಮಾಡಿದ್ದರು. ಆದರೆ ಇದಾದ ಬಳಿಕ ಫುಲ್‌ ಸೈಲೆಂಟ್‌ ಆಗಿರುವ ಯೂನಸ್‌ ಭಾರತದೊಂದಿಗೆ ರಾಜತಾಂತ್ರಿಕ ದಾರಿ ತುಳಿಯುವ ಮೂಲಕ ಮಂಡಿಯೂರಿದ್ದಾರೆ.

ಇನ್ನೂ ಉತ್ತಮವಾದ ವಾತಾವರಣದಲ್ಲಿ ಬಾಂಗ್ಲಾ ದೇಶದ ಜೊತೆಗೆ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಭಾರತ ಸಿದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿತ್ತು. ಇದಾದ ಒಂದು ವಾರದ ಬಳಿಕ ಮಧ್ಯಂತರ ಸರ್ಕಾರದ ಮುಖ್ಯಸ್ಥ ಪ್ರೊಫೆಸರ್ ಮುಹಮ್ಮದ್ ಯೂನಸ್ ಭಾರತದೊಂದಿಗೆ ಹೊಸದಾದ ರೀತಿಯಲ್ಲಿ ಮಾವಿನ ರಾಜತಾಂತ್ರಿಕತೆಗೆ ಮುಂದಾಗಿದ್ದಾರೆ. ಎರಡು ನೆರೆಹೊರೆಯವರ ನಡುವಿನ ಸೌಹಾರ್ದತೆಯ ಭಾಗವಾಗಿ ಢಾಕಾದಿಂದ 1,000 ಕಿಲೋಗ್ರಾಂಗಳಷ್ಟು ಪ್ರಸಿದ್ಧ ಹರಿಭಂಗ ಮಾವಿನ ಹಣ್ಣಿನ ವಿಧದ ಸರಕನ್ನು ಬಾಂಗ್ಲಾದಿಂದ ಭಾರತಕ್ಕೆ ರವಾನಿಸಲಾಗಿದೆ.

ಅಲ್ಲದೆ ಬಾಂಗ್ಲಾದೇಶದ ದಿನಪತ್ರಿಕೆ ಡೈಲಿ ಸನ್ ಹೇಳುವ ಪ್ರಕಾರ, ಈ ಮಾವಿನ ಹಣ್ಣಿನ ಸರಕು ಸೋಮವಾರ ನವದೆಹಲಿಯನ್ನು ತಲುಪಲಿದೆ ಎಂದು ಭಾರತದಲ್ಲಿನ ಬಾಂಗ್ಲಾದೇಶ ಹೈಕಮಿಷನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನೂ ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯೂನಸ್ ಕಳೆದ ಏಪ್ರಿಲ್‌ ತಿಂಗಳಲ್ಲಿ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಬಿಮ್‌ಸ್ಟೆಕ್ ಶೃಂಗಸಭೆಯ ವೇಳೆ ಮುಖಾಮುಖಿಯಾಗಿ ಭೇಟಿಯಾಗಿದ್ದರು.

ಪ್ರಜಾಪ್ರಭುತ್ವ, ಸ್ಥಿರ, ಶಾಂತಿಯುತ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲವನ್ನು ಪ್ರಧಾನಿ ಪುನರುಚ್ಚರಿಸಿದ್ದರು. ಭಾರತವು ಯಾವತ್ತೂ ತನ್ನೊಂದಿಗಿನ ಸಂಬಂಧಕ್ಕೆ ಜನರನ್ನು ಕೇಂದ್ರಿಕರಿಸಿದ ವಿಧಾನವನ್ನು ಬಯಸುತ್ತದೆ ಎಂದು ಹೇಳಿದ್ದರು. ಅಲ್ಲದೆ ಸುದೀರ್ಘ ಕಾಲದವರೆಗೆ ಉಭಯ ದೇಶಗಳ ನಡುವಿನ ಸಹಕಾರ ಎರಡೂ ದೇಶಗಳ ಜನರಿಗೆ ಸಾಕಷ್ಟು ಅನುಕೂಲ ಮಾಡಿವೆ ಎಂದು ಪ್ರತಿಪಾದಿಸಿದ್ದರು.

ಮುಖ್ಯವಾಗಿ ಬಾಂಗ್ಲಾ ದೇಶದ ಯೂನಸ್ ಸರ್ಕಾರ ಭಾರತದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಅವರಿಗೂ ಮಾವಿನ ಹಣ್ಣುಗಳನ್ನು ಕಳುಹಿಸುತ್ತಿದೆ. ಹರಿಭಂಗ ಬಾಂಗ್ಲಾದೇಶದ ಪ್ರೀಮಿಯಂ ಮಾವಿನ ವಿಧವಾಗಿದೆ. ಹಿಂದಿನ ಆಡಳಿತಗಳಿಂದಲೂ ಮಾವಿನ ಹಣ್ಣುಗಳನ್ನು ಕಳುಹಿಸುವ ಪದ್ಧತಿ ರೂಢಿಯಲ್ಲಿತ್ತು. ಆದರೆ ಇದೀಗ ಮತ್ತೆ ಯೂನಸ್‌ ಓ ಹೆಜ್ಜೆಯನ್ನು ಇಟ್ಟಿದ್ದಾರೆ. ಈ ಮೂಲಕವಾದರು ಭಾರತದೊಂದಿಗೆ ಹಂತ ಹಂತವಾಗಿ ಸಂಬಂಧವನ್ನು ವೃದ್ದಿಸಿಕೊಳ್ಳುವ ಇರಾದೆಯಲ್ಲಿ ಪ್ರೊಫೆಸರ್‌ ಇದ್ದಂತೆ ಕಂಡು ಬರುತ್ತಿದೆ.

- Advertisement -

Latest Posts

Don't Miss