Hubli News: ಹುಬ್ಬಳ್ಳಿ : ಹುಬ್ಬಳ್ಳಿ – ಶಕ್ತಿ ಯೋಜನೆ ಅಡಿ 500 ಕೋಟಿ ಮಹಿಳೆಯರು ಬಸ್ ಪ್ರಯಾಣ ಹಿನ್ನೆಲೆ, ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಲ್ಲಿ ಸಂಭ್ರಮಾಚರಣೆ ಆಚರಿಸಲಾಯಿತು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಕಾರ್ಯಕ್ರಮಕ್ಕೆ ಚಾಲನೆ ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್ ಹೆಚ್ ಕೋನರೆಡ್ಡಿ, ಡಿಸಿ ದಿವ್ಯ ಪ್ರಭು, ವಾಯುವ್ಯಾ ಸಾರಿಗೆ ನಿಗಮದ ಎಂಡಿ ಪ್ರಿಯಾಂಗಾ ಮತ್ತಿತರರು ಭಾಗಿಯಾಗಿದ್ದು, ಮಹಿಳೆಯರಿಗೆ ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಿದರು.
ಸಾರಿಗೆ ನೌಕರರಿಗೂ ಸನ್ಮಾನ ಮಾಡಿದ ಬಳಿಕ ಮಾತನಾಡಿರುವ ಸಚಿವ ಸಂತೋಷ್ ಲಾಡ್, ಪ್ರಪಂಚದಲ್ಲಿ 500 ಕೋಟಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟದ್ದು ನಮ್ಮ ಸರ್ಕಾರ. ಕೊಟ್ಟ ಮಾತಿನಂತೆ ಶಕ್ತಿ ಪ್ರಾರಂಭಿಸಿದ್ದೇವೆ. 10 ಸಾವಿರಕ್ಕೂ ಹೆಚ್ಚು ಜನರ ನೇಮಕಾತಿ ಮಾಡಿಕೊಂಡಿದ್ದೇವೆ. 5 ಸಾವಿರಕ್ಕೂ ಹೆಚ್ಚು ನೂತನ ಬಸ್ ಖರೀದಿಸಿದ್ದೇವೆ. 25 ಸಾವಿರ ಬಸ್ ನಮ್ಮ ಸಾರಿಗೆಯಲ್ಲಿವೆ. 150 ಕ್ಕೂ ಹೆಚ್ಚು ಪ್ರಶಸ್ತಿ ಪಡೆದಿದ್ದೇವೆ. ಬೇರೆ ರಾಜ್ಯಗಳಿಕೆ ಹೋಲಿಕೆ ಮಾಡಿದಲ್ಲಿ ನಮ್ಮ ಸಾರಿಗೆಯದ್ದು ಅತ್ಯಂತ ಕಡಿಮೆ ದರ ಎಂದಿದ್ದಾರೆ.
50 ಪ್ರತಿಶತ ಹೆಣ್ಣು ಮಕ್ಕಳಿಗೆ ಉಚಿತವಾಗಿ ಕರೆದುಕೊಂಡು ಹೋದರೂ ಬಸ್ ದರ ಕಡಿಮೆ ಇಟ್ಟಿದ್ದೇವೆ.
ಶಕ್ತಿ ಗಾಗಿ 12 ಸಾವಿರ ಕೋಟಿ ರೂಪಾಯಿ ಸರ್ಕಾರ ಖರ್ಚು ಮಾಡಿದೆ. ಇದರಿಂದ ಮಹಿಳೆಯರ ಉದ್ಯೋಗ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಹಿಳೆಯರು ದೇವಸ್ಥಾನಗಳಿಗೂ, ಪ್ರವಾಸಿ ತಾಣಗಳಿಗೂ ಭೇಟಿ ನೀಡಿದ್ದಾರೆ.
ಮಹಿಳೆಯರು ನಮ್ಮ ನಾಯಕರಿಗೆ ಆಶೀರ್ವದಿಸಿದ್ದಾರೆ. ಐದು ಸಾವಿರ ಬಸ್ ಖರೀದಿಸಲಾಗಿದ್ದು, ಸದ್ಯ 300 ಬಸ್ ಬರಲಿವೆ ಎಂದಿದ್ದಾರೆ.