Tuesday, July 15, 2025

Latest Posts

Hubli News: ಟ್ರಂಪ್‌ ಯಾರ ಫ್ರೆಂಡ್‌..? : ಸಚಿವ ಸಂತೋಷ್‌ ಲಾಡ್‌ ಲೇವಡಿ

- Advertisement -

Hubli News: ಬಿಜೆಪಿಯವರಿಗೆ ಕೇಂದ್ರ ಸರ್ಕಾರದ ವಿರುದ್ಧ ಒಂದೇ ಒಂದು ಪ್ರಶ್ನೆ ಕೇಳಬಾರದು. ಇವರಿಗೆ ಕೇವಲ ರಾಜ್ಯದ ವಿಷಯ ಮಾತನಾಡಬೇಕು. ಇವರು ಮಾತ್ರ ಪ್ರಪಂಚದ ಯಾವುದೇ ವಿಷಯದ ಬಗ್ಗೆ, ಯಾರ ಬಗ್ಗೆ ಬೇಕಾದರೂ ಮಾತನಾಡಬಹುದೇ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರು ಪ್ರಶ್ನಿಸಿದರು.

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಹುಲ್‌ ಗಾಂಧಿ, ಇಂದಿರಾ ಗಾಂಧಿ, ನೆಹರು ಬಗ್ಗೆ ಮಾತನಾಡಬಹುದು. ಪ್ರಪಂಚದ ಎಲ್ಲ ನಾಯಕರ ಬಗ್ಗೆ ಮಾತನಾಡಬಹುದು. ಆದರೆ ಕಾಂಗ್ರೆಸ್‌ನವರು ಮಾತ್ರ ಅವರಿಗೆ ಏನೂ ಕೇಳಬಾರದು. ಇವರಿಗೆ ಸರಿಯಾದ ಒಂದೇ ಪ್ರಶ್ನೆ ಕೇಳಬಾರದು. ಮುಜುಗರ ಆಗುವ ಪ್ರಶ್ನೆ ಕೇಳಬಾರದು. ಕೇಳಿದರೆ ಸಂತೋಷ್‌ ಲಾಡ್‌ ಹಾಗೆ ಮಾತನಾಡುತ್ತಾನೆ. ಹೀಗೆ ಮಾತನಾಡುತ್ತಾನೆ ಎಂದು ಹೇಳ್ತಾರೆ ಎಂದು ಹೇಳಿದರು.

ಟ್ರಂಪ್‌ ಯಾರ ಫ್ರೆಂಡ್‌
ಭಾರತ ಮತ್ತು ಪಾಕಿಸ್ತನ ನಡುವಿನ ಯುದ್ಧ ನಿಲ್ಲಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕಳೆದ ನಲವತ್ತು ಐವತ್ತು ದಿನಗಳಲ್ಲಿ ಹಲವಾರು ಬಾರಿ ಹೇಳಿದ್ದಾರೆ. ಹಾಗಾದರೆ ಟ್ರಂಪ್‌ ಯಾರ ಫ್ರೆಂಡ್‌. ಟ್ರಂಪ್‌ ಹೇಳಿಕೆ ಬಗ್ಗೆ ಕೇಂದ್ರದ ಯಾವುದೇ ಸಚಿವರು, ಹೋಗಲಿ ಪ್ರಧಾನಿ ಇದಕ್ಕೆ ಉತ್ತರ ಕೊಡುತ್ತಿಲ್ಲ. ಇದನ್ನು ಪ್ರಶ್ನೆ ಮಾಡಿದ್ದೇವೆ. ಅದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡರು.

ಮೋದಿ ಅವರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಏನು ವಾಗ್ದಾನ ಮಾಡಿದ್ರು. ಅದನ್ನು ನಾವು ಯಾವಾಗಲೂ ಪ್ರಶ್ನೆ ಮಾಡ್ತ ಇದ್ದೇವೆ. ಅವರಿಗೂ ನಮಗೂ ಯಾವುದೇ ವೈಯಕ್ತಿಯ ಅಜೆಂಡಾ ಇಲ್ಲ. ಆಗ ಇವರು ಸ್ಥಳೀಯ ವಿಷಯ ಮಾತ್ರ ಮಾತನಾಡಬೇಕು ಎನ್ನುತ್ತಾರೆ. ನಮ್ಮ ದೇಶದ ಪ್ರಧಾನಿಗೆ ಯಾರೇ ಪ್ರಶ್ನೆ ಮಾಡುವ ಹಕ್ಕು ಇದೆ. ಆ ಆವಕಾಶ ಚಲಾಯಿಸುತ್ತಿದ್ದೇವೆ. ನಾನು ಕೇಳುವ ಪ್ರಶ್ನೆಯಲ್ಲಿ ತಪ್ಪಿದ್ದರೆ ತಿದ್ದಿಕೊಳ್ಳುವೆ ಎಂದರು.

ಭಾರತಕ್ಕಿಂತ ಮೋದಿ ವರ್ಚಸ್ಸು ದೊಡ್ಡದಾಯ್ತಾ?
ಭಾರತಕ್ಕಿಂತ ಮೋದಿ ಅವರ ವರ್ಚಸ್ಸು ದೊಡ್ಡದಾ? ಈ ದೇಶ ಬರೀ ಕಾಂಗ್ರೆಸ್‌ ಬಿಜೆಪಿಯದ್ದಲ್ಲ. ದೇಶ ಎಲ್ಲರಿಗೂ ಸೇರಿದ್ದು. ಮೋದಿ ಅವರು ಕೇವಲ ಈ ದೇಶದ ಪ್ರಧಾನಿ ಅಷ್ಟೇ ಎಂದರು.

ಭಾರತದ ಸಾಧನೆ ಏನು
ಕಳೆದ ಹನ್ನೊಂದು ವರ್ಷದಲ್ಲಿ ಭಾರತ ಯಾವುದರಲ್ಲಿ ಮುಂದೆ ಇದೆ. ಏನು ಸಾಧನೆ ಮಾಡಿದೆ. ಯಾವ ಇಲಾಖೆಯಲ್ಲಿ ಸಾಧನೆ ಮಾಡಿದೆ ಎಂಬುದನ್ನು ತೋರಿಸಲಿ. ಡಾ. ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ̇87 ನೇ ರ್ಯಾಂಕಿಂಗ್‌ ನಲ್ಲಿ ಇದ್ದ ಭಾರತ ಇಂದು 150ನೇ ರ್ಯಾಂಕಿಂಗ್‌ಗೆ ಇಳಿದಿದೆ. ಇದು ನಾಚಿಕೆಗೇಡು ಅಲ್ಲವೇ ಎಂದು ವ್ಯಂಗ್ಯವಾಡಿದರು.

ಬಿಜೆಪಿಯಲ್ಲಿ ಇಂಗ್ಲಿಷ್‌ ಮಾತನಾಡುವವರು ಇಲ್ಲವೇ
ಪ್ರಧಾನಿ ಮೋದಿ ಅವರು ಈವರೆಗೆ 90 ದೇಶಕ್ಕೆ ಹೋಗಿದ್ದಾರೆ. ಶಶಿತರೂರ್‌ ಅವರು ಇವರಿಗೆ ಯಾಕೆ ಬೇಕು. ಇವರು ವಿಶ್ವಗುರು ಅಲ್ಲವೇ. ಬಿಜೆಪಿಯಲ್ಲಿ ಇಂಗ್ಲಿಷ್‌ ನಲ್ಲಿ ಸಮರ್ಥವಾಗಿ ಮಾತನಾಡುವವರು ಯಾರು ಇಲ್ಲವೇ. ಮೋದಿ ಅವರ ಕಾಲದಲ್ಲಿ ಭಾರತಕ್ಕೆ ವಿಶ್ವದ ಬೆಂಬಲದ ಕಡಿಮೆ ಆಗಿದೆ ಎಂದು ಹೇಳಿದರು.

- Advertisement -

Latest Posts

Don't Miss