Tuesday, July 15, 2025

Latest Posts

ಜಯಾ V/S ಸರೋಜಾ ತಮಿಳುನಾಡಿಗೆ CM ಆಗ್ಬೇಕಿತ್ತು? – CM ಚಾನ್ಸ್ ಮಿಸ್ ಹೇಗಾಯ್ತು?

- Advertisement -

ಕನ್ನಡದ ಲೇಡಿ ಸೂಪರ್ ಸ್ಟಾರ್ ಬಿ.ಸರೋಜಾ ದೇವಿ ಅವರು ಫೀಕ್ ಟೈಮ್ ಅಲ್ಲಿ ಸಾಕಷ್ಟು ಬ್ಯುಸಿ ಇರ್ತಾ ಇದ್ದರು. ತಮಿಳು ಚಿತ್ರರಂಗದಲ್ಲಿಯೇ ಹೆಚ್ಚಾಗಿಯೇ ಬ್ಯುಸಿ ಇರ್ತಾ ಇದ್ದರು. ಒಂದಲ್ಲ…ಎರಡಲ್ಲ. ನಾಲ್ಕು ನಾಲ್ಕು ಶಿಫ್ಟ್ ಅಲ್ಲಿಯೇ ಕೆಲಸ ಮಾಡ್ತಿದ್ದರು. ತಮಿಳು ಭಾಷೆ ಅಲ್ಲದೆ ತೆಲುಗು ಭಾಷೆಯ ಸಿನಿಮಾಗಳಲ್ಲೂ ಹೆಸರಾಗಿದ್ದರು. ತಮಿಳಿನಲ್ಲಿ ಇವರನ್ನ ‘ಕನ್ನಡದ ಗಿಳಿ’ ಅಂತಲೇ ಕರೆಯುತ್ತಿದ್ದರು. ಆ ಮಟ್ಟಿನ ಕ್ರೇಜ್ ಅನ್ನ ಬಿ.ಸರೋಜಾ ದೇವಿ ಹುಟ್ಟುಹಾಕಿದ್ದರು.

ಬಿ ಸರೋಜಾ ದೇವಿ ತಮಿಳು ನಾಡು ಸಿ.ಎಂ. ಆಗೋರಿದ್ರಾ? ಈ ಒಂದು ಪ್ರಶ್ನೆ ಇದ್ದೇ ಇದೆ. ಕಾರಣ, ಬಿ.ಸರೋಜಾ ದೇವಿ ಕ್ರೇಜ್ ತಮಿಳುನಾಡಿನಲ್ಲಿ ಅಷ್ಟಿತ್ತು. ತಮ್ಮ ಚಿತ್ರಗಳ ಮೂಲಕವೇ ಬಿ.ಸರೋಜಾ ದೇವಿ ಅಲ್ಲಿ ಒಳ್ಳೆ ಹೆಸರು ಮಾಡಿದ್ದರು. ಒಂದಲ್ಲ.. ಎರಡಲ್ಲ ನಾಲ್ಕು ನಾಲ್ಕು ಶಿಫ್ಟ್ ಅಲ್ಲಿಯೇ ಸಿನಿಮಾ ಕೆಲಸ ಕೂಡ ಮಾಡ್ತಿದ್ದರು. ಜನರಮನದಲ್ಲೂ ಖಾಯಂ ಆಗಿಯೇ ಜಾಗ ಮಾಡಿಕೊಂಡಿದ್ದರು.

ಬಿ.ಸರೋಜಾ ದೇವಿ ಅವರು ಎಂಜಿಆರ್ ಆತ್ಮೀಯರು ಆಗಿದ್ದರು. ಹಾಗೇನೆ ಎಂಜಿಆರ್ ಬಳಿಕ ಸಿ.ಎಂ.ಆಗೋರ ಪಟ್ಟಿಯಲ್ಲಿ ಎಂಜಿಆರ್ ಪತ್ನಿ ಜಾನಕಿ, ಜಯಲಲಿತಾ ಹಾಗೂ ಬಿ.ಸರೋಜಾ ದೇವಿ ಹೆಸರೂ ಇತ್ತು ಅಂತಲೂ ಹೇಳ್ತಾರೆ. ಆದರೆ, ಜಯಲಲಿತಾ ಅವರ ಹೆಸರು ಬಂದಾಗ ಇದಕ್ಕೆ AIDMK ಪಕ್ಷದಿಂದ ವಿರೋಧ ವ್ಯಕ್ತವಾಗಿತ್ತು. ವಿಧಾನಸಭೆಯಲ್ಲಿ ಸೀರೆ ಎಳೆದು ಅವಮಾನ ಮಾಡಿದ್ದು ಇದೆ. ಅದಕ್ಕೇನೆ ಜಯಲಲಿತಾ ಶಪಥ ಮಾಡಿಯೇ ಮುಂದೆ ತಮಿಳುನಾಡು ಸಿಎಂ ಆದ್ರು. ಆದರೆ, ಈ ಎಲ್ಲ ಬೆಳವಣಿಗೆಯ ಆಗಿದ್ದರಿಂದಲೇ ಬಿ.ಸರೋಜಾ ದೇವಿ ಅವರು ಎಂಜಿಆರ್ ಬಳಿಕ ಸಿಎಂ ಆಗೋ ಅವಕಾಶ ಮಿಸ್ ಆಯಿತು ಅನ್ನೋ ಮಾತು ಇದೆ.

ಆದರೆ, ಎಂಜಿಆರ್ ನಿಧನದ ಬಳಿಕ ಇಲ್ಲಿ ಜಯಲಲಿತಾ ಅವರೂ ಸಿಎಂ ಆಗಲಿಲ್ಲ. ಬಿ.ಸರೋಜಾ ದೇವಿ ಅವರೂ ಸಿಎಂ ಆಗ್ಲಿಲ್ಲ. ಬದಲಾಗಿ ಎಂಜಿಆರ್ ಪತ್ನಿ ಜಾನಕಿ ಅವರೇ ಸಿಎಂ ಆದರು. ಅದು ಕೇವಲ 23 ದಿನ ಅನ್ನೊ ಮಾಹಿತಿ ಸಿಗುತ್ತದೆ. ಆದರೆ, ಎಂಜಿಆರ್ ಬಳಿಕ ಸಿಎಂ ಆಗೋರ ಪಟ್ಟಿಯಲ್ಲಿ ಸರೋಜಾ ದೇವಿ ಅವರ ಹೆಸರು ಇರಲೇ ಇಲ್ಲ. ಇದೆಲ್ಲ ಸುಳ್ಳು ಸುದ್ದಿ ಅನ್ನೋ ಮಾತು ಇದೆ.

ಕನ್ನಡದ ಹಿರಿಯ ಪತ್ರಕರ್ತರು ಇದನ್ನೆ ಹೇಳ್ತಾರೆ. ಬಿ.ಸರೋಜಾದೇವಿ ಅವರು ಕಾಂಗ್ರೆಸ್ ಅಲ್ವೇ? ಅವರು ಇಲ್ಲಿಯೇ ಹೆಚ್ಚು ಗುರುತಿಸಿಕೊಂಡರು. ಹಾಗಾಗಿಯೇ ಎಂಜಿಆರ್ ಬಳಿಕ ಸಿಎಂ ಆಗೋರ ಪಟ್ಟಿಯಲ್ಲಿ ಬಿ.ಸರೋಜಾ ದೇವಿ ಹೆಸರು ಇರಲಿಲ್ಲ. ಈ ಸುದ್ದಿನೇ ಸುಳ್ಳು ಅನ್ನೋದನ್ನೆ ಹೇಳ್ತಾರೆ. ಸರೋಜಾ ದೇವಿ ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಅಂತ ಬಂದ್ವು ಅಲ್ವೇ. ಅದನ್ನ ಇವರಿಗೇನೆ ಕೊಡ್ಬೇಕು ಅಂತಲೇ ತಮಿಳುನಾಡು ಸರ್ಕಾರ ಹೇಳಿತ್ತು. ಒಟ್ಟಾರೆ, ಬಿ.ಸರೋಜಾ ದೇವಿ ಅವರು ಸಿನಿಮಾರಂಗದಲ್ಲೂ ಗುರುತಿಸಿಕೊಂಡಿದ್ದರು. ರಾಜಕೀಯದಲ್ಲೂ ಇವರ ಹೆಸರು ಒಂದು ಹಂತಕ್ಕೆ ಕೇಳಿ ಬರ್ತಾ ಇತ್ತು ಅಂತಲೇ ಹೇಳಬಹುದು.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss