Friday, July 18, 2025

Latest Posts

Spiritual: ಧನ ಸಂಪತ್ತು ವೃದ್ಧಿಗಾಗಿ ಲಕ್ಷ್ಮೀ-ವಿಷ್ಣುವನ್ನು ಈ ರೀತಿ ಪೂಜಿಸಿ..

- Advertisement -

Spiritual: ಚಾಣಕ್ಯರು ಜೀವನ ನಡೆಸುವ ಬಗ್ಗೆ, ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬಗ್ಗೆ ಹೀಗೆ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯರು ನಾವು ಪೂಜೆ ಮಾಡುವ ಸಂದರ್ಭದಲ್ಲಿ ಕೆಲ ಕೆಲಸಗಳನ್ನು ಮಾಡಿದರೆ, ಅತೀ ಉತ್ತಮ ಅಂದಿದ್ದಾರೆ. ಹಾಗಾದ್ರೆ ನಾವು ಯಾವ ಕೆಲಸವನ್ನು ಯಾಕಾಗಿ ಮಾಡಬೇಕು ಎಂದು ತಿಳಿಯೋಣ ಬನ್ನಿ..

ಧನ ಸಂಪತ್ತು ವೃದ್ಧಿಗಾಗಿ ನಾವು ಬರೀ ಲಕ್ಷ್ಮೀ ದೇವಿಯನ್ನು ಮಾತ್ರ ಪೂಜಿಸುತ್ತೇವೆ. ಆದರೆ ಲಕ್ಷ್ಮೀಯ ಜತೆ ನಾವು ವಿಷ್ಣುವನ್ನು ಕೂಡ ಪೂಜಿಸಬೇಕು ಅಂತಾರೆ ಚಾಣಕ್ಯರು.

ನಾವೆಲ್ಲ ಶ್ರೀಮಂತರಾಗಬೇಕು ಎಂದು ದೀಪಾವಳಿ ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸುತ್ತೇವೆ. ಪ್ರತೀ ಶುಕ್ರವಾರ ಭಕ್ತಿಯಿಂದ ಪೂಜೆ ಮಾಡುತ್ತೇವೆ. ಆದರೆ ದುಡ್ಡಿದ್ದರೆ ಮಾತ್ರ ಜೀವನ ನಡೆಸಲು ಸಾಧ್ಯವಿಲ್ಲ. ದುಡ್ಡಿನ ಜತೆ ನೆಮ್ಮದಿ, ಪ್ರೀತಿ, ಕಾಳಜಿ ಎಲ್ಲವೂ ಸಿಗುವುದು ಮುಖ್ಯ.

ಹಾಗಾಗಿ ಇವೆಲ್ಲವೂ ಸಿಗಬೇಕು, ಜೀವನ ಚೆನ್ನಾಗಿರಬೇಕು ಅಂದ್ರೆ ನಾವು ಲಕ್ಷ್ಮೀ ಮತ್ತು ನಾರಾಯಣ ಇಬ್ಬರನ್ನೂ ಪೂಜಿಸಬೇಕು. ಇವರಿಬ್ಬರ ಪೂಜೆ ಮಾಡುವಾಗ ಬಿಳಿ, ಗುಲಾಬಿ, ಹಳದಿ, ಕೆಂಪು ಬಣ್ಣದ ಹೂವನ್ನು ಅರ್ಪಿಸಬೇಕು. ಇವೆಲ್ಲವೂ ಅರ್ಪಿಸಲು ಸಾಧ್ಯವಿಲ್ಲ ಎಂದಲ್ಲಿ, ಭಕ್ತಿಯಿಂದ ಪೂಜೆ ಮಾಡಿದರೂ ಸಾಕು.

ಇನ್ನು ನೀವು ವಿಷ್ಣು ಪೂಜೆ ಮಾಡುವ ಸಂದರ್ಭದಲ್ಲಿ ಶ್ರೀಗಂಧವನ್ನು ಬಳಸಬೇಕು. ಏಕೆಂದರೆ ವಿಷ್ಣು ಶ್ರೀಗಂಧ ಪ್ರಿಯ ಮತ್ತು ತುಳಸಿ ಪ್ರಿಯ. ಹಾಗಾಗಿ ವಿಷ್ಣು ಪೂಜೆಯಲ್ಲಿ ಇವೆರಡು ಇರುವುದು ತುಂಬ ಮುಖ್ಯ.

ಇನ್ನು ನಿಮಗೆ ವಿಷ್ಣು ಸಹಸ್ರನಾಮ ಬಂದಲ್ಲಿ ಅದನ್ನು ಹೇಳಿ. ಇಲ್ಲವಾದಲ್ಲಿ ರಾಮನಾಮ ಜಪಿಸಿದರೂ ಉತ್ತಮವೇ. ಒಟ್ಟಾರೆಯಾಗಿ ಲಕ್ಷ್ಮೀಯ ಜತೆ ವಿಷ್ಣುವನ್ನು ಪೂಜಿಸಿದ್ದಲ್ಲಿ, ಅವರಿಬ್ಬರ ಕೃಪಾಕಟಾಕ್ಷವಿದ್ದಲ್ಲಿ, ಜೀವನ ಅತ್ಯುತ್ತಮವಾಗಿರುತ್ತದೆ ಅಂತಾರೆ ಚಾಣಕ್ಯರು.

- Advertisement -

Latest Posts

Don't Miss