ಮಗುವಿನ ಫೋಟೋ ಶೇರ್ ಮಾಡಿದ ಹಾರ್ದಿಕ್: ಕೊರೊನಾದಿಂದ ಅತೀ ಹೆಚ್ಚು ಸಾವಾದ ರಾಷ್ಟ್ರಗಳಲ್ಲಿ ಭಾರತವೂ ಒಂದು..!

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 57,117 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಇದರೊಂದಿಗೆ ದೇಶದ ಕೋವಿಡ್ ಸೋಂಕಿತರ ಸಂಖ್ಯೆ 16,95,988 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಇದುವರೆಗೆ 10,94,374 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನೂ 5,65,103 ಸಕ್ರಿಯ ಪ್ರಕರಣಗಳಿವೆ. ಶುಕ್ರವಾರ ಒಂದೇ ದಿನ ದೇಶದಲ್ಲಿ 764 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದ ಮಾರ್ಚ್ ನಿಂದ ದೇಶದಲ್ಲಿ ಒಟ್ಟು 36,511 ಮಂದಿ ಸೋಂಕಿತರು ಮರಣ ಹೊಂದಿದ್ದಾರೆ.

ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಈಗ ಭಾರತವು ಇಟಲಿಯನ್ನೇ ಮೀರಿಸಿದೆ. ದೇಶದಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 36 ಸಾವಿರ ದಾಟಿದೆ. ಹೀಗಾಗಿ, ಜಗತ್ತಿನಲ್ಲೇ ಅತಿ ಹೆಚ್ಚು ಸಾವನ್ನು ಕಂಡಿರುವ ದೇಶಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನಕ್ಕೆ ತಲುಪಿದೆ.

ಭಾರತ ಚೀನಾ ಗಡಿಯಲ್ಲಿ ಘರ್ಷಣೆಯಾದ ಬಳಿಕ ಚೀನಾದ ಆ್ಯಪ್, ಪ್ರಾಡಕ್ಟ್ ಎಲ್ಲವನ್ನೂ ಬ್ಯಾನ್ ಮಾಡಿದ ಭಾರತ, ಇದೀಗ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಟಿವಿಯನ್ನ ಕೂಡ ನಿರ್ಬಂಧಿಸಿದೆ.

ಈ ಆದೇಶದ ಪ್ರಕಾರ ಇನ್ನು ಮುಂದೆ 36 ಸೆಂ.ಮೀ ಒಳಗಿನ ಸ್ಕ್ರೀನ್‌ನಿಂದ ಆರಂಭಿಸಿ 105 ಸೆಂ.ಮೀಗಿಂತ ದೊಡ್ಡ ಅಳತೆಯಿ ಟಿವಿ ಸೆಟ್‌ಗಳ ಆಮದಿಗೆ ನಿರ್ಬಂಧ ಹೇರಲಾಗಿದೆ. ಇದರ ಜೊತೆ 63 ಸೆಂ.ಮೀ ವರೆಗಿನ ಎಲ್‌ಸಿಡಿ ಟಿವಿ ಸೆಟ್‌ಗಳ ಆಮದಿಗೆ ಕೂಡ ನಿರ್ಬಂಧ ಹೇರಿದೆ.

ಅಲಾಸ್ಕದ ಸೊಲ್ಡೋಟ್ನಾ ವಿಮಾನ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದ್ದು, ಅಲಾಸ್ಕದ ಜನ ಪ್ರತಿನಿಧಿ ಗೆರಿ ಕ್ನಪ್ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಲಾಸ್ಕದಲ್ಲಿ ಇಂದು ಮುಂಜಾನೆ ವಿನಾಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ವೇಳೆ ಅಲಾಸ್ಕದ ಜನ ಪ್ರತಿನಿಧಿ ಸೇರಿ 7 ಮಂದಿ ಮೃತಪಟ್ಟಿದ್ದಾರೆ.

ಎರಡು ದಿನದ ಹಿಂದೆ ಗಂಡು ಮಗುವಿನ ತಂದೆಯಾಗಿರುವ ಕ್ರಿಕೇಟಿಗ ಹಾರ್ದಿಕ್ ಪಾಂಡ್ಯಾ, ತನ್ನ ಮಗುವಿನ ಜೊತೆ ತೆಗಿಸಿಕೊಂಡ ಫೋಟೋವನ್ನ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ದೇವರ ಆಶೀರ್ವಾದ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

About The Author