Spiritual: ಸಾವಿನ ಬಳಿಕ ಹೆಣವನ್ನು ಸ್ಮಶಾನಕ್ಕೆ ಹೋಗಿ ಅಂತ್ಯಸಂಸ್ಕಾರ ಮಾಡುವುದು ಹಿಂದೂ ಧರ್ಮದ ಪದ್ಧತಿ. ಆದರೆ ಈ ಪದ್ಧತಿ ಅನುಸರಿಸುವಾಗ, ಕೆಲ ನಿಯಮಗಳನ್ನು ಅನುಸರಿಸಬೇಕು. ಅದರಲ್ಲೂ ಸ್ಮಶಾನಕ್ಕೆ ಹೆಣ್ಣು ಮಕ್ಕಳು ಹೋಗಬಾರದು ಅನ್ನೋ ಪದ್ಧತಿ ಇದೆ. ಹಾಗಾದ್ರೆ ಯಾಕೆ ಹೆಣ್ಣು ಮಕ್ಕಳು ಸ್ಮಶಾನಕ್ಕೆ ಹೋಗಬಾರದು ಅಂತಾರೆ ಅಂತ ತಿಳಿಯೋಣ ಬನ್ನಿ..
ಮನೆಯಲ್ಲಿ ಯಾರಾದರೂ ಇರಬೇಕು: ವ್ಯಕ್ತಿ ಸತ್ತ ಬಳಿಕ ಆತನ ಆತ್ಮ ಮನೆಯಲ್ಲಿಯೇ ಇರುತ್ತದೆ. ಅಷ್ಟು ಬೇಗ ಆತ್ಮ ಮನೆ ಬಿಟ್ಟು ಹೋಗಲು ಇಚ್ಛಿಸುವುದಿಲ್ಲ. ಆತನ ಸಂಬಂಧಿಕರ ಬಳಿಯೇ ಇರಲು ಇಚ್ಛಿಸುತ್ತದೆ. ಹಾಗಾಗಿಯೇ 13ನೇ ದಿನದವರೆಗೂ ಆತ್ಮ ಮನೆಯಲ್ಲಿಯೇ ಇರುತ್ತದೆ. 13ನೇ ದಿನ ಕಾರ್ಯ ಮಾಡಿದ ಬಳಿಕ ಆತ್ಮ ಹೋಗುತ್ತದೆ ಎನ್ನಲಾಗಿದೆ. ಹಾಗಾಗಿಯೇ ಕಾರ್ಯವನ್ನು ಪದ್ಧತಿ ಪ್ರಕಾರವಾಗಿ, ಆತ್ಮಕ್ಕೆ ಶಾಂತಿ ಸಿಗುವ ರೀತಿ ಮಾಡಬೇಕು.
ಇನ್ನು ಮನೆಯಲ್ಲಿ ಯಾರಾದರೂ ಇರಬೇಕು. ಸಾವಿನ ಮನೆ ಖಾಲಿ ಬಿಡಬಾರದು ಎಂಬ ಕಾರಣಕ್ಕೆ ಹೆಣ್ಣು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗಲಾಗುತ್ತದೆ.
ಮಹಿಳೆಯರು ಸೂಕ್ಷ್ಮ ಸ್ವಭಾವದವರು: ಮಹಿಳೆಯರು ಸೂಕ್ಷ್ಮ ಸ್ವಭಾವದವರು. ಹೀಗಾಗಿ ಅವರು ಪುರುಷರ ರೀತಿ ದುಃಖವನ್ನು ತಡೆಯಲು ಅಸಾಧ್ಯ. ಮಾನಸಿಕವಾಗಿ, ದೈಹಿಕವಾಗಿ ಅವರು ಕುಂದುಹೋಗುತ್ತಾರೆ. ಈ ಕಾರಣಕ್ಕೆ ಮಹಿಳೆಯರನ್ನು ಸ್ಮಶಾನಕ್ಕೆ ಕರೆದ“ಯ್ಯಲಾಗುವುದಿಲ್ಲ.
ನಕಾರಾತ್ಮಕ ಶಕ್ತಿಗಳ ಪ್ರಭಾವ ಬೀರುತ್ತದೆ: ಮಹಿಳೆಯರ ಮೇಲೆ ನಕಾರಾತ್ಮಕ ಪರಿಣಾಮ ಬಹುಬೇಗ ಬೀರುವ ಸಂಬಂಧ, ಮಹಿಳೆಯರು ಸ್ಮಶಾನಕ್ಕೆ ಹೋಗಬಾರದು ಅಂತಾ ಹೇಳಲಾಗುತ್ತದೆ. ಏಕೆಂದರೆ ಈ ಮುಂಚೆಯೇ ಹೇಳಿದಂತೆ ಮಹಿಳೆಯರ ಮನಸ್ಸು ಸೂಕ್ಷ್ಮವಾಗಿರುತ್ತದೆ. ಮತ್ತು ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳ ಮೇಲೆ ನಕಾರಾತ್ಮಕ ಶಕ್ತಿ ಹೆಚ್ಚು ಪರಿಣಾಮ ಬೀರುತ್ತದೆ.