Hubli: ಹುಬ್ಬಳ್ಳಿ: ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ ನಡವಳಿಕೆ ಬದಲಾವಣೆ ಆಗಿದ್ದು ಸತ್ಯ. ಒಂದು ಪಕ್ಷದ ಬ್ಯಾನರ್ ಅಡಿ ಹೋಗಿ ಕೂರುತಿದ್ದಾರೆ ಎಂದು ಕಿಡಿಕಾರಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಓರ್ವ ವ್ಯಕ್ತಿ ಪರವಾಗಿ ಮಾತ್ರ ಮಾತನಾಡುತ್ತಿದ್ದಾರೆ. ನಮ್ಮ ಸಮಾಜದವರ ಮೇಲೆ ಅನೇಕ ಕಡೆ ದಬ್ಬಾಳಿಕೆ ದೌರ್ಜನ್ಯ ನಡೆದಿವೆ. ಅಲ್ಲಿ ಹೋಗಿ ಯಾರಿಗೂ ಸಾಂತ್ವಾನ ಹೇಳಿಲ್ಲಾ. ಅವರು ಪ್ರಚಾರ ಪ್ರಿಯ ಆಗಿದ್ದಾರೆ. ಮುಂಜಾನೆ ಎದ್ರೆ ಬರಿ ಪೇಸಬುಕ್ ಲೈವ್ ನಲ್ಲಿರುತ್ತಾರೆ ಎಂದರು.
ಮುಂದೆ ಏನು ಮಾಡಬೇಕು ಅನ್ನೋ ಬಗ್ಗೆ ಹಿರಿಯರ ಜೊತೆ ಚರ್ಚೆ ಮಾಡಿದ್ದೇವೆ. ಪೀಠದ ರಕ್ಷಣೆ ಮಾಡೋ ಜವಾಬ್ದಾರಿಯನ್ನು ಸಮಾಜ ನನಗೆ ನೀಡಿದೆ. ಸ್ವಾಮೀಜಿ ಮಠವನ್ನು ತ್ಯಾಗ ಮಾಡಿ ಹೋರಾಟ ಮಾಡಿದ್ದೇನೆ ಅಂತ ಅನೇಕ ಬಾರಿ ಹೇಳಿದ್ದರು. ಮಠಕ್ಕೆ ಗೇಟ್, ಬಾಗಿಲು ಇರಲಿಲ್ಲಾ. ಹೀಗಾಗಿ ಅಲ್ಲಿ ಅನೈತಿಕ ಚಟುವಟಿಕೆ ನಡೆದಿದ್ದವು. ಹೀಗಾಗಿ ಮಠದ ರಕ್ಷಣೆಗಾಗಿ ಗೇಟ್ ಮಾಡಿಸಲಾಗಿತ್ತು. ಸ್ವಾಮೀಜಿ ಬಂದಾಗ ಕೀಲಿ ತಗೆಯುವಂತೆ ಸಿಬ್ಬಂದಿಗೆ ಹೇಳಲಾಗಿತ್ತು. ಸ್ವಾಮೀಜಿ ಕೋಣೆಗೆ ಅವರೇ ಬೀಗ ಹಾಕಿಕೊಂಡಿದ್ದಾರೆ. ಅದರ ಬೀಗದ ಬಗ್ಗೆ ನಾವು ಎಂದಿಗೂ ಕೇಳಿಲ್ಲಾ. ಸಮಾಜದ ಹಿರಿಯರಿಗೆ ಹೇಳಿಯೇ ಬೀಗ ಹಾಕಲಾಗಿತ್ತು ಎಂದು ಅವರು ಹೇಳಿದರು.
ಬೀಗ ಹಾಕಿದ್ದನ್ನು ಸ್ವಾಮೀಜಿ ವಿನಾಕಾರಣ ಗೊಂದಲ ಮಾಡುತ್ತಿದ್ದಾರೆ. ನನ್ನ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಸ್ವಾಮೀಜಿ ಎರಡು ವರ್ಷದಿಂದ ನನ್ನ ಸಂಪರ್ಕದಲ್ಲಿಲ್ಲಾ. ಏಳು ಜನರನ್ನು ಸ್ವಾಮೀಜಿ ಮಠಕ್ಕೆ ಕಳುಹಿಸಿದ್ದಾರೆ. ಏಳು ಜನ ಸೇರಿ ಬೀಗ ಮುರದಿದ್ದಾರೆ. ನಾನು ಟ್ರಸ್ಟ್ ಅಧ್ಯಕ್ಷ ನಾಗಿದ್ದೇನೆ. ತಾವು ಬರೋದಾಗಿ ಸ್ವಾಮೀಜಿ ನನಗೆ ಪೋನ್ ಕರೆ ಕೂಡಾ ಮಾಡಿಲ್ಲಾ ಎಂದರು.