Hubli News: ಹುಬ್ಬಳ್ಳಿಯಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಿಎಂ ಸಿದ್ದರಾಮಯ್ಯ ಮಾಸ್ ಲೀಡರ್. ಇನ್ನು 2 ವರ್ಷ 10 ತಿಂಗಳು ಸಿದ್ದರಾಮಯ್ಯ ಅವರೇ ಸಿಎಂ ಇರ್ತಾರೆ. ರಾಜ್ಯದಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ ಎಂದಿದ್ದಾರೆ.
ಅಬ್ದುಲ್ ಕಲಾಂ ಅವರು ಸೋನಿಯಾ ಗಾಂಧೀ ಅವರಿಗೆ ಪ್ರಧಾನಮಂತ್ರಿ ಆಗೋಕೆ ತಿಳ್ಸಿದ್ರು. ಖರ್ಗೆ ಅವರ ಮೇಲೆ ಅಪಾರ ಗೌರವ ಇರೋದಕ್ಕೆ ಎಐಸಿಸಿ ಅಧ್ಯಕ್ಷ ಮಾಡಿದ್ದು. ಮೋಹನ್ ಭಾಗವತ್ ಅವರೇ 75 ವರ್ಷಕ್ಕೆ ಕೆಳಗೆ ಇಳಿಬೇಕು ಅಂತ ಹೇಳಿದ್ರು. ಅದೇ ಕಾರಣಕ್ಕೆ ಸೆಪ್ಟೆಂಬರ್ ನಲ್ಲಿ ಮೋದಿ ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಬಹುದು. ಮೋದಿಯವರು ಸತ್ಯವಂತರು, ವಿಚಾರವಂತರು ಅಂತ ಅನ್ಕೊಂಡಿದ್ದೆನೆ ಅದಕ್ಕೆ ಅಂದುಕೊಂಡೆ. ಮಲ್ಲಿಕಾರ್ಜುನ ಖರ್ಗೆ ಪ್ರಧಾನಮಂತ್ರಿ ಆಗ್ತಾರೆ ಅನ್ನೋದು ನನ್ನ ಅನಿಸಿಕೆ ಎಂದು ರಾಯರೆಡ್ಡಿ ಹೇಳಿದ್ದಾರೆ.
ಶಾಸಕರಿಗೆ ಅನುದಾನ ವಿಚಾರದ ಬಗ್ಗೆ ಮಾತನಾಡಿರುವ ರಾಯರೆಡ್ಡಿ, ಬಿಜೆಪಿ ಅವರ ಆರೋಪಕ್ಕೆ ತಲೆ ಬುಡ ಇಲ್ಲಾ. ಅನುದಾನದಲ್ಲಿ ತಾರತಮ್ಯ ಮಾಡ್ತಾರೆ ಅಂತ ಆರೋಪ ಮಾಡ್ತಾರೆ. ಅಭಿವೃದ್ಧಿಗಾಗಿ 83 ಸಾವಿರ ಕೋಟಿ ಇಟ್ಟಿದ್ದೇವೆ. ಹಿಂದೆ ಇಷ್ಟು ಹಣವನ್ನ ಬಿಜೆಪಿ ಸರ್ಕಾರದಲ್ಲೂ ಇಲ್ಲಾ. ವಿಶೇಷ ಅನುದಾನ ಕೊಡೋಕೆ ಬಜೆಟ್ ಮೀಟಿಂಗ್ ನಲ್ಲಿ ಮಾತಾಡ್ತಾ ಇದ್ರು ಸಿಎಂ. 50 ಕೋಟಿ ಕೊಡೋಣ ಅನ್ಕೊಂಡ್ವಿ. ಎಲ್ಲಾರಿಗೂ ಮುಖ್ಯಮಂತ್ರಿ 50 ಕೋಟಿ ಕೊಡಬೇಕು ಅಂತಾನೆ ಇತ್ತು. ಆದರೆ ಹನ್ನೊಂದುವರೆ ಸಾವಿರ ಕೋಟಿ ಆಗ್ತಿತ್ತು. ಎಂಟು ಸಾವಿರ ಮಾಡಿಕೊಳ್ಳೋಣ ಅಂತ ಆಯ್ತು. ಬಿಬಿಎಂಪಿಯಲ್ಲಿ 28 ಶಾಸಕರಿದ್ದಾರೆ. ಹೈದ್ರಾಬಾದ್ ಕರ್ನಾಟಕದಲ್ಲೂ ಕಾಂಗ್ರೆಸ್ ಶಾಸಕರಿಗೆ 25 ಕೋಟಿ ಕೊಡುವ ಮಾತಾಗಿತ್ತು. ನಾನು ಬೆಂಬಲ ನೀಡಿದ್ದೆ. ಎಲ್ಲೂ ನಾವು ತಾರತಮ್ಯ ಮಾಡಿಲ್ಲಾ ಎಂದು ರಾಯರೆಡ್ಡಿ ಹೇಳಿದ್ದಾರೆ.
ಸುರ್ಜೆವಾಲಾ ಅವರು ಹಣ ಕೊಡ್ತಾರೆ ಅನ್ನೋದು ಸುಳ್ಳು. ನಾನು ಮುಖ್ಯಮಂತ್ರಿಗಳಿಗೆ ಪತ್ರ ಸಿದ್ದಪಡಿಸಿಕೊಟ್ಟಿದ್ದೇನೆ. ಪ್ರತಿಯೊಬ್ಬ ಶಾಸಕರೊಂದಿಗೂ ಮುಖ್ಯಮಂತ್ರಿಗಳು ಮಾತನಾಡ್ತಾರೆ. ಈ ಹಣವನ್ನ ನಾವು ಬಜೆಟ್ ನಲ್ಲಿಟ್ಟು ಪಾಸ್ ಮಾಡಿಕೊಂಡಿದ್ದೇವೆ. ವಿರೋಧ ಪಕ್ಷದವರಿಗೂ ನಾವು ಕೊಡ್ತೇವೆ. ಕಾಂಗ್ರೆಸ್ ಶಾಸಕರಿಗೂ ಕಡಿಮೆ ಕೊಡ್ತಾ ಇದ್ದೇವೆ. 224 ವಿಧಾನ ಸಭಾ ಕ್ಷೇತ್ರದಲ್ಲಿ 28 ಬಿಬಿಎಂಪಿ ತೆಗೆದು ಬಿಡ್ತೇವೆ. ರಾಜ್ಯದಲ್ಲಿ 196 ಶಾಸಕರಿಗೆ ಕೊಡೋದಿದೆ. ಹೈದ್ರಾಬಾದ್ ಕರ್ನಾಟಕ ಶಾಸಕರನ್ನ ಹೊರತು ಪಡಿಸಿ 101 ಶಾಸಕರಿಗೆ 50 ಕೋಟಿ. ಹಣದ ಕೊರತೆ ರಾಜ್ಯದಲ್ಲಿ ಇಲ್ಲಾ ಅನ್ನೋದು ಸ್ಪಷ್ಟ ಪಡಿಸ್ತಾ ಇದ್ದೇನೆ ಎಂದು ರಾಯರೆಡ್ಡಿ ಹೇಳಿದ್ದಾರೆ.