Hubli News: ಹುಬ್ಬಳ್ಳಿ: ಕೆಲವೇ ತಿಂಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಧಾನಮಂತ್ರಿ ಆಗಬಹುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಿದ್ದಾರೆ. ವಿಜಯೇಂದ್ರ ಸೇರಿ ಬಿಜೆಪಿ ನಾಯಕರು ಮಾತನಾಡಿದ್ದಾರೆ. ಅವರು ಓರ್ವ ಹಿರಿಯ ನಾಯಕರಿದ್ದಾರೆ. ಯಾರು ಅವರನ್ನು ಮ್ಯಾಚ್ ಮಾಡಲು ಆಗಲ್ಲಾ.ಕೆಲವೇ ತಿಂಗಳಲ್ಲಿ ಅವರು ಪ್ರಧಾನಮಂತ್ರಿ ಆಗಬಹುದು ಎಂದು ರಾಯರೆಡ್ಡಿ ಹೇಳಿದ್ದಾರೆ.
ನವಂಬರ್ ನಲ್ಲಿ ಮೋದಿ ಅವರಿಗೆ 75 ವರ್ಷ ಆಗುತ್ತೆ. ಆರ್ ಎಸ್ ಎಸ್ ಹೇಳಿದಂತೆ ಮೋದಿ ಕೆಳಗಿಳಿದ್ರೆ ಅವರು ಅಧಿಕಾರದಿಂದ ಕೆಳಗಿಳಿಯಬಹುದು. ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತ ಇಲ್ಲಾ. ಚಂದ್ರಬಾಬುನಾಯ್ಡು, ನಿತೀಶ್ ಕುಮಾರ್ ಬೆಂಬಲ ಹಿಂಪಡೆದ್ರೆ ಸರ್ಕಾರ ಬೀಳಬಹುದು. ಆಗ ಕಾಂಗ್ರೆಸ್ ಅಧಿಕಾರಕ್ಕೆ ಬರೋ ಅವಕಾಶ ಇದೆ. ರಾಹುಲ್ ಗಾಂಧಿ ಗೆ ಮೊದಲ ಅವಕಾಶ ಇದೆ. ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆದರು ಅಚ್ಚರಿಯಲ್ಲಾ
ನನ್ನ ಮನಸು ಹೇಳುತ್ತಿದೆ ಎಂದು ರಾಯರೆಡ್ಡಿ ತಮ್ಮ ಮನಸ್ಸಿನ ಮಾತು ಹೇಳಿದ್ದಾರೆ.
ಅವರು ಪ್ರಧಾನಿ ಆಗ್ತಾರೆ ಅಂತ ಬಿಜೆಪಿಯವರ ವ್ಯಂಗ್ಯ ನಿಜವಾಗುತ್ತೆ. ಅವರು ಪವರಪುಲ್ ರಾಷ್ಟ್ರೀಯ ಅಧ್ಯಕ್ಷ ರಾಗಿದ್ದಾರೆ.ರಾಜ್ಯದಲ್ಲಿ ಸೆಪ್ಟೆಂಬರ್ ಯಾವುದೇ ಕ್ರಾಂತಿ ಆಗಲ್ಲಾ. ರಾಜ್ಯದಲ್ಲಿ ಯಾವುದೇ ಬದಲಾವಣೆ ಇಲ್ಲಾ. ಅವರೇ ಎರಡು ವರ್ಷ 10 ತಿಂಗಳ ಸಿಎಂ ಆಗಿ ಇರ್ತಾರೆ ಎಂದು ಬಸವರಾಜ ರಾಯ ರೆಡ್ಡಿ ಹೇಳಿದ್ದಾರೆ.