Tuesday, July 22, 2025

Latest Posts

ಉ.ಕನ್ನಡದ ಹಳಿಯಾಳ ಅಂತಾರಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ಸಜ್ಜಾದ ಜನಸ್ನೇಹಿ ರಾಜು ಪೆಜೋಳ್ಳಿ ಆ್ಯಂಡ್ ಟೀಮ್

- Advertisement -

Haliyal: ಆ ವ್ಯಕ್ತಿ ಭಾರತೀಯ ಸೈನ್ಯದಲ್ಲಿ ‌ಕರ್ತವ್ಯ ನಿರ್ವಹಿಸಿತ್ತಿದ್ದರು ಕೂಡ ಸಾಮಾಜಿಕ ಕಳಕಳಿ ಗಡಿಯಲ್ಲಿ ಸೇವೆ ಸಲ್ಲಿಸಿ ಎಲ್ಲರಂತೆ ಇವರು ಕೂಡಾ ಸುಮ್ಮನಿರಬಹುದಿತ್ತು. ಆದರೆ ಈ ವ್ಯಕ್ತಿ ಇವರೆಲ್ಲರಿಗಿಂತ ಭಿನ್ನವಾಗಿ‌ ನಿಲ್ಲುತ್ತಾರೆ. ಕ್ರೀಡಾ ಜಗತ್ತಿನಲ್ಲಿ ನಮ್ಮ ದೇಶದ ಹಾಗೂ ನಾಡಿನ ಧ್ವಜ ಒಲಂಪಿಕ್ ಮಟ್ಟದಲ್ಲಿ ಹೆಚ್ಚು ಜನರು ಹಾರಿಸಬೇಕು ಎನ್ನುವುದುರ ಜತೆಗೆ ಸದೃಢ ಯುವ ಸಮಾಜ ನಿರ್ಮಾಣಕ್ಕೆ ಇವರು ಟೊಂಕ ಕಟ್ಟಿ ನಿಂತಿದ್ದು, ಈಗ ದೇಶವೆ ಹಳಿಯಾಳ ತಾಲ್ಲೂಕಿನ ಕಡೆ ತಿರುಗಿ ನೋಡುವ ಮಹತ್ತರ ನಿರ್ಧಾರ ಕೈಗೊಂಡಿದ್ದಾರೆ.

ಉ.ಕನ್ನಡದ ಹಳಿಯಾಳ ಅಂತಾರಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ಸಜ್ಜಾದ ಜನಸ್ನೇಹಿ ರಾಜು ಪೆಜೋಳ್ಳಿ ಆ್ಯಂಡ್ ಟೀಮ್

ಮೊದಲ ಬಹುಮಾನ ಮಹಿಂದ್ರಾ ಥಾರ್ ಮತ್ತು ಟ್ರ್ಯಾಕ್ಟರ್ ಸೇರಿ 4 ಕೋಟಿ ವೆಚ್ಚದಲ್ಲಿ ಆಕರ್ಷಕ ಬಹುಮಾನಗಳು ಘೋಷಣೆ

ಧಾರವಾಡದ – ಅಳ್ನಾವಾರ ಮತ್ತು ಉ.ಕನ್ನಡದ ಹಳಿಯಾಳ ಭಾಗದ ಕ್ರೀಡಾಪಟುಗಳಿಗೆ ಭರವಸೆ ಬೆಳಕಾದ ಸೈನಿಕ ರಾಜು ಪೆಜೋಳ್ಳಿ

ಒಂದು ಕಡೆ ಮಾಜಿ ಪೈಲವಾನರ ಸನ್ಮಾನ್ ….ಮತ್ತೊಂದು ಕಡೆ ರಾಷ್ಟ್ರ ಮಟ್ಟದಲ್ಲಿ ಕುಸ್ತಿಯಲ್ಲಿ ಸಾಧನೆ ಮಾಡಿದ ಯುವಕ ಯುವತಿರಿಗೆ ಶಾಲು ಹೊದಿಸಿ ಗೌರವಿಸುತ್ತಿರುವ ಕ್ರೀಡಾಪಟುಗಳು ಬಾಳಿನ ಬೆಳಕಾಗಿರುವ ನಿಸ್ವಾರ್ಥಿ ಹಾಗೂ ಜನಸ್ನೇಹಿ ಸೈನಿಕ ರಾಜು ಪೆಜೋಳ್ಳಿ… ಈ ಎಲ್ಲ ಕ್ಷಣಗಳಿಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಪುರಭವನ ಸಾಕ್ಷಿಯಾಗಿತ್ತು.

ಪುರ ಭವನ ಮುಂಭಾಗದಲ್ಲಿನ ಶಿವಾಜಿ ಮೂರ್ತಿಗೆ ಹೀಗೆ ಮಾಲಾರ್ಪಣೆ ಮಾಡುತ್ತಿರುವ ಪೂರ್ಣ ಹೆಸರು ರಾಜು ಪೆಜೋಳ್ಳಿ ಮೂಲತಃ ಧಾರವಾಡದ ಜಿಲ್ಲೆಯ ಅಳ್ನಾವಾರ ಮೂಲದವರು. ಹದಿನೇಳು ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.‌ ಅಂದಹಾಗೆ ಧಾರವಾಡದ ಅಳ್ನಾವಾರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಎರಡು ಜಿಲ್ಲೆಯ ಗಡಿ ತಾಲ್ಲೂಕುಗಳ ಕ್ರೀಡಾಪಟುಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನಮ್ಮ ದೇಶದ ಪಾರಂಪರಿಕ ಕ್ರೀಡೇ ಎಂದೇ ಖ್ಯಾತಿ ಹೊಂದಿರುವ ಕುಸ್ತಿ ಪಟ್ಟಗಳು ಸೇರಿ ಹಾಕಿ ಇನ್ನಿತರ ಎಲ್ಲ ಕ್ರೀಡಾಪಟುಗಳು ಸಹಾಹಸ್ತ ಅಷ್ಟೇ ಅಲ್ಲ, ಅವರ ನೋವು ಸಂಕಷ್ಟಗಳನ್ನು ದುರು ಮಾಡುತ್ತಾ ಸಾಧನೆಗೆ ಸದಾ ಸಿದ್ದಾರಾಗಿ ನಿಂತಿದ್ದಾರೆ. ಸದೃಢ ಯುವ ಸಮಾಜ ಕನಸು ಹೊಂದಿರುವ ಇವರು ಈ ಹಿಂದೆ ಧಾರವಾಡ ಜಿಲ್ಲೆಯ ಅಳ್ನಾವಾರದಲ್ಲಿ ಯಾವುದೇ ಸರ್ಕಾರದ ಸಹಾಯ ಪಡೆಯದೇ ಕುಸ್ತಿ ಪಂದ್ಯಾವಳಿಯನ್ನು ಅಯೋಜನೆ ಮಾಡಿ ಸರ್ಕಾರಕ್ಕೆ ಮಾದರಿಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ಸರ್ಕಾರ ರಾಜ್ಯದಲ್ಲಿ ಕುಸ್ತಿ ಪಂದ್ಯಗಳನ್ನು ಆಡಿಸುವುದನ್ನೇ ಮರೆಯುತ್ತಿರವ ವಿಷಯ ಅರಿತು, ತಾವೇ ತಮ್ಮ‌ ಸ್ವತಃ ಹಣದಲ್ಲಿ ಕುಸ್ತಿ ಉಳಿವಿಗಾಗಿ ಶ್ರಮಿಸುವ ಮೂಲಕ‌ ಇತರರಿಗೆ ಮಾದರಿಯಾಗಿದ್ದಾರೆ. ಜತೆಗೆ ಮಾಜಿ ಪೈಲವಾನರ್ ಕನಸು ಆಸೆ ಒಂದೆಯಾಗಿದ್ದು, ನಮ್ಮ ದೇಶ ಸೇರಿ‌ ನಾಡಿನ‌ ಬಾವುಟವನ್ನು ಒಲಂಪಿಕ್ ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ‌ ಎತ್ತಿಹಿಡಿಯುವ ಕೈಗಳು ಸಂಖ್ಯೆ ಹೆಚ್ಚಾಗಬೇಕು ಅನ್ನುವುದೇ ಇವರ ಬಹು ದೊಡ್ಡ ಕನಸಾಗಿದೆ. ಅಳ್ನಾವಾರ ಸೇರಿ ಹಳಿಯಾಳ ತಾಲ್ಲೂಕಿನ ಕ್ರೀಡಾಪಟುಗಳು ಇವರ ಬಗ್ಗೆ ಹೇಳಿದ್ದು ಹೀಗೆ…

ಇನ್ನೂ ವೃತ್ತಿಯಲ್ಲಿ ಸೈನಿಕರಾದರೂ ಕೂಡಾ ರಾಜು ಎಂ ಪಿಯವರು ಸದೃಢ ಯುವ ಸಮಾಜ ಕಟ್ಟಲು ಮುಂದಾಗಿದ್ದು, ಈಗ ದೇಶವೇ ಹಳಿಯಾಳ ಕಡೆ ತಿರುಗಿ ನೋಡು ಮಹತ್ತರ ಘೋಷಣೆಯನ್ನು ಮಾಡಿದ್ದಾರೆ. ಬರುವ2026ನೇ ಜನೆವರಿ ತಿಂಗಳಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಯೋಜನೆ ಮಾಡಿ ಘೋಷಣೆ ಮಾಡಿಯನ್ನು ಮಾಜಿ ಹಾಲಿ ಪೈಲ್ವಾನರ ನೇತೃತ್ವದಲ್ಲಿ ಘೋಷಣೆ ಮಾಡಿದ್ದಾರೆ. ದೇಶದ ಇತಿಹಾಸದಲ್ಲಿಯೇ ಮೊದಲನೇ ಬಹುಮಾನ‌ ಮಹಿಂದ್ರಾ ಥಾರ ಮತ್ತು ಟ್ರ್ಯಾಕ್ಟರ್ ಬಹುಮಾನದೊಂದಿ ಹತ್ತು ರಾಯಲ್ ಎನ್ಫೀಲ್ಡ್ ಬುಲೆಟ್ ಹಾಗೂ ಹತ್ತು ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಸೇರಿ ಹಲವು ಆಕರ್ಷಕ ಬಹುಮಾನಗಳನ್ನು ಈ ಪಂದ್ಯವಾಳಿಯಲ್ಲಿ ಗೆದ್ದವರಿಗೆ ನೀಡಲು ನಿರ್ಧಾರ ಮಾಡಿದ್ದಾರೆ. ಇದು ಮಣ್ಣಿನ‌ ಅಖಾಡ ಕುಸ್ತಿಯಾಗಿದ್ದು, ಸುಮಾರು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಯಾರೊಬ್ಬರ ಸಹಾಯ ಇಲ್ಲದೇ ಸೈನಿಕ ಜನಸ್ನೇಹಿ ರಾಜು ಪೆಜೋಳ್ಳಿಯವರು ಸುಮಾರು ನಾಲ್ಕು ಕೋಟಿ ರೂಪಾಯಿ ಹಣವನ್ನು ಕೇವಲ ಬಹುಮಾನಗಳುಗೆ ಖರ್ಚು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಮ್ಮ ದೇಶಿಯ ಕ್ರೀಡೆ ನಶಿಸಿ ಹೋಗುತ್ತಿದೆ. ಆಳು ಸರ್ಕಾರಗಳು ಈ ಕ್ರೀಡೆ ಆಯೋಜನೆ ಮಾಡೋವುದನ್ನು ಸಂಪೂರ್ಣವಾಗಿ ನಿಲ್ಲಿಸಿವೆ.‌ ಮಾಜಿ ಪೈಲ್ವಾನರಗಳ ಸಂಕಷ್ಟ ಕೇಳಲು ಸರ್ಕಾರಕ್ಕೆ ಸಮಯ ಇಲ್ಲದಂತಾಗಿದೆ. ಈ ಎಲ್ಲ ಸಂಗತಿಗಳನ್ನು ಅರಿತು ಈಗ ಈ ಕ್ರೀಡೆ ಉಳಿವಿಗಾಗಿ ಶ್ರಮಿಸುತ್ತಿದ್ದೇನೆ.‌ ಅಂತರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ಸುಮಾರು ಎರಡು ಲಕ್ಷ ಜನ ಸೇರು ನಿರೀಕ್ಷೆ ಇದೆ.‌ ದೇಶದ ವಿವಿಧ ರಾಜ್ಯ ಸೇರಿ ಹೊರ ದೇಶದ ಕುಸ್ತಿಪಟ್ಟುಗಳು ಈ ಬಾರಿ ಭಾಗವಹಿಸುತ್ತಾರೆ ಎಂದು ಜನಸ್ನೇಹಿ ಸೈನಿಕ ರಾಜು ಪೆಜೊಳ್ಳಿ ಮಾಹಿತಿ ನೀಡಿದ್ದಾರೆ.

ದೇಶೀಯ ಪಾರಂಪರಿಕ ಕ್ರೀಡೆಯಾಗಿರುವ ಕುಸ್ತಿ ಉಳಿಸುವುದರ ಜತೆಗೆ ಅಳ್ನಾವಾರ ಹಾಗೂ ಹಳಿಯಾಳ ತಾಲ್ಲೂಕಿನ ಕ್ರೀಡಾಪಟುಗಳ ಸಾಧನೆಗೆ ಜನಸ್ನೇಹಿ ರಾಜು ಪೆಜೋಳ್ಳಿಯವರು ಟೊಂಕಕಟ್ಟಿ ನಿಂತಿದ್ದು, 2026 ಜನೆವರಿ ತಿಂಗಳಲ್ಲಿ ಅಂತರಾಷ್ಟ್ರ ಮಟ್ಟದ ಮಣ್ಣಿನ ಅಖಾಡ ಕುಸ್ತಿಗೆ ಈಗ ಸಿದ್ಧವಾಗುತ್ತಿದ್ದಾರೆ. ಹದಿನೇಳು ವರ್ಷ ಗಡಿಯಲ್ಲಿ ಸೇವೆ ಸಲ್ಲಿಸಿಸುತ್ತಿರುವ ಇವರು ಈಗ ಸದೃಢ ಯುವ ಸಮಾಜ ಸಂಕಲ್ಪದೊಂದಿಗೆ ಮಹತ್ತರ ಹೆಜ್ಜೆ ಇಟ್ಟಿರುವುದು ಇಲ್ಲಿನ ಕ್ರೀಡಾಪಟ್ಟುಗಳಿಗೆ ಹೊಸ ಭರವಸೆ ಮೂಡಿಸಿದೆ.

- Advertisement -

Latest Posts

Don't Miss