Sandalwood: ನಟಿ ಮಹತಿ ಭಟ್ ತಮ್ಮ ನಟನಾ ಜರ್ನಿ ಬಗ್ಗೆ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಕ್ರಶ್ ಬಗ್ಗೆಯೂ ಹೇಳಿದ್ದಾರೆ. ಹಾಗಾದ್ರೆ ಮಹತಿಯ ಕ್ರಶ್ ಯಾರು ಅಂತಾ ಅವರ ಬಾಯಲ್ಲೇ ಕೇಳಿ.
ಮಹತಿ ಸದ್ಯ ಎಂಜಿನಿಯರಿಂಗ್ ಓದುತ್ತಿದ್ದು, ಅಲ್ಲೂ ಕೂಡ ಶಿಕ್ಷಕ ವೃಂದದವರು ಮಹತಿಯ ಅಭಿನಯ ಮತ್ತು ಓದು ಎರಡನ್ನೂ ನೋಡಿ ಖುಷಿ ಪಡುತ್ತಿದ್ದಾರಂತೆ. ಏನಮ್ಮಾ ಎರಡನ್ನೂ ಎಷ್ಟು ಚೆನ್ನಾಗಿ ನಿಭಾಯಿಸುತ್ತೀಯಾ, ನೋಡಿದ್ರೆ ಖುಷಿಯಾಗುತ್ತೆ ಅಂತಾರೆ ಅಂತಾ ಮಹತಿ ಹೇಳುತ್ತಾರೆ.
ಮಹತಿ ಪಿಯುಸಿನಲ್ಲಿರುವಾಗಲೇ ಆಕೆಗೆ ಮದುವೆ ಪ್ರಪೋಸಲ್ ಬಂದಿತ್ತಂತೆ. ನನಗೆ ಡೈರೆಕ್ಟ್ ಆಗಿ ಬಂದು ಯಾರೂ ಪ್ರಪೋಸ್ ಮಾಡುವ ಧೈರ್ಯ ಮಾಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಡಿಎಮ್ ಮಾಡಿ, ಪ್ರಪೋಸ್ ಮಾಡಿದ್ದಾರೆ. ಜಾತಕ ಎಲ್ಲಾ ಕಳಿಸುತ್ತಾರೆ, ಸೋ ಫನ್ನಿ ಅಂತಾ ನಗೆಬೀರಿದ್ದಾರೆ ಮಹತಿ. ಇನ್ನು ನಿಮ್ಮ ಕ್ರಶ್ ಯಾರು ಅಂತಾ ಕೇಳಿದಾಗ ನಾಚಿ ನೀರಾದ ಮಹತಿ, ತಮ್ಮ ಕ್ರಶ್ ಹೆಸರು ಹೇಳಿದ್ದಾರೆ. ಅದ್ಯಾರು ಅಂತಾ ತಿಳಿಯಲು ಈ ವೀಡಿಯೋ ನೋಡಿ.




