Sandalwood: ಸಾಕಪ್ಪಾ ಸಾಕು ಅನಿಸುತ್ತೆ! ಮಹತಿ WHAT NEXT?

Sandalwood: ತೀರ್ಥಹಳ್ಳಿಯ ಕೋಣಂದೂರು ಎಂಬಲ್ಲಿನ ಹುಡುಗಿ ಮಹತಿ. ಡ್ರಾಮಾ ಜೂನಿಯರ್ಸ್ ಮೂಲಕ ಎಲ್ಲರ ಮನಗೆದ್ದಿದ್ದ ಈ ಚಿಕ್ಕ ಕೂಸು, ಇದೀಗ ರೇಣುಕಾ ಯಲ್ಲಮ್ಮ ಸಿರಿಯಲ್‌ನಲ್ಲಿ ಮುಖ್ಯ ಪಾತ್ರಧಾರಿ ರೇಣುಕೆಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಮಹತಿ ತಮ್ಮ ಸಿನಿಪಯಣದ ಬಗ್ಗೆ ಹಲವು ಮಾಹಿತಿ ಹಂಚಿಕ“ಂಡಿದ್ದಾರೆ.

ಮಹತಿಯ ತಾಯಿ ತೆಲುಗು ಮಾತೃಭಾಷಿ ಮತ್ತು ಅಪ್ಪ ಕನ್ನಡಿಗರು. ಹಾಗಾಗಿ ಮಹತಿಗೆ ತೆಲುಗು ಮ್ಯಾನೇಜೇಬಲ್ ಆಗಿ ಮಾತನಾಡೋಕ್ಕೆ ಬರತ್ತೆ. ಆದರೆ ನನಗೆ ಕನ್ನಡವೇ ಇಷ್ಟ. ನಾನು ಕನ್ನಡತಿ, ಇಲ್ಲೇ ಹುಟ್‌ಟಿ ಬೆಳೆದಿದ್ದರಿಂದ ನನಗೆ ಕನ್ನಡವೇ ಹೆಚ್ಚು ಸ್ಪಷ್ಟವಾಗಿ ಬರುತ್ತದೆ ಎಂದಿದ್ದಾರೆ.

ಇನ್ನು ಮಹತಿಗೆ ಓದು ಮತ್ತು ಶೂಟಿಂಗ್ ಎರಡರ ಮಧ್ಯೆಯೂ ಬ್ಯಾಲೆನ್ಸ್ ಮಾಡುವಾಗ ಕೆಲವು ಬಾರಿ ಸಾಕಪ್ಪಾ ಸಾಕು ಅನ್ನಿಸಲು ಶುರುವಾಗುತ್ತದೆ. ಎಕ್ಸಾಮ್ ಮುಗಿದರೆ, ಅಬ್ಬಾ ಎನ್ನಿಸಿಬಿಡುತ್ತದೆ. ಶೂಟ್ ಆರಾಮಾಗಿ ಮಾಡಬಹುದು ಅಂತಾ. ಅಷ್ಟು ಸಾಕಪ್ಪಾ ಸಾಕು ಅನ್ನಿಸುತ್ತದೆ ಅಂತಾರೆ ಮಹತಿ. ಮಹತಿಯ ಸಂಪೂರ್ಣ ಸಂದರ್ಶನ ನೋಡಲು ಈ ವೀಡಿಯೋ ನೋಡಿ.

About The Author